- Kannada News Photo gallery Cricket photos Mohammed Siraj IPL 2025 Auction gujarat titans buys the indian player for the auction price of 12.25 cr Rupees, details in kannada
Mohammed Siraj IPL Auction 2025: ಸಿರಾಜ್ ಮೇಲೆ ಆರ್ಟಿಎಮ್ ಬಳಸದ ಆರ್ಸಿಬಿ!
Mohammed Siraj Auction Price: ಆರ್ಸಿಬಿ ಆರ್ಟಿಎಮ್ ಕಾರ್ಡ್ ಬಳಸಿ ಸಿರಾಜ್ರನ್ನು ಉಳಿಸಿಕೊಳ್ಳಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ, ಇಷ್ಟು ವರ್ಷ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿಕೊಂಡು ಬಂದಿದ್ದ ಸಿರಾಜ್ರನ್ನು ಉಳಿಸಿಕೊಳ್ಳಲು ನೋಡಲಿಲ್ಲ. ಹೀಗಾಗಿ ಸಿರಾಜ್ ಬಹಳ ವರ್ಷಗಳ ನಂತರ ಐಪಿಎಲ್‌ನಲ್ಲಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on: Nov 24, 2024 | 6:17 PM

ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲವು ಅಚ್ಚರಿಯ ಖರೀದಿಗಳು ನಡೆಯುತ್ತಿದೆ. ಐಪಿಎಲ್‌ನಲ್ಲಿ ಇಷ್ಟು ವರ್ಷ ಆರ್ಸಿಬಿ ತಂಡದ ಬೌಲಿಂಗ್ ಜೀವಾಳವಾಗಿದ್ದ ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮುಂದಿನ ಆವೃತ್ತಿಯಿಂದ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಮೂಲ ಬೆಲೆ 2 ಕೋಟಿ ರೂಗಳಿಗೆ ಹರಾಜಿಗೆ ಬಂದಿದ್ದ ಮೊಹಮ್ಮದ್ ಸಿರಾಜ್ರನ್ನು ಖರೀದಿಸಲು ಮೊದಲು ಗುಜರಾತ್ ಟೈಟಾನ್ಸ್ ಮುಂದಾಯಿತು. ಇದರ ಜೊತೆಗೆ ಸಿಎಸ್ಕೆ ಕೂಡ ಆಸಕ್ತಿ ತೋರಿತು. 8 ಕೋಟಿ ರೂವರೆಗೂ ಬಿಡ್ ಮಾಡಿದ ಸಿಎಸ್ಕೆ ಆ ನಂತರ ಹಿಂದೆ ಸರಿಯಿತು. ಇಲ್ಲಿ ರೇಸ್ಗೆ ಎಂಟ್ರಿಕೊಟ್ಟ ರಾಜಸ್ಥಾನ್ ರಾಯಲ್ಸ್ 12 ಕೋಟಿ ಬಿಡ್ ಮಾಡಿತು. ಆದರೆ ಗುಜರಾತ್ 12.25 ಕೋಟಿ ನೀಡಿ ಸಿರಾಜ್ರನ್ನು ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

ವಾಸ್ತವವಾಗಿ ಆರ್ಸಿಬಿ ಆರ್ಟಿಎಮ್ ಕಾರ್ಡ್ ಬಳಸಿ ಸಿರಾಜ್ರನ್ನು ಉಳಿಸಿಕೊಳ್ಳಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ, ಇಷ್ಟು ವರ್ಷ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿಕೊಂಡು ಬಂದಿದ್ದ ಸಿರಾಜ್ರನ್ನು ಉಳಿಸಿಕೊಳ್ಳಲು ನೋಡಲಿಲ್ಲ. ಹೀಗಾಗಿ ಸಿರಾಜ್ ಬಹಳ ವರ್ಷಗಳ ನಂತರ ಐಪಿಎಲ್‌ನಲ್ಲಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2017 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಸಿರಾಜ್, ಆ ನಂತರ ಆರ್ಸಿಬಿ ತಂಡದಲ್ಲಿ ಬಹಳ ವರ್ಷಗಳ ಕಾಲ ಆಡಿದ್ದರು. ಇದುವರೆಗೆ ಐಪಿಎಲ್‌ನಲ್ಲಿ 93 ಪಂದ್ಯಗಳನ್ನಾಡಿರುವ ಸಿರಾಜ್, 8.65 ಎಕಾನಮಿಯಲ್ಲಿ 93 ವಿಕೆಟ್ ಉರುಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಇದುವರೆಗೆ ಭಾರತದ ಪರ 16 ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 14 ವಿಕೆಟ್ಗಳಿವೆ. 17 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅಲ್ಲದೆ ಸಿರಾಜ್ 2024 ರಲ್ಲಿ ವಿಶ್ವ ಚಾಂಪಿಯನ್ ಆದ ಭಾರತೀಯ ತಂಡದ ಭಾಗವಾಗಿದ್ದರು. ಪ್ರಸ್ತುತ ಸಿರಾಜ್, ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡುತ್ತಿದ್ದಾರೆ.




