- Kannada News Photo gallery Cricket photos Sarfaraz Khan Press Conference after the match he talking about Ravindra Jadeja run out
IND vs ENG 3rd Test: ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?
Sarfaraz Khan Press Conference: ರಾಜ್ಕೋಟ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ನ ಮೊದಲ ದಿನ ಭಾರತ ಮೇಲುಗೈ ಸಾಧಿಸಿತು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅದ್ಭುತ ಆಟ ಆಡಿದರು. ಆದರೆ, ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದ ರನೌಟ್ಗೆ ಬಲಿಯಾಗಬೇಕಾಯಿತು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಸರ್ಫರಾಜ್ ಏನು ಹೇಳಿದ್ದಾರೆ ನೋಡಿ.
Updated on: Feb 16, 2024 | 7:07 AM

ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಬಾರಿಸಿದರೂ, ಮೊದಲ ದಿನದ ಹೀರೋ ಆಗಿದ್ದು ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಆಟಗಾರ ಸರ್ಫರಾಜ್ ಖಾನ್. ಅವರ ಅದ್ಭುತ ಬ್ಯಾಟಿಂಗ್ಗೆ ಎಲ್ಲರೂ ಖುಷಿ ಪಟ್ಟರೆ, ನಂತರ ಸಂಭವಿಸಿದ ರನೌಟ್ ಕಣ್ಣೀರು ತರಿಸಿತು.

ರವೀಂದ್ರ ಜಡೇಜಾ ಮಾಡಿದ ಒಂದು ತಪ್ಪಿನಿಂದ ಸರ್ಫರಾಜ್ ಖಾನ್ ಔಟಾದರು. ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಜಡೇಜಾ ಮೇಲೆ ಕೋಪಗೊಂಡಿದ್ದಾರೆ. ಆದರೆ ಸರ್ಫರಾಜ್ ಖಾನ್ ಮೊದಲ ದಿನದಾಟ ಮುಗಿದ ಬಳಿಕ ರವೀಂದ್ರ ಜಡೇಜಾ ಅವರ ಮೇಲೆ ಸಿಟ್ಟಾಗದೆ ಅವರನ್ನು ಹಾಡಿಹೊಗಳಿದ್ದಾರೆ.

ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸರ್ಫರಾಜ್ ಖಾನ್ ಮಾತನಾಡಲು ಬಂದಿದ್ದರು. ಇಲ್ಲಿ ಅವರು ತಮ್ಮ ಇನ್ನಿಂಗ್ಸ್ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಹಿರಿಯ ಆಟಗಾರ ರವೀಂದ್ರ ಜಡೇಜಾ ಅವರಿಗೆ ಧನ್ಯವಾದ ಹೇಳಿದ್ದಾರೆ. ನಾನು ಕ್ರೀಸ್‌ಗೆ ಹೋದಾಗ ಜಡೇಜಾ ಅವರ ಬಳಿ ನನ್ನೊಂದಿಗೆ ಮಾತನಾಡುತ್ತಿರಿ ಎಂದು ಕೇಳಿದೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

''ನಾನು ಕ್ರೀಸ್‌ಗೆ ಬಂದಾಗ ಜಡ್ಡು ಭಾಯ್‌ಗೆ ನನ್ನೊಂದಿಗೆ ಮಾತನಾಡಲು ಹೇಳಿದೆ. ಏಕೆಂದರೆ ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚು ಮಾತನಾಡುತ್ತೇನೆ. ಆಗ ನನಗೆ ಬೆಂಬಲ ಸಿಗಬೇಕು. ಅದರಂತೆ ಜಡೇಜಾ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ,'' ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

82ನೇ ಓವರ್‌ನ ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ಸಿಂಗಲ್ ತೆಗೆಯಲು ಯತ್ನಿಸಿದರು. ಆದರೆ, ಅಲ್ಲಿ ನಡೆದ ಸಣ್ಣ ತಪ್ಪಿನಿಂದಾಗಿ ಸರ್ಫರಾಜ್ ಖಾನ್ ರನ್ ಔಟ್ ಆದರು. ಈ ರನೌಟ್ ನಂತರ, ನಾಯಕ ರೋಹಿತ್ ಶರ್ಮಾ ಕೂಡ ಕೋಪ ಗೊಂಡಿದ್ದು ಕಂಡುಬಂತು. ಆದರೆ, ಸರ್ಫರಾಜ್ ಇದು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಜಡೇಜಾರನ್ನು ಹಾಡಿಹೊಗಳಿದರು.

ಚೊಚ್ಚಲ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಸರ್ಫರಾಜ್ ಖಾನ್ ತಮ್ಮ ಮೊದಲ ಶತಕವನ್ನು ತಪ್ಪಿಸಿಕೊಂಡರು. ಕೇವಲ 66 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಸಹ ಹೊಡೆದರು. ಪಂದ್ಯದ ಮೊದಲ ದಿನದ ಆಟದ ಅಂತ್ಯದ ವೇಳೆಗೆ ಭಾರತ 326/5 ರನ್ ಗಳಿಸಿದೆ.




