AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 3rd Test: ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?

Sarfaraz Khan Press Conference: ರಾಜ್ಕೋಟ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್​ನ ಮೊದಲ ದಿನ ಭಾರತ ಮೇಲುಗೈ ಸಾಧಿಸಿತು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅದ್ಭುತ ಆಟ ಆಡಿದರು. ಆದರೆ, ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದ ರನೌಟ್​ಗೆ ಬಲಿಯಾಗಬೇಕಾಯಿತು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಸರ್ಫರಾಜ್ ಏನು ಹೇಳಿದ್ದಾರೆ ನೋಡಿ.

Vinay Bhat
|

Updated on: Feb 16, 2024 | 7:07 AM

Share
ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಬಾರಿಸಿದರೂ, ಮೊದಲ ದಿನದ ಹೀರೋ ಆಗಿದ್ದು ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಆಟಗಾರ ಸರ್ಫರಾಜ್ ಖಾನ್. ಅವರ ಅದ್ಭುತ ಬ್ಯಾಟಿಂಗ್​ಗೆ ಎಲ್ಲರೂ ಖುಷಿ ಪಟ್ಟರೆ, ನಂತರ ಸಂಭವಿಸಿದ ರನೌಟ್ ಕಣ್ಣೀರು ತರಿಸಿತು.

1 / 6
ರವೀಂದ್ರ ಜಡೇಜಾ ಮಾಡಿದ ಒಂದು ತಪ್ಪಿನಿಂದ ಸರ್ಫರಾಜ್ ಖಾನ್ ಔಟಾದರು. ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಜಡೇಜಾ ಮೇಲೆ ಕೋಪಗೊಂಡಿದ್ದಾರೆ. ಆದರೆ ಸರ್ಫರಾಜ್ ಖಾನ್ ಮೊದಲ ದಿನದಾಟ ಮುಗಿದ ಬಳಿಕ ರವೀಂದ್ರ ಜಡೇಜಾ ಅವರ ಮೇಲೆ ಸಿಟ್ಟಾಗದೆ ಅವರನ್ನು ಹಾಡಿಹೊಗಳಿದ್ದಾರೆ.

2 / 6
ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸರ್ಫರಾಜ್ ಖಾನ್ ಮಾತನಾಡಲು ಬಂದಿದ್ದರು. ಇಲ್ಲಿ ಅವರು ತಮ್ಮ ಇನ್ನಿಂಗ್ಸ್ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಹಿರಿಯ ಆಟಗಾರ ರವೀಂದ್ರ ಜಡೇಜಾ ಅವರಿಗೆ ಧನ್ಯವಾದ ಹೇಳಿದ್ದಾರೆ. ನಾನು ಕ್ರೀಸ್‌ಗೆ ಹೋದಾಗ ಜಡೇಜಾ ಅವರ ಬಳಿ ನನ್ನೊಂದಿಗೆ ಮಾತನಾಡುತ್ತಿರಿ ಎಂದು ಕೇಳಿದೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

3 / 6
''ನಾನು ಕ್ರೀಸ್​ಗೆ ಬಂದಾಗ ಜಡ್ಡು ಭಾಯ್‌ಗೆ ನನ್ನೊಂದಿಗೆ ಮಾತನಾಡಲು ಹೇಳಿದೆ. ಏಕೆಂದರೆ ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚು ಮಾತನಾಡುತ್ತೇನೆ. ಆಗ ನನಗೆ ಬೆಂಬಲ ಸಿಗಬೇಕು. ಅದರಂತೆ ಜಡೇಜಾ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ,'' ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

4 / 6
82ನೇ ಓವರ್‌ನ ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ಸಿಂಗಲ್ ತೆಗೆಯಲು ಯತ್ನಿಸಿದರು. ಆದರೆ, ಅಲ್ಲಿ ನಡೆದ ಸಣ್ಣ ತಪ್ಪಿನಿಂದಾಗಿ ಸರ್ಫರಾಜ್ ಖಾನ್ ರನ್ ಔಟ್ ಆದರು. ಈ ರನೌಟ್ ನಂತರ, ನಾಯಕ ರೋಹಿತ್ ಶರ್ಮಾ ಕೂಡ ಕೋಪ ಗೊಂಡಿದ್ದು ಕಂಡುಬಂತು. ಆದರೆ, ಸರ್ಫರಾಜ್ ಇದು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಜಡೇಜಾರನ್ನು ಹಾಡಿಹೊಗಳಿದರು.

5 / 6
ಚೊಚ್ಚಲ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಸರ್ಫರಾಜ್ ಖಾನ್ ತಮ್ಮ ಮೊದಲ ಶತಕವನ್ನು ತಪ್ಪಿಸಿಕೊಂಡರು. ಕೇವಲ 66 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಸಹ ಹೊಡೆದರು. ಪಂದ್ಯದ ಮೊದಲ ದಿನದ ಆಟದ ಅಂತ್ಯದ ವೇಳೆಗೆ ಭಾರತ 326/5 ರನ್ ಗಳಿಸಿದೆ.

6 / 6
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​