AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ಕೇವಲ 2 ರನ್​ ಬೇಕು; ದಿಗ್ಗಜರ ಪಟ್ಟಿ ಸೇರಲಿದ್ದಾರೆ ಇಶಾನ್ ಕಿಶನ್

Ishan Kishan: ಭಾರತ-ಜಿಂಬಾಬ್ವೆ ನಡುವಿನ 2ನೇ T20 ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಅಂತರರಾಷ್ಟ್ರೀಯ T20 ಕ್ರಿಕೆಟ್‌ನಲ್ಲಿ 1,500 ರನ್‌ಗಳ ಮೈಲಿಗಲ್ಲು ದಾಟುವ ನಿರೀಕ್ಷೆಯಿದೆ. ಕೇವಲ ಎರಡು ರನ್ ಗಳಿಸಿದರೆ, ಅವರು ಈ ಸಾಧನೆ ಮಾಡಿದ 11ನೇ ಭಾರತೀಯ ಆಟಗಾರರಾಗಲಿದ್ದಾರೆ. ಈಗಾಗಲೇ ರೋಹಿತ್, ಕೊಹ್ಲಿ, ಸೂರ್ಯಕುಮಾರ್ ಸೇರಿ ಹಲವು ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

ಪೃಥ್ವಿಶಂಕರ
|

Updated on: Jul 25, 2026 | 3:24 PM

Share
ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಇಂದು ಅಂದರೆ ಜುಲೈ 25 ರಂದು ನಡೆಯಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇತ್ತ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಲಿದ್ದಾರೆ(PC-PTI).

1 / 5
ಮೇಲೆ ಹೇಳಿದಂತೆ ಎರಡನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಪ್ರಮುಖ ಮೈಲಿಗಲ್ಲು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಈ ಪಂದ್ಯದಲ್ಲಿ ಕಿಶನ್ ಎರಡು ರನ್ ಗಳಿಸಿದರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1,500  ರನ್ ಪೂರೈಸಿಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 11 ನೇ ಭಾರತೀಯ ಆಟಗಾರನೆನಿಸಿಕೊಳ್ಳಲಿದ್ದಾರೆ(PC-PTI).

2 / 5
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1,500 ಕ್ಕೂ ಹೆಚ್ಚು ರನ್ ಗಳಿಸಿದ ಇತರ ಭಾರತೀಯರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಶಿಖರ್ ಧವನ್, ಅಭಿಷೇಕ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಮತ್ತು ತಿಲಕ್ ವರ್ಮಾ ಕೂಡ 1,500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ(PC-PTI).

3 / 5
ಇದರಲ್ಲಿ ರೋಹಿತ್ ಶರ್ಮಾ ಅತ್ಯಧಿಕ ಅಂದರೆ 4,231 ರನ್ ಕಲೆ ಹಾಕಿದ್ದರೆ, ವಿರಾಟ್ ಕೊಹ್ಲಿ 4,188 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ 3,272 ರನ್ ಗಳಿಸಿದ್ದು, ಹಾರ್ದಿಕ್ ಪಾಂಡ್ಯ 2,288 ರನ್ ಗಳಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ 2,265 ರನ್ ಗಳಿಸಿದ್ದಾರೆ(PC-PTI).

4 / 5
ಶಿಖರ್ ಧವನ್ 1759 ರನ್ ಗಳಿಸಿದ್ದರೆ, ಅಭಿಷೇಕ್ ಶರ್ಮಾ 1619 ರನ್, ಮಹೇಂದ್ರ ಸಿಂಗ್ ಧೋನಿ 1617 ರನ್, ಸುರೇಶ್ ರೈನಾ 1605 ರನ್ ಗಳಿಸಿದ್ದಾರೆ. ಪ್ರಸ್ತುತ ಇಶಾನ್ ಕಿಶನ್ 1498 ರನ್ ಗಳಿಸಿದ್ದಾರೆ. ಇಶಾನ್ 53 ಪಂದ್ಯಗಳ 53 ಇನ್ನಿಂಗ್ಸ್‌ಗಳಲ್ಲಿ ಈ ರನ್ ಗಳಿಸಿದ್ದಾರೆ. ಅವರ ಸರಾಸರಿ 28.80 ಮತ್ತು ಸ್ಟ್ರೈಕ್ ರೇಟ್ 145.57 ಆಗಿದೆ. ಇದರಲ್ಲಿ 1 ಶತಕ ಮತ್ತು 11 ಅರ್ಧಶತಕಗಳು ಸೇರಿವೆ(PC-PTI).

5 / 5
Follow Us
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?

ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ

ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?

ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ

ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!

'ಪೇಪರ್ ಲೀಕ್' ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ

ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ

ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ

8ನೇ ಶತಮಾನದ ಅಪರೂಪದ 'ಹುಲಿ ವೀರಗಲ್ಲು' ಶಾಸನ ಪತ್ತೆ

ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ