AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಹೋಗಿ ಬೌಂಡರಿ ಲೈನ್​ನಲ್ಲಿ ನಿಲ್ಲು: ರೋಹಿತ್ ಶರ್ಮಾರ ಖಡಕ್ ಸೂಚನೆಗೆ ತಬ್ಬಿಬ್ಬಾದ ಪಾಂಡ್ಯ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​) 8ನೇ ಪಂದ್ಯದಲ್ಲಿ ಕೆಲ ಕಾಲ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ಇರುವಾಗ ಎಂಬುದು ವಿಶೇಷ. ಈ ವೇಳೆ ಹಾರ್ದಿಕ್ ಪಾಂಡ್ಯರನ್ನು ಬೌಂಡರಿ ಲೈನ್​ಗೆ ಕಳುಹಿಸುವ ಮೂಲಕ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ.

TV9 Web
| Edited By: |

Updated on: Mar 28, 2024 | 6:55 AM

Share
IPL 2024: ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವು 31 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಮುಂಬೈ ತಂಡದ ನಾಯಕನ ನಿರ್ಧಾರವನ್ನು ಸನ್​​ರೈಸರ್ಸ್​ ಬ್ಯಾಟರ್​ಗಳ ಪವರ್​ಪ್ಲೇನಲ್ಲಿ ತಲೆಕೆಳಗಾಗಿಸಿದ್ದರು.

1 / 7
ಸ್ಪೋಟಕ ಆರಂಭ ಒದಗಿಸಿದ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 3 ಸಿಕ್ಸ್​ ಹಾಗೂ 9 ಫೋರ್​ಗಳೊಂದಿಗೆ 62 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ ಕೇವಲ 23 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್​ನೊಂದಿಗೆ 63 ರನ್ ಚಚ್ಚಿದರು. ಪರಿಣಾಮ ಪವರ್​ಪ್ಲೇನಲ್ಲಿ ಎಸ್​ಆರ್​ಹೆಚ್ ತಂಡವು 81 ರನ್ ಕಲೆಹಾಕಿತು.

2 / 7
ಅಲ್ಲದೆ 8 ಓವರ್​ ಮುಗಿಯುವ ಮುನ್ನವೇ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಕೋರ್ 100 ರ ಗಡಿದಾಟಿತು. ಇತ್ತ ಹೈದರಾಬಾದ್ ಬ್ಯಾಟರ್​ಗಳ ಅಬ್ಬರದಿಂದ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕಂಗೆಟ್ಟು ನಿಂತರು. ಇದರ ಬೆನ್ನಲ್ಲೇ ಕೋಚ್ ಕಡೆಯಿಂದ ಫೀಲ್ಡಿಂಗ್ ಸೆಟ್​ ಮಾಡುವಂತೆ ರೋಹಿತ್ ಶರ್ಮಾಗೆ ಸಂದೇಶ ಬಂದಿದೆ.

3 / 7
ಹೀಗಾಗಿ ರೋಹಿತ್ ಶರ್ಮಾ ಫೀಲ್ಡಿಂಗ್​ನಲ್ಲಿ ಕೆಲ ಬದಲಾವಣೆ ಮಾಡಿದ್ದರು. ಅದರಲ್ಲೂ ಫ್ರಂಟ್ ಫೀಲ್ಡಿಂಗ್​ನಲ್ಲಿ ನಿಂತು ಮುಂಬೈ ಇಂಡಿಯನ್ಸ್ ತಂಡವನ್ನು ನಿಯಂತ್ರಿಸುತ್ತಿದ್ದ ಹಾರ್ದಿಕ್ ಪಾಂಡ್ಯರನ್ನು ಹಿಟ್​ಮ್ಯಾನ್ ಬೌಂಡರಿ ಲೈನ್​ನಲ್ಲಿ ಹೋಗಿ ನಿಲ್ಲುವಂತೆ ಸೂಚಿಸಿದರು.

4 / 7
ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್​ನಲ್ಲಿ ನಿಲ್ಲಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪಂದ್ಯದ ನಡುವೆ ಸಿಕ್ಕ ಅವಕಾಶದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನೇ ಬೌಂಡರಿ ಲೈನ್​ಗೆ ಕಳುಹಿಸಿದ್ದಾರೆ.

5 / 7
ರೋಹಿತ್ ಶರ್ಮಾ ಬೌಂಡರಿ ಲೈನ್​​ಗೆ ಹೋಗು ಎಂದು ಹೇಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ತಬ್ಬಿಬ್ಬಾದಂತೆ ಕಂಡು ಬಂದರು. ಅಲ್ಲದೆ ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಈ ವೇಳೆ ಬೌಂಡರಿ ಲೈನ್​ನತ್ತ ಬೊಟ್ಟು ಮಾಡಿದ ರೋಹಿತ್ ಶರ್ಮಾ, ಅತ್ತ ಕಡೆ ಹೋಗಿ ನಿಲ್ಲು ಎಂದು ಸೂಚಿಸಿದರು. ಇದೀಗ ಹೊಸ ನಾಯಕನ ಮುಂದೆ ಹಳೆಯ ನಾಯಕನ ದರ್ಬಾರ್​ ಸಖತ್ ವೈರಲ್ ಆಗಿದ್ದು, ರೋಹಿತ್ ಶರ್ಮಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

6 / 7
ಇನ್ನು ಈ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ ನೀಡಿದ 278 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 31 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

7 / 7
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?

ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ

'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'

ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ

ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ