5 ವರ್ಷಗಳ ಬಳಿಕ ಕೃನಾಲ್ ಪಾಂಡ್ಯಗೆ ಟೀಂ ಇಂಡಿಯಾದಲ್ಲಿ ಸ್ಥಾನ

Updated on: Aug 31, 2026 | 4:12 PM

Krunal Pandya's T20 Comeback: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಕೃನಾಲ್ ಪಾಂಡ್ಯ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ. 2021 ರಿಂದ ಹೊರಗುಳಿದಿದ್ದ ಕೃನಾಲ್, ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಪಟೇಲ್ ಬದಲಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಅವರ ಮರುಪ್ರವೇಶ ತಂಡಕ್ಕೆ ಬಲ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

1 / 6
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದ್ದು, ಈ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ. ವರದಿಯ ಪ್ರಕಾರ ಈ ಸರಣಿಗೆ ಕೆಲವು ಅಚ್ಚರಿಯ ಆಯ್ಕೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಅದರಂತೆ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು  ಈ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಬಹುದು ಎಂದು ವರದಿಯಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದ್ದು, ಈ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ. ವರದಿಯ ಪ್ರಕಾರ ಈ ಸರಣಿಗೆ ಕೆಲವು ಅಚ್ಚರಿಯ ಆಯ್ಕೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಅದರಂತೆ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಈ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಬಹುದು ಎಂದು ವರದಿಯಾಗಿದೆ.

2 / 6

ಕಳೆದ ಐದು ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ 2021 ರಲ್ಲಿ ಟೀಂ ಇಂಡಿಯಾ ಪರ ಟಿ20 ಪಂದ್ಯ ಆಡಿದ್ದರು. ಅಂದಿನಿಂದ ಕೃನಾಲ್​ಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಕೃನಾಲ್ ಐಪಿಎಲ್​ನಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದು, ಈಗ ಆಯ್ಕೆದಾರರು ಕೃನಾಲ್ ಪಾಂಡ್ಯ ಅವರ ಹೆಸರನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.

3 / 6

ಕೃನಾಲ್ ಪಾಂಡ್ಯರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿದರೆ ಅವರು ಯಾರ ಬದಲಿಗೆ ತಂಡದಲ್ಲಿ ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಮಾಹಿತಿ ಪ್ರಕಾರ, ಅಕ್ಷರ್ ಪಟೇಲ್ ಬದಲಿಗೆ ಕೃನಾಲ್​ಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟ್ಸ್‌ಮನ್ ಆಗಿ ಅಕ್ಷರ್ ಪಟೇಲ್ ಶೋಚನೀಯವಾಗಿ ವಿಫಲರಾಗಿದ್ದರು. ಹಾಗೆಯೇ ಬೌಲಿಂಗ್​ನಲ್ಲೂ ಅಕ್ಷರ್ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಇಂತಹ ಕಳಪೆ ಪ್ರದರ್ಶನದ ನಂತರ, ಆಯ್ಕೆದಾರರು ಈಗ ಕೃನಾಲ್ ಪಾಂಡ್ಯಗೆ ಅವಕಾಶ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ.

4 / 6

ಐಪಿಎಲ್ 2026 ರಲ್ಲಿ ಕೃನಾಲ್ ಪಾಂಡ್ಯ ನೀಡಿದ ಅದ್ಭುತ ಪ್ರದರ್ಶನ ಆರ್‌ಸಿಬಿ ಸತತ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಆವೃತ್ತಿಯಲ್ಲಿ 37.66 ಸರಾಸರಿಯಲ್ಲಿ 226 ರನ್ ಕಲೆಹಾಕಿದ್ದ ಕೃನಾಲ್ 14 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಅದು ಪ್ರತಿ ಓವರ್‌ಗೆ ಕೇವಲ 8.41 ರನ್‌ಗಳ ಎಕಾನಮಿಯಲ್ಲಿ. ಪಾಂಡ್ಯ ಒಬ್ಬ ಅದ್ಭುತ ಫೀಲ್ಡರ್ ಕೂಡ ಆಗಿದ್ದು, ಪವರ್‌ಪ್ಲೇಯಿಂದ ಡೆತ್ ಓವರ್‌ಗಳವರೆಗೆ ಬೌಲಿಂಗ್ ಮಾಡಬಲ್ಲರು, ಅದಕ್ಕಾಗಿಯೇ ಆಯ್ಕೆದಾರರು ಈಗ ಅವರತ್ತ ನೋಡುತ್ತಿದ್ದಾರೆ.

5 / 6

ಆದಾಗ್ಯೂ ಕೃನಾಲ್ ಪಾಂಡ್ಯ ಭಾರತ ತಂಡಕ್ಕೆ ಮರಳಿದರೆ, ಅದು ಅವರಿಗೆ ವೈಯಕ್ತಿಕವಾಗಿ ಒಳ್ಳೆಯ ಸುದ್ದಿಯಾಗಲಿದೆ. ಆದರೆ ಇದು ಆರ್‌ಸಿಬಿಗೆ ಆರ್ಥಿಕ ಹೊಡೆತವೂ ಆಗಬಹುದು. ಏಕೆಂದರೆ ಐಪಿಎಲ್ ನಿಯಮಗಳ ಪ್ರಕಾರ, ಒಂದು ಫ್ರಾಂಚೈಸಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಭಾರತೀಯ ತಂಡದಲ್ಲಿ ಆಡದ ಕ್ಯಾಪ್ಡ್ ಆಟಗಾರನನ್ನು ಕೆಲವು ಸಂದರ್ಭಗಳಲ್ಲಿ ಅನ್‌ಕ್ಯಾಪ್ಡ್ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಬಹುದು.

6 / 6

ಪ್ರಸ್ತುತ ಆರ್​ಸಿಬಿ ತಂಡದಲ್ಲಿ ಕ್ಯಾಪ್ಡ್ ಆಟಗಾರನಾಗಿ ಆಡುತ್ತಿರುವ ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ಪರ ಜುಲೈ 2021 ರಲ್ಲಿ ಆಡಿದ್ದರು. ಆದ್ದರಿಂದ, ಅವರು 2027 ರ ಆವೃತ್ತಿಗೂ ಮುನ್ನ ರಾಷ್ಟ್ರೀಯ ತಂಡಕ್ಕೆ ಹಿಂತಿರುಗದಿದ್ದರೆ, ಆರ್‌ಸಿಬಿ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಕೇವಲ 4 ಕೋಟಿ ರೂ.ಗೆ ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತದೆ. ಇದು ಕೃನಾಲ್ ಆದಾಯಕ್ಕೆ ಹೊಡೆತ ನೀಡಲಿದೆ.

Loading...
Unable to load recommendations.
Follow Us