- Kannada News Photo gallery Cricket photos Nathan Lyon has been left out of a home Test for the first time since 2012
13 ವರ್ಷಗಳ ಬಳಿಕ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದ ನಾಥನ್ ಲಿಯಾನ್
Australia vs England, 2nd Test: ಆಸ್ಟ್ರೇಲಿಯಾ - ಇಂಗ್ಲೆಂಡ್ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯದಿಂದ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಹೊರಗುಳಿದಿದ್ದಾರೆ. 2012 ರಿಂದ ತವರಿನಲ್ಲಿ ಸತತ ಪಂದ್ಯಗಳನ್ನಾಡಿದ್ದ ಲಿಯಾನ್ ಅವರನ್ನು ಕೈ ಬಿಟ್ಟು ಈ ಬಾರಿ ಬೌಲಿಂಗ್ ಆಲ್ರೌಂಡರ್ಗೆ ಸ್ಥಾನ ನೀಡಿದ್ದಾರೆ.
Updated on:Dec 04, 2025 | 12:34 PM

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಣ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಬ್ರಿಸ್ಬೇನ್ನ ಗಾಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕಣಕ್ಕಿಳಿದಿಲ್ಲ ಎಂಬುದೇ ವಿಶೇಷ.

ಅಂದರೆ ನಾಥನ್ ಲಿಯಾನ್ ಕಳೆದ 13 ವರ್ಷಗಳಲ್ಲಿ ತವರಿನಲ್ಲಿ ನಡೆದ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಂಡಿರಲಿಲ್ಲ. 2012 ರಿಂದ ಆಸ್ಟ್ರೇಲಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ಲಿಯಾನ್ ತವರಿನಲ್ಲಿ ಸತತವಾಗಿ 69 ಟೆಸ್ಟ್ ಪಂದ್ಯಗಳನ್ನಾಡಿ ಇತಿಹಾಸ ನಿರ್ಮಿಸಿದ್ದಾರೆ.

ಆದರೆ ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ನಾಥನ್ ಲಿಯಾನ್ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಅನುಭವಿ ಆಲ್ರೌಂಡರ್ ಮೈಕೆಲ್ ನೇಸರ್ಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಕಳೆದ 13 ವರ್ಷಗಳಿಂದ ಸತತ ಪಂದ್ಯಗಳನ್ನಾಡುತ್ತಾ ಬಂದಿದ್ದ ಲಿಯಾನ್ ಅವರ ನಾಗಲೋಟ ಕೂಡ ಕೊನೆಗೊಂಡಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೇಕ್ ವೆದರಾಲ್ಡ್ , ಟ್ರಾವಿಸ್ ಹೆಡ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ (ನಾಯಕ) , ಕ್ಯಾಮರೋನ್ ಗ್ರೀನ್ , ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮೈಕೆಲ್ ನೇಸರ್ , ಮಿಚೆಲ್ ಸ್ಟಾರ್ಕ್ , ಸ್ಕಾಟ್ ಬೋಲ್ಯಾಂಡ್ , ಬ್ರೆಂಡನ್ ಡಾಗೆಟ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) ವಿಲ್ ಜ್ಯಾಕ್ಸ್ , ಗಸ್ ಅಟ್ಕಿನ್ಸನ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್.
Published On - 10:53 am, Thu, 4 December 25
