ಕನ್ನಡತಿ ಸೇರಿ RCB ತಂಡಕ್ಕೆ ನಾಲ್ವರು ಎಂಟ್ರಿ!

Updated on: Oct 29, 2026 | 7:05 AM

ವುಮೆನ್ಸ್ ಪ್ರೀಮಿಯರ್ ಲೀಗ್​ನ 5ನೇ ಸೀಸನ್​ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಆಟಗಾರ್ತಿಯರ ಬಲಿಷ್ಠ ಪಡೆಯನ್ನು ರೂಪಿಸಿದೆ. ಮಿನಿ ಹರಾಜಿಗೂ ಮುನ್ನ 13 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದ ಆರ್​ಸಿಬಿ ಇದೀಗ ಇಬ್ಬರು ವಿದೇಶಿ ಆಟಗಾರ್ತಿಯರು ಸೇರಿ ಒಟ್ಟು ನಾಲ್ವರನ್ನು ಖರೀದಿಸಿದೆ. ಈ ನಾಲ್ವರಲ್ಲಿ ಒಬ್ಬರು ಕರ್ನಾಟಕದ ಆಟಗಾರ್ತಿ ಎಂಬುದು ವಿಶೇಷ.

1 / 6
WPL 2027: ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮಿನಿ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ವರು ಆಟಗಾರ್ತಿಯರನ್ನು ಖರೀದಿಸಿದೆ. ಈ ನಾಲ್ವರಲ್ಲಿ ಒಬ್ಬರು ಕರ್ನಾಟಕದ ಯುವ ಪ್ರತಿಭೆ ಎಂಬುದು ವಿಶೇಷ. ಹಾಗಿದ್ರೆ ಆರ್​ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ... (PC: Gettyimages)

WPL 2027: ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮಿನಿ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ವರು ಆಟಗಾರ್ತಿಯರನ್ನು ಖರೀದಿಸಿದೆ. ಈ ನಾಲ್ವರಲ್ಲಿ ಒಬ್ಬರು ಕರ್ನಾಟಕದ ಯುವ ಪ್ರತಿಭೆ ಎಂಬುದು ವಿಶೇಷ. ಹಾಗಿದ್ರೆ ಆರ್​ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ... (PC: Gettyimages)

2 / 6

ಜೆಸ್ ಜೊನಾಸೆನ್ (ಆಸ್ಟ್ರೇಲಿಯಾ): ಆಸೀಸ್ ಆಲ್​​ರೌಂಡರ್ ಜೆಸ್ ಜೊನಾಸೆನ್ ಅವರನ್ನು ಆರ್​ಸಿಬಿ 40 ಲಕ್ಷ ರೂ.ಗೆ ಖರೀದಿಸಿದ್ದಾರೆ. ಜೋರ್ಜಿಯಾ ವೋಲ್ ಮತ್ತು ಎಲಿಸ್ ಪೆರ್ರಿ ಅವರೊಂದಿಗೆ ಜೊನಾಸೆನ್ ಸೇರ್ಪಡೆಯು ಆರ್​​ಸಿಬಿ ವಿದೇಶಿ ಆಟಗಾರ್ತಿಯರ ವಿಭಾಗವನ್ನು ವಿಶ್ವದ ಅತ್ಯಂತ ಬಲಿಷ್ಠ ಆಲ್ ರೌಂಡರ್ ಪಡೆಯನ್ನಾಗಿ ಮಾಡಿದೆ. (PC: RCB)

3 / 6

ಕ್ಲೋಯ್ ಟ್ರಯಾನ್ (ಸೌತ್ ಆಫ್ರಿಕಾ): ಬಿರುಸಿನ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿ ಟ್ರಯಾನ್ ಅವರನ್ನು ಆರ್​ಸಿಬಿ 30 ಲಕ್ಷ ರೂ.ಗೆ ಖರೀದಿಸಿದೆ. ಆಲ್​ರೌಂಡರ್ ಆಗಿರುವ ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಡಿನ್ ಡಿ ಕ್ಲರ್ಕ್​ ಅವರ ಬ್ಯಾಕಪ್ ಆಗಿ ಬಳಸಿಕೊಳ್ಳಲಿದೆ. (PC: RCB)

4 / 6

ತೇಜಲ್ ಹಸಬ್ನಿಸ್ (ಭಾರತ): ದೇಶಿ ಕ್ರಿಕೆಟ್ ಮತ್ತು ಭಾರತ 'ಎ' ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿರುವ ಮಹಾರಾಷ್ಟ್ರದ ಬ್ಯಾಟರ್ ತೇಜಲ್ ಹಸಬ್ನಿಸ್ ಅವರನ್ನು ಆರ್​​ಸಿಬಿ ₹30 ಲಕ್ಷಕ್ಕೆ ಖರೀದಿ ಮಾಡಿದೆ. ಮಧ್ಯಮ ಕ್ರಮಾಂಕದ ಕ್ಲಾಸ್ ಬ್ಯಾಟರ್ ಆಗಿರುವ ತೇಜಲ್ ಮುಂದಿನ ಸೀಸನ್​​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. (PC: RCB)

5 / 6

ವೃಂದಾ ದಿನೇಶ್ (ಭಾರತ): ಕರ್ನಾಟಕದ ಯುವ ಬ್ಯಾಟರ್ ವೃಂದಾ ದಿನೇಶ್ ಅವರನ್ನು ಆರ್​​ಸಿಬಿ ₹10 ಲಕ್ಷದ ಮೂಲ ಬೆಲೆಗೆ ಖರೀದಿಸಿದೆ. ಆಕ್ರಮಣಕಾರಿ ಆರಂಭಿಕ ಆಟಗಾರ್ತಿಯಾಗಿರುವ ವೃಂದಾ ಅವರನ್ನು ಬ್ಯಾಟಿಂಗ್ ಲೈನ್-ಅಪ್‌ಗೆ ಬ್ಯಾಕ್-ಅಪ್ ಆಟಗಾರ್ತಿಯಾಗಿ ಆಯ್ಕೆ ಮಾಡಿದ್ದಾರೆ. (PC: RCB)

6 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್,, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರಯಾನ್. (PC: RCB)

Published On - 7:04 am, Thu, 29 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us