AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

IPL 2025 RCB: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದೆ. ಆಡಿರುವ 11 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಆರ್​ಸಿಬಿ ಪಡೆ ಪ್ಲೇಆಫ್ ಹಂತಕ್ಕೇರುವ ಸನಿಹದಲ್ಲಿದೆ. ಇದೀಗ ಐಪಿಎಲ್ ಮುಂದೂಡಿದ್ದರಿಂದ ಆರ್​ಸಿಬಿ ತಂಡದ ನಾಲ್ವರು ಆಟಗಾರರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ.

ಝಾಹಿರ್ ಯೂಸುಫ್
|

Updated on: May 10, 2025 | 8:31 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ್ನು ಒಂದು ವಾರದವರೆಗೆ ಮುಂದೂಡಲಾಗಿದೆ. ಈ ಮುಂದೂಡುವಿಕೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೊಸ ಸಮಸ್ಯೆಯನ್ನು ಉಂಟು ಮಾಡಬಹುದು. ಏಕೆಂದರೆ ಒಂದು ವಾರದ ಬಳಿಕ ಐಪಿಎಲ್ ಮತ್ತೆ ಆಯೋಜನೆಗೊಂಡರೆ, ಕೆಲ ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ.

1 / 5
ಅದರಲ್ಲೂ ಆರ್​ಸಿಬಿ ತಂಡದ ಆಧಾರಸ್ತಂಭವೆಂದರೆ ಇಂಗ್ಲೆಂಡ್ ಆಟಗಾರರು. ಏಕೆಂದರೆ ಈ ಬಾರಿ ಆರ್​ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಒಂದು ವೇಳೆ ಐಪಿಎಲ್ ಆರಂಭ ತಡವಾದರೆ, ಮುಂದಿನ ಪಂದ್ಯಗಳಿಗೆ ಲಿಯಾಮ್ ಲಿವಿಂಗ್​ಸ್ಟೋನ್, ಜೇಕಬ್ ಬೆಥೆಲ್ ಹಾಗೂ ಫಿಲ್ ಸಾಲ್ಟ್ ಅಲಭ್ಯರಾಗುವುದು ಖಚಿತ.

2 / 5
ಏಕೆಂದರೆ ಮೇ 22 ರಿಂದ ಇಂಗ್ಲೆಂಡ್ ಹಾಗೂ ಝಿಂಬಾಬ್ವೆ ನಡುವಣ ಟೆಸ್ಟ್ ಸರಣಿ ಶುರುವಾಗಲಿದೆ. ಇದರ ಬೆನ್ನಲ್ಲೇ ಮೇ. 29 ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಕೂಡ ಆರಂಭವಾಗುತ್ತಿದೆ. ಈ ಸರಣಿಗಳಿಗೆ ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಫಿಲ್ ಸಾಲ್ಟ್ ಆಯ್ಕೆಯಾಗುವುದು ಖಚಿತ ಎನ್ನಬಹುದು.

3 / 5
ಅತ್ತ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಈಗಾಗಲೇ ವೆಸ್ಟ್ ಇಂಡೀಸ್ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಆರ್​ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದರೆ ಐಪಿಎಲ್​ ತಡವಾಗಿ ಆರಂಭವಾದರೆ, ಆರ್​ಸಿಬಿ ತಂಡದಿಂದ ರೊಮಾರಿಯೊ ಶೆಫರ್ಡ್, ಲಿಯಾಮ್ ಲಿವಿಂಗ್​ಸ್ಟೋನ್, ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಹೊರಗುಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.

4 / 5
ಈ ನಾಲ್ವರು ಪ್ರಮುಖ ಆಟಗಾರರು ಆರ್​ಸಿಬಿ ತಂಡದಿಂದ ಹೊರಗುಳಿದರೆ, ಟೀಮ್​ನಲ್ಲಿ ವಿದೇಶಿ ಆಟಗಾರರಾಗಿ ಉಳಿಯುವುದು ಸೌತ್ ಆಫ್ರಿಕಾದ ಲುಂಗಿ ಎನ್​ಗಿಡಿ, ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್​ವುಡ್, ಟಿಮ್ ಡೇವಿಡ್ ಹಾಗೂ ಶ್ರೀಲಂಕಾದ ನುವಾನ್ ತುಷಾರ ಮಾತ್ರ. ಹೀಗಾಗಿ ಕೊನೆಯ ಪಂದ್ಯಗಳಿಗೆ ಆರ್​ಸಿಬಿ ನಾಲ್ವರು ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ