AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

150 ಓವರ್​ಗಳಲ್ಲಿ ‘ಹ್ಯಾಟ್ರಿಕ್’ ಬರೆದ ಮೊಹಮ್ಮದ್ ಸಿರಾಜ್

Mohammed Siraj: ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಸತತ 10 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅಂದರೆ ಬಾರ್ಡರ್-ಗವಾಸ್ಕರ್ ಸರಣಿಯ ಎಲ್ಲಾ ಮ್ಯಾಚ್​ಗಳನ್ನೂ ಆಡಿದ್ದ ಸಿರಾಜ್ ಇದೀಗ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲೂ 5 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪ್ರಸ್ತುತ ಸರಣಿಯ ಎಲ್ಲಾ ಪಂದ್ಯವಾಡಿದ ಏಕೈಕ ವೇಗಿ ಎನಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Aug 02, 2025 | 10:25 AM

Share
ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5 ಪಂದ್ಯಗಳಲ್ಲೂ ಕಣಕ್ಕಿಳಿದ ಏಕೈಕ ವೇಗಿ ಮೊಹಮ್ಮದ್ ಸಿರಾಜ್. ಈ ಐದು ಮ್ಯಾಚ್​ಗಳ ಮೂಲಕ ಸಿರಾಜ್ 150 ಕ್ಕಿಂತ ಹೆಚ್ಚಿನ ಓವರ್​ಗಳನ್ನು ಎಸೆದಿದ್ದಾರೆ. ಈ ಮೂಲಕ ತಮ್ಮ ಕೆರಿಯರ್​ನಲ್ಲಿ ಮೂರನೇ ಬಾರಿ ಸರಣಿವೊಂದರಲ್ಲಿ 150 ಓವರ್​ಗಳ ಸಾಧನೆ ಮಾಡಿದ್ದಾರೆ.

1 / 5
ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ 2021 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 153.2 ಓವರ್​ಗಳನ್ನು ಬೌಲಿಂಗ್ ಮಾಡಿದ್ದರು. ಇದಾದ ಬಳಿಕ 2024-25 ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಒಟ್ಟು 157.1 ಓವರ್​ಗಳನ್ನು ಎಸೆದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ 150 ಓವರ್​ಗಳ ಗಡಿದಾಟಿದ್ದಾರೆ.

2 / 5
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮೊಹಮ್ಮದ್ ಸಿರಾಜ್ ಈವರೆಗೆ 155.2 ಓವರ್​ಗಳನ್ನು ಎಸೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಸತತ ಎರಡು ಟೆಸ್ಟ್​ ಸರಣಿಗಳಲ್ಲಿ 150 ಓವರ್​ಗಳನ್ನು ಎಸೆದ ವಿಶೇಷ ಸಾಧನೆ ಮಾಡಿದ್ದಾರೆ. ಇನ್ನು ದ್ವಿತೀಯ ಇನಿಂಗ್ಸ್​ನಲ್ಲೂ ಸಿರಾಜ್ ಬೌಲಿಂಗ್ ಮಾಡಬೇಕಿದ್ದು, ಹೀಗಾಗಿ ಈ ಬಾರಿ ಅವರ ಓವರ್​ಗಳ ಸಂಖ್ಯೆ 160 ದಾಟುವುದು ಖಚಿತ.

3 / 5
ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 16.2 ಓವರ್​ಗಳನ್ನು ಎಸೆದ ಮೊಹಮ್ಮದ್ ಸಿರಾಜ್ ಒಟ್ಟು 82 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಸಿರಾಜ್ ಅವರ ಭರ್ಜರಿ ಬೌಲಿಂಗ್​ನಿಂದಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 247 ರನ್​ಗಳಿಸಿ ಆಲೌಟ್ ಆಯಿತು. ಅಲ್ಲದೆ 4 ನಾಲ್ಕು ವಿಕೆಟ್​ಗಳೊಂದಿಗೆ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 200 ವಿಕೆಟ್​ಗಳನ್ನು ಪೂರೈಸಿದ್ದಾರೆ.

4 / 5
ಟೀಮ್ ಇಂಡಿಯಾ ಪರ ಈವರೆಗೆ 75 ಟೆಸ್ಟ್ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ ಒಟ್ಟು 6238 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 118 ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ 18 ವಿಕೆಟ್ ಉರುಳಿಸಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

5 / 5
Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ