AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka vs Namibia: ಸಿರೀಸ್​ 1-1: ನಮೀಬಿಯಾ vs ಕರ್ನಾಟಕ ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ

Karnataka vs Namibia Schedule 2023: 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಇನ್ನುಳಿದಿರುವ 3 ಪಂದ್ಯಗಳಲ್ಲಿ ಸಿರೀಸ್ ವಿನ್ನರ್ ಯಾರೆಂಬುದು ನಿರ್ಧಾರವಾಗಲಿದೆ.

TV9 Web
| Edited By: |

Updated on:Jun 05, 2023 | 3:59 PM

Share
Namibia vs Karnataka: ಕರ್ನಾಟಕ ಹಾಗೂ ನಮೀಬಿಯಾ ನಡುವಣ ಏಕದಿನ ಸರಣಿಯು ಭರದಿಂದ ಸಾಗುತ್ತಿದೆ. 5 ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ಸಮಬಲ ಸಾಧಿಸಿದೆ.

1 / 9
ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು 171 ರನ್​ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ತಂಡವು, 35.5 ಓವರ್​ಗಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತ್ತು.

2 / 9
ಇನ್ನು 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಎಲ್ಆರ್​ ಚೇತನ್ (169) ಹಾಗೂ ನಿಕಿನ್ ಜೋಸ್ (103) ಅವರ ಭರ್ಜರಿ ಶತಕದೊಂದಿಗೆ 4 ವಿಕೆಟ್ ನಷ್ಟಕ್ಕೆ 360 ರನ್ ಪೇರಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ ನಮೀಬಿಯಾ ತಂಡವು 5 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ.

3 / 9
ಇದೀಗ 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಇನ್ನುಳಿದಿರುವ 3 ಪಂದ್ಯಗಳಲ್ಲಿ ಸಿರೀಸ್ ವಿನ್ನರ್ ಯಾರೆಂಬುದು ನಿರ್ಧಾರವಾಗಲಿದೆ. ಈ ಮೂರು ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ...

4 / 9
ಜೂನ್ 7 (ಬುಧವಾರ)- 3ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನ)

5 / 9
ಜೂನ್ 9 (ಶುಕ್ರವಾರ)- 4ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನ)

6 / 9
ಜೂನ್ 11 (ಭಾನುವಾರ)- 5ನೇ ಏಕದಿನ ಪಂದ್ಯ (ಸ್ಥಳ-ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನ)

7 / 9
ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದೆ.

8 / 9
ಕರ್ನಾಟಕ ಏಕದಿನ ತಂಡ ಹೀಗಿದೆ: ರವಿಕುಮಾರ್ ಸಮರ್ಥ್ (ನಾಯಕ), ವಿಶಾಲ್ ಓನಾಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.

9 / 9

Published On - 3:57 pm, Mon, 5 June 23