- Kannada News Photo gallery Cricket photos Ravindra Jadeja's 12-Wicket Haul: Saurashtra Crushes Delhi in Ranji Trophy
Ravindra Jadeja: 12 ವಿಕೆಟ್ ಉರುಳಿಸಿದ ರವೀಂದ್ರ ಜಡೇಜಾ; ಡೆಲ್ಲಿ ತಂಡಕ್ಕೆ ಹೀನಾಯ ಸೋಲು
Ravindra Jadeja: ರವೀಂದ್ರ ಜಡೇಜಾ ಅವರು ರಣಜಿ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಒಟ್ಟು 12 ವಿಕೆಟ್‌ಗಳನ್ನು ಪಡೆದರು. ಜಡೇಜಾ ಅವರ ಸ್ಪಿನ್ ಮ್ಯಾಜಿಕ್ಹೆ ನಲುಗಿದ ದೆಹಲಿ ತಂಡ ಸಂಪೂರ್ಣವಾಗಿ ಶರಣಾಯಿತು. ಜಡೇಜಾ ಅವರ ಈ ಅದ್ಭುತ ಪ್ರದರ್ಶನ ಸೌರಾಷ್ಟ್ರ ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟಿತು.
Updated on:Jan 24, 2025 | 8:49 PM

ರಣಜಿ ಟ್ರೋಫಿಯಲ್ಲಿ ಡೆಲ್ಲಿ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ರವೀಂದ್ರ ಜಡೇಜಾ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಾರಕ ದಾಳಿ ನಡೆಸಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡವನ್ನು ಹೆಡೆಮುರಿ ಕಟ್ಟಿದರು. ಜಡೇಜಾ ಸ್ಪಿನ್ ಮ್ಯಾಜಿಕ್ನ ಮುಂದೆ ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್ಗೂ ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಜಡೇಜಾ ಅವರ ವಿಧ್ವಂಸಕ ಎಸೆತಗಳ ಮುಂದೆ ಡೆಲ್ಲಿ ತಂಡ ಸಂಪೂರ್ಣ ಶರಣಾದಂತಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು. ಈ ಎಡಗೈ ಸ್ಪಿನ್ನರ್ ರಾಜ್‌ಕೋಟ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತಮ್ಮ ಅನುಭವದ ಧಾರೆ ಎರೆದರು. ಇದರಿಂದಾಗಿ ಡೆಲ್ಲಿ ಬ್ಯಾಟ್ಸ್ಮನ್ಗಳಿಗೆ ವಿಕೆಟ್ನಲ್ಲಿ ಉಳಿಯುವುದು ಕಷ್ಟವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಕೇವಲ 38 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಜಡೇಜಾ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಪಡೆದರು.

ಈ ಎಡಗೈ ಸ್ಪಿನ್ನರ್ ದೆಹಲಿಯ ಆರಂಭಿಕ ಆಟಗಾರ ಸನತ್ ಸಾಂಗ್ವಾನ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಅರ್ಪಿತ್ ರಾಣಾ ಕೂಡ ಜಡೇಜಾಗೆ ಬಲಿಯಾದರು. ಜಾಂಟಿ ಸಿಧು ಮತ್ತು ನಂತರ ರಿಷಬ್ ಪಂತ್ ಕೂಡ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಗುಸೇನ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ತಮ್ಮ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

ಇದಾದ ಬಳಿಕ ಸುಮಿತ್ ಮಾಥೂರ್ ಕೂಡ ಜಡ್ಡುಗೆ ಬಲಿಯಾದರು. ಅಂತಿಮವಾಗಿ ಡೆಲ್ಲಿ ನಾಯಕ ಆಯುಷ್ ಬಧೋನಿ ಅವರನ್ನು ವಜಾ ಮಾಡುವ ಮೂಲಕ ಜಡೇಜಾ 7 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಇದಲ್ಲದೆ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಐವತ್ತು ಡಾಟ್ ಬಾಲ್‌ಗಳನ್ನು ಎಸೆದರು.

ರವೀಂದ್ರ ಜಡೇಜಾ ಅವರ ರಣಜಿ ಟ್ರೋಫಿ ದಾಖಲೆಯ ಕುರಿತು ಮಾತನಾಡುವುದಾದರೆ, ಜಡೇಜಾ19 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಆರನೇ ಬಾರಿಗೆ ಪಂದ್ಯದಲ್ಲಿ 10 ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದ್ದಾರೆ. ಜಡೇಜಾ ಅವರು 46 ರಣಜಿ ಟ್ರೋಫಿ ಪಂದ್ಯಗಳಲ್ಲಿ 208 ವಿಕೆಟ್‌ಗಳನ್ನು ಪಡೆದಿದ್ದು, ಅವರ ಬೌಲಿಂಗ್ ಸರಾಸರಿ ಕೇವಲ 21.25 ಆಗಿದೆ.

ಡೆಲ್ಲಿ ಮೊದಲ ಇನಿಂಗ್ಸ್‌ನಲ್ಲಿ 188 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ರವೀಂದ್ರ ಜಡೇಜಾ ತಂಡ 271 ರನ್ ಗಳಿಸಿ 83 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ, ಜಡೇಜಾ ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ, ಸೌರಾಷ್ಟ್ರ ಡೆಲ್ಲಿಯನ್ನು ಕೇವಲ 94 ರನ್‌ಗಳಿಗೆ ಕಟ್ಟಿಹಾಕಿತು. ಈ ಮೂಲಕ ಕೇವಲ 12 ರನ್‌ಗಳ ಗುರಿಯನ್ನು ಸೌರಾಷ್ಟ್ರ ಕೇವಲ 3.1 ಓವರ್‌ಗಳಲ್ಲಿ 10 ವಿಕೆಟ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ಬೆನ್ನಟ್ಟಿತು.
Published On - 8:43 pm, Fri, 24 January 25



















