IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
IPL 2022 RCB: ಐಪಿಎಲ್ ಸೀಸನ್ 15 ಗಾಗಿ ವೇದಿಕೆ ಸಜ್ಜಾಗಿದೆ. ಈ ಬಾರಿ ಕೂಡ ಆರ್ಸಿಬಿ ತಂಡ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಅದರಂತೆ ಈ ಸಲ ಯಾರು ಹ್ಯಾಟ್ರಿಕ್ ಪಡೆದು ಮಿಂಚಲಿದ್ದಾರೆ ಕಾದು ನೋಡಬೇಕಿದೆ.
Updated on: Mar 24, 2022 | 10:54 PM

ಐಪಿಎಲ್ ಇತಿಹಾಸದಲ್ಲಿ 20 ಕ್ಕೂ ಅಧಿಕ ಬೌಲರುಗಳು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಆದರೆ ಅದರಲ್ಲಿ ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಕೇವಲ ಮೂವರು ಬೌಲರ್ಗಳು ಮಾತ್ರ. ಅದರಲ್ಲಿ 2 ಹಳೆಯ ದಾಖಲೆಯಾದರೆ, ಒಂದು ಕಳೆದ ಸೀಸನ್ನಲ್ಲಿನ ದಾಖಲೆ ಎಂಬುದು ವಿಶೇಷ. ಹಾಗಿದ್ರೆ ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರ್ಗಳು ಯಾರು ಎಂದು ನೋಡೋಣ...

ಹರ್ಷಲ್ ಪಟೇಲ್: ಐಪಿಎಲ್ 2021 ರಲ್ಲಿ ಹರ್ಷಲ್ ಪಟೇಲ್, ಮುಂಬೈ ಇಂಡಿಯನ್ಸ್ ವಿರುದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೋಲಾರ್ಡ್ ಹಾಗೂ ರಾಹುಲ್ ಚಹರ್ ಅವರನ್ನು ಔಟ್ ಮಾಡುವ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಪ್ರವೀಣ್ ಕುಮಾರ್: ಮೊದಲ ಬಾರಿಗೆ ಆರ್ಸಿಬಿ ಪರ ಹ್ಯಾಟ್ರಿಕ್ ಪಡೆದಿದ್ದು ವೇಗಿ ಪ್ರವೀಣ್ ಕುಮಾರ್. 2010 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರವೀಣ್ ಕುಮಾರ್ ರಾಜಸ್ಥಾನ್ ರಾಯಲ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು.

ಸ್ಯಾಮ್ಯುಯೆಲ್ ಬದ್ರಿ: ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ವಿದೇಶಿ ಆಟಗಾರ ಸ್ಯಾಮ್ಯುಯೆಲ್ ಬದ್ರಿ. 2017 ರಲ್ಲಿ. ಮುಂಬೈ ಇಂಡಿಯನ್ಸ್ ವಿರುದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಯಾಮ್ಯುಯೆಲ್ ಬದ್ರಿ (ವೆಸ್ಟ್ ಇಂಡೀಸ್) ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.

ಇದೀಗ ಐಪಿಎಲ್ ಸೀಸನ್ 15 ಗಾಗಿ ವೇದಿಕೆ ಸಜ್ಜಾಗಿದೆ. ಈ ಬಾರಿ ಕೂಡ ಆರ್ಸಿಬಿ ತಂಡ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಅದರಂತೆ ಈ ಸಲ ಯಾರು ಹ್ಯಾಟ್ರಿಕ್ ಪಡೆದು ಮಿಂಚಲಿದ್ದಾರೆ ಕಾದು ನೋಡಬೇಕಿದೆ.

TV9 Kannada
Read More



