Rohit Sharma: ಏಕದಿನ ಕ್ರಿಕೆಟ್ ಸಿಕ್ಸರ್ ಕಿಂಗ್ಗಳ ಪಟ್ಟಿಗೆ ಹಿಟ್ಮ್ಯಾನ್ ಎಂಟ್ರಿ..!
Most Sixes In Odi Cricket: ವಿಶೇಷ ಎಂದರೆ ಈ ಅತ್ಯಲ್ಪ ಮೊತ್ತದ ಚೇಸಿಂಗ್ನಲ್ಲಿ ಹಿಟ್ಮ್ಯಾನ್ 5 ಸಿಕ್ಸ್ ಹಾಗೂ 6 ಫೋರ್ ಬಾರಿಸಿದ್ದರು. ಈ ಐದು ಸಿಕ್ಸ್ಗಳೊಂದಿಗೆ ಏಕದಿನ ಕ್ರಿಕೆಟ್ನ ಸಿಕ್ಸರ್ ಸರದಾರರ ವಿಶೇಷ ಪಟ್ಟಿಗೆ ರೋಹಿತ್ ಶರ್ಮಾ ಕೂಡ ಸೇರ್ಪಡೆಯಾದರು.
Updated on: Jul 14, 2022 | 12:54 PM

ದಿ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಆಂಗ್ಲರು ನೀಡಿದ 111 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಹಿಟ್ಮ್ಯಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಪರಿಣಾಮ ಕೇವಲ 58 ಎಸೆತಗಳಲ್ಲಿ ರೋಹಿತ್ ಶರ್ಮಾ 76 ರನ್ ಸಿಡಿಸಿದ್ದರು. ವಿಶೇಷ ಎಂದರೆ ಈ ಅತ್ಯಲ್ಪ ಮೊತ್ತದ ಚೇಸಿಂಗ್ನಲ್ಲಿ ಹಿಟ್ಮ್ಯಾನ್ 5 ಸಿಕ್ಸ್ ಹಾಗೂ 6 ಫೋರ್ ಬಾರಿಸಿದ್ದರು. ಈ ಐದು ಸಿಕ್ಸ್ಗಳೊಂದಿಗೆ ಏಕದಿನ ಕ್ರಿಕೆಟ್ನ ಸಿಕ್ಸರ್ ಸರದಾರರ ವಿಶೇಷ ಪಟ್ಟಿಗೆ ರೋಹಿತ್ ಶರ್ಮಾ ಕೂಡ ಸೇರ್ಪಡೆಯಾದರು.

ಹೌದು, ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ ಕೇವಲ ನಾಲ್ವರು ಮಾತ್ರ 250 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎಂದರೆ ರೋಹಿತ್ ಶರ್ಮಾ. ಹಾಗಿದ್ರೆ ಒನ್ಡೇ ಕ್ರಿಕೆಟ್ನ ಟಾಪ್-4 ಸಿಕ್ಸರ್ ಸರದಾರರು ಯಾರೆಲ್ಲಾ ನೋಡೋಣ...

ಶಾಹಿದ್ ಅಫ್ರಿದಿ: ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 351 ಸಿಕ್ಸ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಕ್ರಿಸ್ ಗೇಲ್: ಯೂನಿವರ್ಸ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಸಿಕ್ಸ್ ವಿಷಯದಲ್ಲಿ ಕಿಂಗ್ ಎಂಬುದು ಗೊತ್ತೇ ಇದೆ. ಹಾಗಾಗಿ ಈ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾರೆ. ಒಟ್ಟು 331 ಸಿಕ್ಸ್ ಬಾರಿಸಿರುವ ಗೇಲ್ ಏಕದಿನ ಕ್ರಿಕೆಟ್ನ ಸಿಕ್ಸರ್ ಕಿಂಗ್ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಸನತ್ ಜಯಸೂರ್ಯ: ಶ್ರೀಲಂಕಾ ತಂಡದ ಮಾಜಿ ಆರಂಭಿಕ ಆಟಗಾರ ಸನತ್ ಜಯಸೂರ್ಯ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 270 ಸಿಕ್ಸ್ಗಳನ್ನು ಬಾರಿಸಿದ್ದಾರೆ.

ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಟ್ಟು 250 ಸಿಕ್ಸ್ಗಳನ್ನು ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಹಿಟ್ಮ್ಯಾನ್ ಹೆಸರಿನಲ್ಲಿದೆ.
