IPL 2023: ಐಪಿಎಲ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಟಾಪ್-5 ತಂಡಗಳಾವುವು ಗೊತ್ತಾ?
IPL 2023 Kannada: ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಟಾಪ್-6 ತಂಡಗಳ ಪಟ್ಟಿ ಈ ಕೆಳಗಿನಂತಿದೆ...
Updated on: May 14, 2023 | 10:07 PM

IPL 2023: ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಆದರೆ ಬೇರೊಂದು ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ದಾಖಲೆ ಕೂಡ ಆರ್ಸಿಬಿ ತಂಡದ ಹೆಸರಿನಲ್ಲಿಯೇ ಇದೆ.

ಹೌದು, ಐಪಿಎಲ್ನಲ್ಲಿ ಆರ್ಸಿಬಿಯನ್ನು ಹೊರತುಪಡಿಸಿ ಬೇರೆ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ದಾಖಲೆ ಆರ್ಸಿಬಿ ಹೆಸರಿನಲ್ಲಿದೆ. ಅದು ಕೂಡ 2 ಬಾರಿ ಆರ್ಸಿಬಿ ತಂಡವೇ ಬೇರೊಂದು ತಂಡವನ್ನು 60 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿರುವುದು ವಿಶೇಷ.

ಹಾಗಿದ್ರೆ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳಾವುವು ಎಂದು ನೋಡೋಣ...

1- ರಾಯಲ್ ಚಾಲೆಂಜರ್ಸ್ ಬೆಂಗಳೂರು: 2017 ರಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ತಂಡವು ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಟೀಮ್ ಕಲೆಹಾಕಿದ ಕನಿಷ್ಠ ಸ್ಕೋರ್ ಆಗಿದೆ.

2- ರಾಜಸ್ಥಾನ್ ರಾಯಲ್ಸ್: 2009 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರ್ಸಿಬಿ ತಂಡವು ಕೇವಲ 58 ರನ್ಗಳಿಗೆ ಆಲೌಟ್ ಮಾಡಿತ್ತು. ಇದು 2ನೇ ಕನಿಷ್ಠ ಸ್ಕೋರ್.

3- ರಾಜಸ್ಥಾನ್ ರಾಯಲ್ಸ್: 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರ್ಸಿಬಿ ಮತ್ತೊಮ್ಮೆ 60 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 59 ರನ್ಗಳಿಗೆ ಆಲೌಟ್ ಮಾಡಿದೆ.

4- ಡೆಲ್ಲಿ ಕ್ಯಾಪಿಟಲ್ಸ್: 2017 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಕೇವಲ 66 ರನ್ಗಳಿಗೆ ಆಲೌಟ್ ಮಾಡಿತ್ತು.

5- ಡೆಲ್ಲಿ ಕ್ಯಾಪಿಟಲ್ಸ್: 2017 ರಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 67 ರನ್ಗಳಿಗೆ ಆಲೌಟ್ ಆಗಿ ಹೀನಾಯ ಪ್ರದರ್ಶನ ನಿಡಿತ್ತು.

6- ಕೊಲ್ಕತ್ತಾ ನೈಟ್ ರೈಡರ್ಸ್: 2008 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡವು ಕೇವಲ 67 ರನ್ಗಳಿಗೆ ಆಲೌಟ್ ಆಗಿತ್ತು.
