AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್

Mohammed Siraj Records: 4ನೇ ಓವರ್​ನಿಂದ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಅಷ್ಟೇ ಅಲ್ಲದೆ ಅಂತಿಮವಾಗಿ 7 ಓವರ್​ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಹಲವು ದಾಖಲೆ ಮಿಯಾನ್ ಪಾಲಾಯಿತು. ಆ ದಾಖಲೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

TV9 Web
| Edited By: |

Updated on: Sep 17, 2023 | 10:57 PM

Share
ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮೂಲಕ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಸಿರಾಜ್ ಅವರ ಕರಾರುವಾಕ್ ದಾಳಿಗೆ ಅಕ್ಷರಶಃ ತತ್ತರಿಸಿತು.

1 / 13
4ನೇ ಓವರ್​ನಿಂದ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಅಷ್ಟೇ ಅಲ್ಲದೆ ಅಂತಿಮವಾಗಿ 7 ಓವರ್​ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಹಲವು ದಾಖಲೆ ಮಿಯಾನ್ ಪಾಲಾಯಿತು. ಆ ದಾಖಲೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

2 / 13
1- ಅತೀ ವೇಗದದಲ್ಲಿ 5 ವಿಕೆಟ್: ಅತ್ಯಂತ ವೇಗವಾಗಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆ ಈ ಪಂದ್ಯದೊಂದಿಗೆ ಸಿರಾಜ್ ಪಾಲಾಗಿದೆ. ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿ ಸಿರಾಜ್ ಈ ಸಾಧನೆ ಮಾಡಿದ್ದಾರೆ.

3 / 13
2- ಒಂದೇ ಓವರ್​ನಲ್ಲಿ 4 ವಿಕೆಟ್: ಟೀಮ್ ಇಂಡಿಯಾ ಪರ ಒಂದೇ ಓವರ್​ನಲ್ಲಿ 4 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ ಫೈನಲ್ ಪಂದ್ಯದ 4ನೇ ಓವರ್​ನಲ್ಲಿ ಪಾತುಮ್ ನಿಸ್ಸಂಕಾ, ಚರಿತ್ ಅಸಲಂಕಾ, ಸದೀರ ಸಮರವಿಕ್ರಮ ಮತ್ತು ಧನಂಜಯ ಡಿಸಿಲ್ವಾ ಅವರನ್ನು ಔಟ್ ಮಾಡಿ ಈ ದಾಖಲೆ ಬರೆದಿದ್ದಾರೆ.

4 / 13
3- ಅತ್ಯುತ್ತಮ ಬೌಲಿಂಗ್ ಪ್ರದರ್ಶನ: ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ 4ನೇ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸ್ಟುವರ್ಟ್ ಬಿನ್ನಿ (6/4), ಅನಿಲ್ ಕುಂಬ್ಳೆ (6/12) ಹಾಗೂ ಜಸ್​ಪ್ರೀತ್ ಬುಮ್ರಾ (6/19) ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದರು.

5 / 13
4- 50 ವಿಕೆಟ್​ಗಳ ಸಾಧನೆ: ಈ 6 ವಿಕೆಟ್​ಗಳೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ 50+ ವಿಕೆಟ್ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲೂ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಸಿರಾಜ್ 29 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದಾರೆ.

6 / 13
5- ವಿಶ್ವ ದಾಖಲೆ ನಿರ್ಮಾಣ: ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಕೂಡ ಸಿರಾಜ್ ಪಾಲಾಗಿದೆ. ಈ ಹಿಂದೆ ಶ್ರೀಲಂಕಾ ಚಾಮಿಂಡ ವಾಸ್ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಸಿರಾಜ್ ಕೂಡ 16 ಎಸೆತಗಳಲ್ಲಿ ಈ ಸಾಧನೆ ಮಾಡಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

7 / 13
6- 1002 ಎಸೆತಗಳಲ್ಲಿ ಸಾಧನೆ: ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ ಈ ಸಾಧನೆ ಮಾಡಲು ಕೇವಲ 1002 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಅಜಂತಾ ಮೆಂಡಿಸ್ (847 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ.

8 / 13
7- ಎರಡನೇ ಬೌಲರ್: ಏಷ್ಯಾಕಪ್ ಇತಿಹಾಸದಲ್ಲೇ 6 ವಿಕೆಟ್ ಕಬಳಿಸಿದ 2ನೇ ಬೌಲರ್ ಎಂಬ ಹೆಗ್ಗಳಿಕೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಅಜಂತಾ ಮೆಂಡಿಸ್ 2008 ರಲ್ಲಿ ಈ ಸಾಧನೆ ಮಾಡಿದ್ದರು.

9 / 13
8- ಲಂಕಾ ವಿರುದ್ಧ ಅದ್ಭುತ ಪ್ರದರ್ಶನ: 6 ವಿಕೆಟ್​ಗಳೊಂದಿಗೆ ಶ್ರೀಲಂಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಕಾರ್ ಯೂನಿಸ್ ಅವರ ದಾಖಲೆಯನ್ನು ಸಿರಾಜ್ ಮುರಿದಿದ್ದಾರೆ. 1990 ರಲ್ಲಿ ಪಾಕ್ ವೇಗಿ ವಕಾರ್ ಯೂನಿಸ್ 26 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ 21 ರನ್​ಗಳಿಗೆ 6 ವಿಕೆಟ್ ಕಬಳಿಸಿ ಸಿರಾಜ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

10 / 13
9- ಫೈನಲ್​ನಲ್ಲಿ ಮಿಂಚಿಂಗ್: ಏಕದಿನ ಕ್ರಿಕೆಟ್​ನ ಫೈನಲ್ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ 3ನೇ ಬೌಲರ್ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಅಖಿಬ್ ಜಾವೇದ್ (7/37) ಅಗ್ರಸ್ಥಾನದಲ್ಲಿದ್ದಾರೆ.

11 / 13
10- ಅತೀ ಕಡಿಮೆ ರನ್​ಗೆ 6 ವಿಕೆಟ್: ಏಷ್ಯಾಕಪ್​ ಫೈನಲ್​ನಲ್ಲಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಕಬಳಿಸಿದ ಶ್ರೀಲಂಕಾದ ಅಜಂತಾ ಮೆಂಡಿಸ್ ಅವರ ದಾಖಲೆಯನ್ನು ಸಿರಾಜ್ ಸರಿಗಟ್ಟಿದ್ದಾರೆ. 2008 ರಲ್ಲಿ ಮೆಂಡಿಸ್ ಟೀಮ್ ಇಂಡಿಯಾ ವಿರುದ್ಧ 13 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಸಿರಾಜ್ 13 ರನ್ ನೀಡುವಷ್ಟರಲ್ಲಿ 6 ವಿಕೆಟ್ ಕಬಳಿಸಿದ್ದರು.

12 / 13
ಒಟ್ಟಿನಲ್ಲಿ ಒಂದೇ ಪಂದ್ಯದ ಮೂಲಕ ಮಿಯಾನ್ ಮ್ಯಾಜಿಕ್ ತೋರಿಸಿ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.

13 / 13
Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ

ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ

Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ

ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ

ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ

ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ

ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?

ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ

ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ