IPL 2026: ಐಪಿಎಲ್ನಿಂದ ಹೊರಬಿದ್ದ 1005 ಆಟಗಾರರು..!
IPL 2026 AUCTION: ಐಪಿಎಲ್ 2026 ರ ಹರಾಜಿಗಾಗಿ ಹೆಸರು ನೀಡಿದ ಆಟಗಾರರ ಪಟ್ಟಿಯಲ್ಲಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆ್ಯಂಡ್ರೆ ರಸೆಲ್ ಹೆಸರು ಕಾಣಿಸಿಕೊಂಡಿಲ್ಲ. ರಸೆಲ್ ಐಪಿಎಲ್ಗೆ ವಿದಾಯ ಹೇಳಿದರೆ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಟೂರ್ನಿಯಿಂದ ಹೊರಗುಳಿದಿದ್ದಾರೆ.
Updated on: Dec 09, 2025 | 8:24 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಭಾಗವಾಗಿ ಇದೀಗ ರಿಜಿಸ್ಟರ್ ಆಟಗಾರರ ಶಾರ್ಟ್ ಲಿಸ್ಟ್ ರೆಡಿಯಾಗಿದೆ. ಈ ಲಿಸ್ಟ್ ನಲ್ಲಿ 1005 ಆಟಗಾರರ ಹೆಸರು ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.

ಅಂದರೆ ಐಪಿಎಲ್ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅದರಂತೆ ಇದೀಗ 350 ಆಟಗಾರರ ಪಟ್ಟಿಯನ್ನು ಹರಾಜಿಗಾಗಿ ಫೈನಲ್ ಲಿಸ್ಟ್ ಮಾಡಲಾಗಿದೆ.

ಇತ್ತ ಮಿನಿ ಹರಾಜಿಗಾಗಿ 350 ಆಟಗಾರರನ್ನು ಮಾತ್ರ ಆಯ್ಕೆ ಮಾಡಿರುವ ಕಾರಣ ಬರೋಬ್ಬರಿ 1005 ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಅದರಂತೆ ಈ ಬಾರಿಯ ಮಿನಿ ಹರಾಜಿನಲ್ಲಿ 350 ಆಟಗಾರರು ಹೆಸರುಗಳು ಮಾತ್ರ ಕಾಣಿಸಿಕೊಳ್ಳಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 16 ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿದೆ. ಒಂದು ದಿನ ಮಾತ್ರ ಜರುಗಲಿರುವ ಈ ಹರಾಜಿನಲ್ಲಿ 350 ಆಟಗಾರರ ಹೆಸರನ್ನು ಕೂಗಲಾಗುತ್ತದೆ.

ಈ 350 ಆಟಗಾರರಲ್ಲಿ ಗರಿಷ್ಠ 77 ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ದೊರೆಯಲಿದೆ. ಅಂದರೆ 10 ತಂಡಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿಯಿದ್ದು, ಹೀಗಾಗಿ ಈ ಬಾರಿ ಗರಿಷ್ಠ 77 ಆಟಗಾರರು ಮಾತ್ರ ಆಯ್ಕೆಯಾಗಲಿದ್ದಾರೆ. ಇನ್ನುಳಿದ 273 ಆಟಗಾರು ಕೂಡ ಅವಕಾಶ ವಂಚಿತರಾಗಲಿರುವುದು ಕೂಡ ಖಚಿತ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




