AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

862 ಓವರ್​ಗಳ ಬಳಿಕ ಸ್ಯಾಂಟ್ನರ್ ಸಾಧನೆ

Mitchell Santner: ನ್ಯೂಝಿಲೆಂಡ್ ತಂಡವು ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಈ ಸರಣಿ ಗೆಲುವಿನ ರೂವಾರಿ ನ್ಯೂಝಿಲೆಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ಕಬಳಿಸಿದ್ದ ಕಿವೀಸ್ ಸ್ಪಿನ್ನರ್, ದ್ವಿತೀಯ ಇನಿಂಗ್ಸ್​ನಲ್ಲಿ 6 ವಿಕೆಟ್ ಉರುಳಿಸಿದ್ದರು.

ಝಾಹಿರ್ ಯೂಸುಫ್
|

Updated on: Oct 27, 2024 | 11:30 AM

Share
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ 5 ವಿಕೆಟ್​ಗಳನ್ನು ಕಬಳಿಸಲು ಅತೀ ಹೆಚ್ಚು ಓವರ್​ಗಳನ್ನು ಎಸೆದ ನ್ಯೂಝಿಲೆಂಡ್ ಬೌಲರ್ ಯಾರೆಂದು ಕೇಳಿದರೆ ಇನ್ಮುಂದೆ ಮಿಚೆಲ್ ಸ್ಯಾಂಟ್ನರ್ ಹೆಸರೇಳಬಹುದು. ಏಕೆಂದರೆ ಸ್ಯಾಂಟ್ನರ್ ಟೆಸ್ಟ್​ನಲ್ಲಿ ಮೊದಲ ಐದು ವಿಕೆಟ್​ಗಳ ಗುಚ್ಛ ಪಡೆಯಲು ಎಸೆದಿರುವುದು ಬರೋಬ್ಬರಿ 862.3 ಓವರ್​ಗಳನ್ನು ಎಂದರೆ ನಂಬಲೇಬೇಕು.

1 / 5
2015 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಮಿಚೆಲ್ ಸ್ಯಾಂಟ್ನರ್ ಕಳೆದ 47 ಇನಿಂಗ್ಸ್​ಗಳಲ್ಲಿ ಒಮ್ಮೆಯೂ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಪುಣೆಯಲ್ಲಿ ನಡೆದ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸ್ಯಾಂಟ್ನರ್ ಸ್ಪಿನ್ ಮೋಡಿ ಮಾಡಿದರು.

2 / 5
ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 19.3 ಓವರ್​ಗಳನ್ನು ಎಸೆದ ಮಿಚೆಲ್ ಸ್ಯಾಂಟ್ನರ್ ಕೇವಲ 53 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಟೆಸ್ಟ್​ನಲ್ಲಿ ಅತ್ಯಧಿಕ ಓವರ್​ಗಳ ಬಳಿಕ 5 ವಿಕೆಟ್​ಗಳ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

3 / 5
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಪಾಕಿಸ್ತಾನದ ಬೌಲರ್ ಇಂತಿಕಾಬ್ ಆಲಂ. ಪಾಕ್ ಸ್ಪಿನ್ನರ್ ತಮ್ಮ ಮೊದಲ 5 ವಿಕೆಟ್ ಸಾಧನೆ ಮಾಡಲು ತೆಗೆದುಕೊಂಡ ಒಟ್ಟು ಓವರ್​ಗಳ ಸಂಖ್ಯೆ 877. ಇದೀಗ 862.3 ಓವರ್​ಗಳ ಬಳಿಕ 5 ವಿಕೆಟ್ ಕಬಳಿಸಿ ಮಿಚೆಲ್ ಸ್ಯಾಂಟ್ನರ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

4 / 5
ವಿಶೇಷ ಎಂದರೆ ಮೊದಲ 5 ವಿಕೆಟ್ ಕಬಳಿಸಿದ ಬೆನ್ನಲ್ಲೇ ಸ್ಯಾಂಟ್ನರ್ ತಮ್ಮ ಕೆರಿಯರ್​ನ ದ್ವಿತೀಯ 5 ವಿಕೆಟ್​ಗಳ ಗುಚ್ಛವನ್ನೂ ಸಹ ಪಡೆದಿದ್ದಾರೆ. ಅಂದರೆ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 29 ಓವರ್​ಗಳನ್ನು ಎಸೆದ ಕಿವೀಸ್ ಸ್ಪಿನ್ನರ್ 104 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪುಣೆ ಟೆಸ್ಟ್​ನಲ್ಲಿ ಒಟ್ಟು 13 ವಿಕೆಟ್ ಉರುಳಿಸಿ ನ್ಯೂಝಿಲೆಂಡ್ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು ತಂದುಕೊಡುವಲ್ಲಿ ಮಿಚೆಲ್ ಸ್ಯಾಂಟ್ನರ್ ಯಶಸ್ವಿಯಾಗಿದ್ದಾರೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್​​​

ಹೈದರಾಬಾದ್-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ದುರಂತ

ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?

ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು

ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?

ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​

ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್

ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ