AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ರಿಂಕು ಸಿಂಗ್​ಗೆ KKR ತಂಡದ ಕ್ಯಾಪ್ಟನ್ ಪಟ್ಟ?

IPL 2025 KKR: ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ರಿಂಕು ಸಿಂಗ್​ಗೆ 13 ಕೋಟಿ ರೂ. ನೀಡಿದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್​ಗೆ ತಲಾ 12 ಕೋಟಿ ರೂ. ನೀಡಿದೆ. ಇನ್ನು ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್​ಗೆ ತಲಾ 4 ಕೋಟಿ ರೂ. ನೀಡಲಾಗಿದೆ.

ಝಾಹಿರ್ ಯೂಸುಫ್
|

Updated on: Nov 13, 2024 | 2:10 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುವವರು ಯಾರು? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯ ಕೇಳಿ ಬರುತ್ತಿರುವ ಉತ್ತರ ರಿಂಕು ಸಿಂಗ್. ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೆಕೆಆರ್ ಫ್ರಾಂಚೈಸಿ ರಿಂಕು ಅವರನ್ನು ಬರೋಬ್ಬರಿ 13 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ.

1 / 5
ಇತ್ತ ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಈ ಸಲ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದು, ಹೀಗಾಗಿ ಕೆಕೆಆರ್ ತಂಡದಿಂದ ಹೊರಬಂದಿದ್ದಾರೆ. ಹೀಗಾಗಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಿದೆ.

2 / 5
ಇದೀಗ ನಾಯಕತ್ವದ ರೇಸ್​ನಲ್ಲಿ ರಿಂಕು ಸಿಂಗ್ ಹೆಸರು ಕೇಳಿ ಬರುತ್ತಿದ್ದು, ಇದಾಗ್ಯೂ ಕೆಕೆಆರ್ ಅಧಿಕೃತವಾಗಿ ಘೋಷಿಸಿಲ್ಲ. ಒಂದು ವೇಳೆ ಪೂರ್ಣ ಮೆಗಾ ಹರಾಜಿನ ಮೂಲಕ ಪರಿಪೂರ್ಣ ಆಟಗಾರ ಸಿಗದಿದ್ದರೆ, ರಿಂಕು ಸಿಂಗ್ ಅವರಿಗೆ ನಾಯಕತ್ವ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

3 / 5
ಮತ್ತೊಂದೆಡೆ ತಂಡದಲ್ಲಿ ಅನುಭವಿ ಆಟಗಾರರಾಗಿ ಸುನಿಲ್ ನರೈನ್, ಆ್ಯಂಡ್ರೆ ರಸೆಲ್ ಸೇರಿದಂತೆ ಅನೇಕರಿದ್ದಾರೆ. ಹೀಗಾಗಿ ಇವರ ಮಾರ್ಗದರ್ಶನದಲ್ಲಿ ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ರಿಂಕು ಸಿಂಗ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

4 / 5
ಅಂದಹಾಗೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ರಿಂಕು ಸಿಂಗ್​ಗೆ 13 ಕೋಟಿ ರೂ. ನೀಡಿದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್​ಗೆ ತಲಾ 12 ಕೋಟಿ ರೂ. ನೀಡಿದೆ. ಇನ್ನು ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್​ಗೆ ತಲಾ 4 ಕೋಟಿ ರೂ. ನೀಡಲಾಗಿದೆ.

5 / 5