AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NED, ICC World Cup: ಒಂಬತ್ತೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಹೇಗೆ?, ರಹಸ್ಯ ಬಿಚ್ಚಿಟ್ಟ ರೋಹಿತ್ ಶರ್ಮಾ: ಏನು ಹೇಳಿದ್ರು ನೋಡಿ

Rohit Sharma Post Match Presentation, India vs Netherlands: ವಿಶ್ವಕಪ್​ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಾವು ಟೂರ್ನಿಯನ್ನು ಪ್ರಾರಂಭಿಸಿದಾಗಿನಿಂದ, ಒಂದು ಸಮಯದಲ್ಲಿ ಒಂದು ಆಟದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆ ಆಟವನ್ನು ಚೆನ್ನಾಗಿ ಆಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

Vinay Bhat
|

Updated on:Nov 13, 2023 | 8:20 AM

Share
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಅಜೇಯ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ 160 ರನ್​ಗಳ ಅಮೋಘ ಜಯ ಕಂಡು ಈ ಬಾರಿಯ ಟೂರ್ನಿಯಲ್ಲಿ ಆಡಿದ ಒಂಬತ್ತು ಪಂದ್ಯಗಳ ಪೈಕಿ ಒಂಬತ್ತರಲ್ಲೂ ಗೆಲುವು ಸಾಧಿಸಿದೆ.

1 / 8
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್-ಕೆಎಲ್ ರಾಹುಲ್ ಶತಕ ಹಾಗೂ ಗಿಲ್, ರೋಹಿತ್, ವಿರಾಟ್ ಅರ್ಧಶತಕದ ನೆರವಿನಿಂದ 410 ರನ್ ಕಲೆಹಾಕಿತು. ಡಚ್ಚರಿ 250 ರನ್​ಗಳಿಗೆ ಆಲೌಟ್ ಆದರು. ಭಾರತ ಪರ ಕೊಹ್ಲಿ, ರೋಹಿತ್, ಗಿಲ್, ಸೂರ್ಯಕುಮಾರ್ ಕೂಡ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.

2 / 8
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಾವು ಟೂರ್ನಿಯನ್ನು ಪ್ರಾರಂಭಿಸಿದಾಗಿನಿಂದ, ಒಂದು ಸಮಯದಲ್ಲಿ ಒಂದು ಆಟದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆ ಆಟವನ್ನು ಚೆನ್ನಾಗಿ ಆಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

3 / 8
ಇದು ಸುದೀರ್ಘವಾದ ಪಂದ್ಯಾವಳಿಯಾಗಿರುವುದರಿಂದ ನಾವು ಮುಂದಿನ 3, 4 ಪಂದ್ಯಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಅದರ ಬದಲು ಈಗ ನಮ್ಮ ಪಂದ್ಯ ಯಾವುದು ಅದರ ಮೇಲೆ ಗಮನ ಕೇಂದ್ರೀಕರಿಸಿ ಅದನ್ನು ಚೆನ್ನಾಗಿ ಆಡುವುದು ನಮಗೆ ಮುಖ್ಯ. ನಮ್ಮ ಎಲ್ಲ ಆಟಗಾರರು ಮಾಡಿದ್ದು ಅದನ್ನೇ ಎಂದು ಹಿಟ್​ಮ್ಯಾನ್ ಹೇಳಿದ್ದಾರೆ.

4 / 8
ನೀವು ವಿಭಿನ್ನ ಸ್ಥಳಗಳಲ್ಲಿ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಕಾರಣ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಆಡಬೇಕು, ಅದನ್ನೇ ನಾವು ಮಾಡಿದ್ದೇವೆ. ಈ ಒಂಬತ್ತು ಪಂದ್ಯಗಳಲ್ಲಿ ನಾವು ಆಡಿದ್ದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಬೇರೆ ಬೇರೆ ಆಟಗಾರರು ವಿವಿಧ ಸಮಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡು ತಂಡಕ್ಕಾಗಿ ಕೆಲಸವನ್ನು ಮಾಡಿದ್ದಾರೆ - ರೋಹಿತ್ ಶರ್ಮಾ.

5 / 8
ನಾವು ಈ ಪಂದ್ಯಾವಳಿಯಲ್ಲಿ ಸತತವಾಗಿ ನಾಲ್ಕು ಪಂದ್ಯಗಳನ್ನು ಚೇಸ್ ಮಾಡಿದ್ದೇವೆ. ನಂತರ ಮೊದಲು ಬ್ಯಾಟ್ ಮಾಡಬೇಕಾಯಿತು. ಬೋರ್ಡ್‌ನಲ್ಲಿ ರನ್‌ಗಳನ್ನು ಹಾಕಬೇಕಾಗಿತ್ತು. ಆಗ ಸೀಮರ್‌ಗಳು ಸ್ಪಿನ್ನರ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಉತ್ಸಾಹಭರಿತವಾಗಿರಿಸಲು ಫಲಿತಾಂಶಗಳು ಮುಖ್ಯವಾಗಿದೆ ಎಂದರು ರೋಹಿತ್ ಶರ್ಮಾ.

6 / 8
ನಾವು ಮೈದಾನದಲ್ಲಿ ಬಹಳಷ್ಟು ಕಾಮ್​ ಆಗಿ, ಉತ್ಸಾಹದಿಂದ ಆಟವನ್ನು ಆಡುತ್ತೇವೆ. ಅದು ನಮ್ಮ ಪ್ರದರ್ಶನಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ನಾವು ಈ ರೀತಿಯ ವಿಷಯಗಳನ್ನು ಪ್ರಯತ್ನಿಸಿದಾಗ, ವಾತಾವರಣವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇರಿಸಬಹುದು. ಹುಡುಗರು ಯಾವುದೇ ಹೊರೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬದು ರೋಹಿತ್ ಮಾತು.

7 / 8
ಬೌಲಿಂಗ್ ಆಯ್ಕೆ ಬಗ್ಗೆ ಮಾತನಾಡಿದ ರೋಹಿತ್, ನೀವು ಐದು ಬೌಲರ್‌ಗಳನ್ನು ಹೊಂದಿರುವಾಗ, ತಂಡದೊಳಗೆ ಆ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಇಂದು ನಾವು ಒಂಬತ್ತು (ಬೌಲಿಂಗ್) ಆಯ್ಕೆಗಳನ್ನು ಹೊಂದಿದ್ದೇವೆ. ಈ ಪಂದ್ಯದಲ್ಲಿ ನಾವು ಕೆಲವು ಹೊಸ ವಿಚಾರಗಳನ್ನು ಪ್ರಯತ್ನಿಸಿದೆವು. ಬೌಲಿಂಗ್ ಘಟಕದಲ್ಲಿ, ನಾವು ವಿಭಿನ್ನವಾದದ್ದನ್ನು ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

8 / 8

Published On - 7:40 am, Mon, 13 November 23

Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ

ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್