Updated on:Apr 02, 2022 | 8:03 PM
ಐಪಿಎಲ್ ಸೀಸನ್ 15ರ ಮೊದಲ ಶತಕ ಮೂಡಿಬಂದಿದೆ. ಅದು ಕೂಡ ವಿದೇಶಿ ಆಟಗಾರನ ಬ್ಯಾಟ್ನಿಂದ ಎಂಬುದು ವಿಶೇಷ. ಐಪಿಎಲ್ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ಜೋಸ್ ಬಟ್ಲರ್ ಅಬ್ಬರಿಸಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಬಟ್ಲರ್ ಅಬ್ಬರವನ್ನು ತಡೆಯಲು ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಸಾಧ್ಯಾಗಿರಲಿಲ್ಲ. ಅದರಂತೆ 66 ಎಸೆತಗಳಲ್ಲಿ ಜೋಸ್ ಬಟ್ಲರ್ ಭರ್ಜರಿ ಶತಕ ಪೂರೈಸಿದರು.
ಈ ಸ್ಪೋಟಕ ಇನಿಂಗ್ಸ್ನಲ್ಲಿ ಬಟ್ಲರ್ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳು ಮೂಡಿಬಂದಿತ್ತು. ಈ ಶತಕದ ನೆರವಿನಿಂದ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ 193 ರನ್ಗಳಿಸಿತು.
ವಿಶೇಷ ಎಂದರೆ ಐಪಿಎಲ್ನಲ್ಲಿ ಇದು ಜೋಸ್ ಬಟ್ಲರ್ ಅವರ 2ನೇ ಶತಕವಾಗಿದೆ. ಇದಕ್ಕೂ ಮುನ್ನ 2021 ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ 124 ರನ್ ಬಾರಿಸಿದ್ದರು. ಇದೀಗ 100 ರನ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಎರಡು ಶತಕ ಬಾರಿಸಿದ 2ನೇ ಇಂಗ್ಲೆಂಡ್ ಆಟಗಾರ ಎಂಬ ದಾಖಲೆ ಬರೆದಿದ್ದಾ
ಇದಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರಾದ ಕೆವಿನ್ ಪೀಟರ್ಸನ್ (2012), ಬೆನ್ ಸ್ಟೋಕ್ಸ್ (2017), ಜಾನಿ ಬೈರ್ಸ್ಟೋವ್ (2019), ಬೆನ್ ಸ್ಟೋಕ್ಸ್ (2020) ಶತಕ ಬಾರಿಸಿದ್ದರು. ಇದೀಗ ಜೋಸ್ ಬಟ್ಲರ್ ಸತತವಾಗಿ ಎರಡೂ ಸೀಸನ್ನಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಎರಡು ಸೆಂಚುರಿ ಸಿಡಿಸಿದ ಇಂಗ್ಲೆಂಡ್ನ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
Published On - 5:31 pm, Sat, 2 April 22