IPL 2024: ಮುಂಬೈ ತಂಡಕ್ಕೆ ಬಂತು ಆನೆಬಲ; ಸೂರ್ಯ ಪೂರ್ಣ ಫಿಟ್..!

|

Updated on: Apr 03, 2024 | 9:50 PM

IPL 2024, Suryakumar Yadav: ಇಂಜುರಿಯಿಂದಾಗಿ ತಂಡದಿಂದ ದೂರ ಉಳಿದಿದ್ದ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪೂರ್ಣ ಫಿಟ್ ಎಂದು ಎನ್​ಸಿಎ ವರದಿ ನೀಡಿದೆ. ಇದು ಮುಂಬೈ ತಂಡಕ್ಕೆ ಆನೆಬಲ ತಂದಿದೆ. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಉಪಸ್ಥಿತಿ ಮುಂಬೈ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

1 / 6
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್‌ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೆ ಇದ್ದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಈ ನಡುವೆ ತಂಡಕ್ಕೆ ಶುಭ ಸುದ್ದಿಯೊಂದು ಬಂದಿದೆ.

2 / 6
ಅದೆನೆಂದರೆ ಇಂಜುರಿಯಿಂದಾಗಿ ತಂಡದಿಂದ ದೂರ ಉಳಿದಿದ್ದ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪೂರ್ಣ ಫಿಟ್ ಎಂದು ಎನ್​ಸಿಎ ವರದಿ ನೀಡಿದೆ. ಇದು ಮುಂಬೈ ತಂಡಕ್ಕೆ ಆನೆಬಲ ತಂದಿದೆ. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಉಪಸ್ಥಿತಿ ಮುಂಬೈ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

3 / 6
ಸದ್ಯ ಪೂರ್ಣ ಫಿಟ್ ಆಗಿರುವ ಸೂರ್ಯ ಇದೇ ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲ್ಲಿರುವ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ ಈ ಪಂದ್ಯ ಮುಂಬೈನ ತವರು ನೆಲವಾದ ವಾಂಖೆಡೆಯಲ್ಲಿ ನಡೆಯುವುದರಿಂದ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈಗೆ ಗೆಲುವಿನ ಲಯಕ್ಕೆ ಮರಳಲು ಸುವರ್ಣಾವಕಾಶವಾಗಿದೆ.

4 / 6
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದರು. ಈ ಪ್ರವಾಸದಲ್ಲಿ ಸೂರ್ಯಕುಮಾರ್ ಭಾರತ ಟಿ20 ತಂಡದ ನಾಯಕರೂ ಆಗಿದ್ದರು. ಇದಾದ ಬಳಿಕ ಸೂರ್ಯಕುಮಾರ್ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯ ಎನ್‌ಸಿಎಯಲ್ಲಿ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿದ್ದರು.

5 / 6
ಸೂರ್ಯ ಐಪಿಎಲ್‌ನಲ್ಲಿ 139 ಪಂದ್ಯಗಳ 124 ಇನ್ನಿಂಗ್ಸ್‌ಗಳಲ್ಲಿ 31.85 ಸರಾಸರಿ ಮತ್ತು 143.32 ಸ್ಟ್ರೈಕ್ ರೇಟ್‌ನಲ್ಲಿ 3249 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 21 ಅರ್ಧ ಶತಕಗಳು ಸೇರಿವೆ.

6 / 6
ಮುಂಬೈ ಇಂಡಿಯನ್ಸ್‌ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಲ್ಯೂಕ್ ವುಡ್, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ನಮನ್ ಧೀರ್, ಅನ್ಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.