32ನೇ ವಯಸ್ಸಿಗೆ ನಿವೃತ್ತಿ; ಯುಎಇ ಪರ ಕಣಕ್ಕಿಳಿಯಲಿರುವ ಭಾರತದ ಕ್ರಿಕೆಟಿಗ

Updated on: Jun 20, 2026 | 4:55 PM

KS Bharat's Shocking Move: ಕೆ.ಎಸ್. ಭರತ್ ಟೀಂ ಇಂಡಿಯಾದಿಂದ ನಿವೃತ್ತಿ ಪಡೆದು ಯುಎಇ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಅವಕಾಶ ವಂಚಿತರಾದ 32ರ ಹರೆಯದ ಭರತ್ ದುಬೈಗೆ ತೆರಳಿದ್ದಾರೆ. ಆದರೆ ಯುಎಇ ಪರ ಆಡಲು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಯ ನಿಯಮವಿದೆ. 2027ರ ನಂತರವಷ್ಟೇ ಭರತ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯ. ಇದು ಅವರ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆಗಿದೆ.

1 / 5
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಐಪಿಎಲ್‌ನಲ್ಲಿ ಆರ್​​ಸಿಬಿ ಪರ ಆಡಿದ್ದ ಭರತ್, ಕೇವಲ 32 ವರ್ಷ ವಯಸ್ಸಿನಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೀಂ ಇಂಡಿಯಾದಲ್ಲಿ ಅವಕಾಶಗಳು ಸಿಗದ ಹಿನ್ನಲೆಯಲ್ಲಿ ಭರತ್ ವಿದಾಯ ಹೇಳಿದ್ದರು.

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಐಪಿಎಲ್‌ನಲ್ಲಿ ಆರ್​​ಸಿಬಿ ಪರ ಆಡಿದ್ದ ಭರತ್, ಕೇವಲ 32 ವರ್ಷ ವಯಸ್ಸಿನಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೀಂ ಇಂಡಿಯಾದಲ್ಲಿ ಅವಕಾಶಗಳು ಸಿಗದ ಹಿನ್ನಲೆಯಲ್ಲಿ ಭರತ್ ವಿದಾಯ ಹೇಳಿದ್ದರು.

2 / 5

ಆದರೀಗ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೊರಟಿರುವ ಭರತ್, ದೇಶವನ್ನು ತೊರೆದಿದ್ದು ಬೇರೆ ದೇಶದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಭರತ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು, ಯುಎಇ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.

3 / 5

ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಸ್ಥಳೀಯ ಪಂದ್ಯಾವಳಿಯಲ್ಲಿ ಮೊದಲಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಭರತ್ ಅವರನ್ನು ಸ್ಟಾಲಿಯನ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಎರಡು ದಿನಗಳ ವೈಟ್ ಬಾಲ್ ಟೂರ್ನಿಯಲ್ಲಿ 7 ಪಂದ್ಯಗಳು ನಡೆಯಲಿದ್ದು, 4 ತಂಡಗಳು ಸೆಣಸಾಡಲಿವೆ. ದುಬೈನಲ್ಲಿರುವ ಐಸಿಸಿ ಅಕಾಡೆಮಿ ಓವಲ್ 1ರಲ್ಲಿ ಈ ಪಂದ್ಯಾವಳಿ ಜೂನ್ 19 ರಿಂದ ಆರಂಭವಾಗಿದೆ.

4 / 5

ಆದಾಗ್ಯೂ ಭರತ್​ಗೆ ಯುಎಇ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ನಿಯಮಗಳ ಪ್ರಕಾರ, ಪೂರ್ಣ ಸದಸ್ಯ ರಾಷ್ಟ್ರದಿಂದ ಅಸೋಸಿಯೇಟ್ ರಾಷ್ಟ್ರಕ್ಕೆ ಸ್ಥಳಾಂತರಗೊಳ್ಳಲು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿ ಇದೆ. ಭರತ್ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ 2024 ರಲ್ಲಿ ಆಡಿದ್ದರು. ಅಂದರೆ ಅವರು 2027 ರ ನಂತರ ಮಾತ್ರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ.

5 / 5

ಕೆ.ಎಸ್. ಭರತ್ ಭಾರತದ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 20.09 ಸರಾಸರಿಯಲ್ಲಿ 221 ರನ್ ಕಲೆಹಾಕಿದ್ದರು. ಈ 7 ಪಂದ್ಯಗಳಲ್ಲಿ ಭರತ್​ಗೆ ಒಂದೇ ಒಂದು ಅರ್ಧಶತಕ ಅಥವಾ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 44 ರನ್ ಆಗಿದೆ. ವಿಕೆಟ್ ಕೀಪಿಂಗ್​ನಲ್ಲಿ 18 ಕ್ಯಾಚ್‌ಗಳನ್ನು ತೆಗೆದುಕೊಂಡಿರುವ ಭರತ್ ಒಂದು ಸ್ಟಂಪಿಂಗ್ ಸಹ ಮಾಡಿದ್ದರು.

Loading...
Unable to load recommendations.
Follow Us