Phil Salt IPL Auction 2025: 11.50 ಕೋಟಿಗೆ ಆರ್​ಸಿಬಿ ಸೇರಿಕೊಂಡ ಮತ್ತೊಬ್ಬ ಇಂಗ್ಲೆಂಡ್‌ ಪ್ಲೇಯರ್

Phil Salt Auction Price: ಪಿಲ್ ಸಾಲ್ಟ್ ಖರೀದಿಗಾಗಿ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತು. ಒಂದೆಡೆ ಚಾಂಪಿಯನ್ ತಂಡದ ಸಂಯೋಜನೆಯನ್ನು ಹಾಗೆಯೆ ಉಳಿಸಿಕೊಳ್ಳಲು ಪ್ರಯತ್ನಿಸಿದ ಕೆಕೆಆರ್, ಸಾಲ್ಟ್​ಗಾಗಿ 11.25 ಕೋಟಿ ನೀಡಲು ಮುಂದಾಯಿತು. ಆದರೆ ಆರ್​ಸಿಬಿ ಅಂತಿಮವಾಗಿ 11.50 ಕೋಟಿ ನೀಡಿ ಸಾಲ್ಟ್​ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

ಪೃಥ್ವಿಶಂಕರ
|

Updated on:Nov 24, 2024 | 9:21 PM

ಮೆಗಾ ಹರಾಜಿನ ಮೊದಲ ದಿನ ತನ್ನ ಎರಡನೇ ಖರೀದಿಯಾಗಿ ಆರ್​ಸಿಬಿ, ಮತ್ತೊಬ್ಬ ಇಂಗ್ಲೆಂಡ್‌ ಆಟಗಾರನನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಕಳೆದ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್‌ ಮಾಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಿಲ್ ಸಾಲ್ಟ್ ಇದೀಗ ಆರ್​ಸಿಬಿ ಸೇರಿಕೊಂಡಿದ್ದಾರೆ.

1 / 5
ಪಿಲ್ ಸಾಲ್ಟ್ ಖರೀದಿಗಾಗಿ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತು. ಒಂದೆಡೆ ಚಾಂಪಿಯನ್ ತಂಡದ ಸಂಯೋಜನೆಯನ್ನು ಹಾಗೆಯೆ  ಉಳಿಸಿಕೊಳ್ಳಲು ಪ್ರಯತ್ನಿಸಿದ ಕೆಕೆಆರ್, ಸಾಲ್ಟ್​ಗಾಗಿ 11.25 ಕೋಟಿ ನೀಡಲು ಮುಂದಾಯಿತು. ಆದರೆ ಆರ್​ಸಿಬಿ ಅಂತಿಮವಾಗಿ 11.50 ಕೋಟಿ ನೀಡಿ ಸಾಲ್ಟ್​ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

2 / 5
2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕಣಕ್ಕಿಳಿಯುವುದರೊಂದಿಗೆ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ಪಿಲ್ ಸಾಲ್ಟ್, ಮೊದಲ ಆವೃತ್ತಿಯಲ್ಲೇ 160 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 218 ರನ್ ಗಳಿಸಿದ್ದರು. ಮೊದಲ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಬಿಡುಗಡೆ ಮಾಡಿತ್ತು.

3 / 5
ಆ ನಂತರ2024 ರಲ್ಲಿ ಕೋಲ್ಕತ್ತಾ ಪರ ಆಡುವ ಅವಕಾಶ ಪಡೆದಿದ್ದ ಸಾಲ್ಟ್ 12 ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕಗಳ ಸಹಾಯದಿಂದ 435 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಇದುವರೆಗೆ 2 ತಂಡಗಳ ಪರ ಆಡಿರುವ ಫಿಲ್ ಸಾಲ್ಟ್, 21 ಪಂದ್ಯಗಳನ್ನಾಡಿದ್ದು ಒಟ್ಟು 653 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿದ್ದರೆ, ಅವರ ಅತ್ಯಧಿಕ ಸ್ಕೋರ್ 89 ರನ್ ಆಗಿದೆ.

4 / 5
2022 ರಲ್ಲಿ ಇಂಗ್ಲೆಂಡ್ ಪರ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಫಿಲ್ ಸಾಲ್ಟ್, ಅಂದಿನಿಂದ 34 ಪಂದ್ಯಗಳಲ್ಲಿ 1047 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ. ಇದಲ್ಲದೆ, ಅವರು 27 ಏಕದಿನ ಪಂದ್ಯಗಳಲ್ಲಿ 866 ರನ್ ಗಳಿಸಿದ್ದಾರೆ.

5 / 5

Published On - 8:22 pm, Sun, 24 November 24

Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್