- Kannada News Photo gallery Cricket photos Pakistan Squad Announced: Babar Azam, Naseem Shah Return for SA T20 Series
PAK vs SA: 10 ತಿಂಗಳ ನಂತರ ಟಿ20 ತಂಡದಲ್ಲಿ ಬಾಬರ್ ಆಝಂ ಪ್ರತ್ಯಕ್ಷ
Pakistan Squad Announced: ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸಜ್ಜಾಗಿದೆ. ಈ ಸರಣಿಗಳಿಗೆ ಕ್ರಿಕೆಟ್ ಮಂಡಳಿ ತಂಡಗಳನ್ನು ಪ್ರಕಟಿಸಿದೆ. ಪ್ರಮುಖವಾಗಿ, ಮಾಜಿ ನಾಯಕ ಬಾಬರ್ ಆಝಂ ಸುಮಾರು 10 ತಿಂಗಳ ನಂತರ ಟಿ20 ತಂಡಕ್ಕೆ ಮರಳಿದ್ದಾರೆ. ವೇಗಿ ನಸೀಮ್ ಶಾ ಕೂಡ 11 ತಿಂಗಳ ಬಳಿಕ ತಂಡಕ್ಕೆ ಮರುಪ್ರವೇಶ ಪಡೆದಿದ್ದು, ಲಂಕಾ ವಿರುದ್ಧವೂ ಸರಣಿಗಳಿವೆ.
Updated on: Oct 24, 2025 | 4:53 PM

ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ತವರು ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿರುವ ಪಾಕಿಸ್ತಾನ ತಂಡ, ಇದೀಗ ಅದೇ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲು ಸಿದ್ಧವಾಗಿದೆ. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಅಕ್ಟೋಬರ್ 28 ರಿಂದ ನವೆಂಬರ್ 1 ರವರೆಗೆ ನಡೆಯಲಿದೆ. ಪಂದ್ಯಗಳು ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ.

ನಂತರ ಎರಡೂ ತಂಡಗಳು ನವೆಂಬರ್ 4 ರಿಂದ 8 ರವರೆಗೆ ಫೈಸಲಾಬಾದ್‌ನ ಇಕ್ಬಾಲ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಅದಾದ ಬಳಿಕ ವೆಂಬರ್ 11 ರಿಂದ 15 ರವರೆಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ನಡೆಯಲಿದ್ದು, ನವೆಂಬರ್ 17 ರಿಂದ 29 ರವರೆಗೆ ತ್ರಿಕೋನ ಟಿ20 ಸರಣಿ ನಡೆಯಲಿದೆ.

ಇದೀಗ ಈ ಸರಣಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡಗಳನ್ನು ಪ್ರಕಟಿಸಿದ್ದು, ಮಾಜಿ ನಾಯಕ ಬಾಬರ್ ಆಜಂ ಸುಮಾರು 10 ತಿಂಗಳ ನಂತರ ಪಾಕಿಸ್ತಾನದ ಟಿ20 ತಂಡಕ್ಕೆ ಮರಳಿದ್ದಾರೆ. ಡಿಸೆಂಬರ್ 13, 2024 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದ ಬಾಬರ್ಗೆ ಆ ಬಳಿಕ ಟಿ20 ತಂಡದಲ್ಲಿ ಸ್ಥಾನ ಸಿಕ್ಕರಲಿಲ್ಲ.

ಬಾಬರ್ ಜೊತೆಗೆ, ವೇಗಿ ನಸೀಮ್ ಶಾ ಕೂಡ ಸುಮಾರು 11 ತಿಂಗಳ ನಂತರ ಟಿ20 ತಂಡಕ್ಕೆ ಮರಳಿದ್ದಾರೆ. ನಸೀಮ್ ಕೊನೆಯ ಬಾರಿಗೆ ನವೆಂಬರ್ 16, 2024 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.

ಪಾಕಿಸ್ತಾನ ಟಿ20ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯ್ಯುಬ್, ಶಾಹೀನ್ ಶಾ ಅಫ್ರಿದಿ, ಉಸ್ಕೆಮಾನ್ ಖಾನ್. ಮೀಸಲು ಆಟಗಾರರು: ಫಖರ್ ಜಮಾನ್, ಹ್ಯಾರಿಸ್ ರೌಫ್, ಸುಫ್ಯಾನ್ ಮುಖೀಮ್.

ಏಕದಿನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸಿಬುಲ್ಲಾ, ಹಸನ್ ನವಾಜ್, ಹುಸೇನ್ ತಲತ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್.




