- Kannada News Photo gallery Cricket photos IPL 2025: Mumbai Indians Replace Injured Lizard Williams with Corbin Bosch
IPL 2025: ಮುಂಬೈ ತಂಡದಿಂದ ಆಫ್ರಿಕಾ ವೇಗಿ ಔಟ್; ಬದಲಿಯಾಗಿ ಬಂದಿದ್ಯಾರು?
IPL 2025: 2025ರ ಐಪಿಎಲ್ ಮಾರ್ಚ್ 22ರಿಂದ ಆರಂಭವಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಲಿಜರ್ಡ್ ವಿಲಿಯಮ್ಸ್ ಗಾಯಗೊಂಡಿದ್ದರಿಂದ, ಅವರ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡ ಸೇರಿಸಿಕೊಂಡಿದೆ. ಬಾಷ್ ಅವರು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬೈ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
Updated on: Mar 13, 2025 | 7:46 PM

2025 ರ ಐಪಿಎಲ್ ಇದೇ ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಎಂದಿನಂತೆ ಒಟ್ಟು 10 ತಂಡಗಳು 2 ತಿಂಗಳ ಕಾಲ ಟ್ರೋಫಿಗಾಗಿ ಸ್ಪರ್ಧಿಸಲಿವೆ. ಚಾಂಪಿಯನ್ಸ್ ಟ್ರೋಫಿ ಮುಗಿಸಿ ಬಂದಿರುವ ಟೀಂ ಇಂಡಿಯಾ ಆಟಗಾರರು ಒಬ್ಬೋಬ್ಬರಾಗಿ ತಮ್ಮ ತಮ್ಮ ಐಪಿಎಲ್ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಈ ನಡುವೆ ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ತಂಡದ ಭಾಗವಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲಿಜಾದ್ ವಿಲಿಯಮ್ಸ್ ಗಾಯದಿಂದಾಗಿ ಲೀಗ್ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಮುಂಬೈ ಇಂಡಿಯನ್ಸ್ ಮತ್ತೊಬ್ಬ ಸ್ಟಾರ್ ವೇಗಿಯನ್ನು ತಂಡಕ್ಕೆ ಸೇರಿಕೊಂಡಿದೆ.

ಲಿಜಾದ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಾಷ್ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, 86 ಟಿ20 ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಾರ್ಬಿನ್ ಈ ಹಿಂದೆ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಆದರೆ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಏತನ್ಮಧ್ಯೆ, ಮುಂಬೈ ಮಾರ್ಚ್ 23 ರಂದು 18 ನೇ ಸೀಸನ್ನ ಮೊದಲ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆದ್ದರಿಂದ, ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಜೋಫ್ರಾ ಆರ್ಚರ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮಾ, ರಿಯಾನ್ ರಿಕಲ್ಟನ್, ದೀಪಕ್ ಚಾಹರ್, ಅಲ್ಲಾ ಗಜನ್ಫರ್, ವಿಲ್ ಜಾಕ್ಸ್, ಕೆಎಲ್ ಶ್ರೀಜೀತ್, ರೀಸ್ ಟೋಪ್ಲಿ, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿ. ಸತ್ಯನಾರಾಯಣ, ಬೆವನ್ ಜೇಕಬ್ಸ್, ವಿಘ್ನೇಶ್ ಪುತ್ತೂರು, ಅರ್ಜುನ್ ತೆಂಡೂಲ್ಕರ್, ಕಾರ್ಬಿನ್ ಬಾಷ್ ಮತ್ತು ಅಶ್ವನಿ ಕುಮಾರ್.
























