AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6,6,6: ಪೂರನ್ ಪವರ್​ಫುಲ್ ಶತಕ

Major League Cricket 2025: ಸಿಯಾಟಲ್ ಓರ್ಕಾಸ್ ವಿರುದ್ಧದ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ತಂಡದ ನಾಯಕ ನಿಕೋಲಸ್ ಪೂರನ್ ಸ್ಪೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದೆ.

ಝಾಹಿರ್ ಯೂಸುಫ್
|

Updated on: Jun 28, 2025 | 7:53 AM

Share
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯ 18ನೇ ಪಂದ್ಯದಲ್ಲಿ ನಿಕೋಲಸ್ ಪೂರನ್ ಭರ್ಜರಿ ಶತಕ ಸಿಡಿಸಿದ್ದಾರೆ. ಎಂಐ ನ್ಯೂಯಾರ್ಕ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

1 / 5
ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗರಾದ ಕ್ವಿಂಟನ್ ಡಿಕಾಕ್ 1 ರನ್ ಗಳಿಸಿ ಔಟಾದರೆ, ಮೊನಾಂಕ್ ಪಟೇಲ್ 20 ರನ್ ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದರು.

2 / 5
ಈ ಹಂತದಲ್ಲಿ ಕಣಕ್ಕಿಳಿದ ಎಂಐ ನ್ಯೂಯಾರ್ಕ್​ ತಂಡದ ನಾಯಕ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 10 ಓವರ್‌ಗಳ ಮುಕ್ತಾಯದ ವೇಳೆಗೆ ನ್ಯೂಯಾರ್ಕ್ ತಂಡದ ಸ್ಕೋರ್ 100 ರನ್​ಗಳಿಗೆ ಬಂದು ನಿಂತಿತು.

3 / 5
ಇದಾದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಪೂರನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್ - ಫೋರ್​ಗಳ ಸುರಿಮಳೆಗೈದರು. ಪರಿಣಾಮ ಪೂರನ್ ಬ್ಯಾಟ್ ನಿಂದ 55 ಎಸೆತಗಳಲ್ಲಿ ಸ್ಫೋಟಕ ಸೆಂಚುರಿ ಮೂಡಿಬಂತು. ವಿಶೇಷ ಎಂದರೆ ಇದು ಎಂಎಲ್​ಸಿ ಲೀಗ್​ನಲ್ಲಿ ಪೂರನ್ ಅವರ ಎರಡನೇ ಶತಕವಾಗಿದೆ.

4 / 5
ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ನಿಕೋಲಸ್ ಪರೂನ್ 60 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 8 ಭರ್ಜರಿ ಸಿಕ್ಸ್ ಹಾಗೂ 8 ಫೋರ್ ಗಳೊಂದಿಗೆ ಅಜೇಯ 108 ರನ್ ಬಾರಿಸಿದರು. ಈ ಮೂಲಕ ಎಂಐ ನ್ಯೂಯಾರ್ಕ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ

ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ

ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ

ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್

ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್

ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?

ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ