AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 23 ಸಿಕ್ಸ್​… ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಎಡ್ವರ್ಡ್ಸ್​

Scott Edwards World Record: ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಲು ಸಾಧ್ಯವೇ? ಅದು ಕೂಡ ಅಜೇಯ ಡಬಲ್ ಸೆಂಚುರಿ? ನೆದರ್​ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ 23 ಸಿಕ್ಸರ್​ಗಳೊಂದಿಗೆ​ ಸ್ಫೋಟಕ ದ್ವಿಶತಕ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 13, 2025 | 10:17 AM

Share
ನೆದರ್​ಲೆಂಡ್ಸ್​ ತಂಡದ ನಾಯಕ ಸ್ಕಾಟ್​ ಎಡ್ವರ್ಡ್ಸ್ (Scott Edwards)​ ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಮೂಲಕ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

1 / 5
ಆಸ್ಟ್ರೇಲಿಯಾದಲ್ಲಿ ನಡೆದ ಗ್ರೇಡ್ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಆಲ್ಟೋನಾ ಸ್ಪೋರ್ಟ್ಸ್ ಪರ ಕಣಕ್ಕಿಳಿದ ಸ್ಕಾಟ್ ಎಡ್ವರ್ಡ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವಿಲಿಯಮ್ಸ್ ಲ್ಯಾಂಡಿಂಗ್ ಎಸ್​ಸಿ ತಂಡದ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಲ್ಟೋನಾ ಸ್ಪೋರ್ಟ್ಸ್ ಪರ ಎಡ್ವರ್ಡ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

2 / 5
ಶತಕ ಪೂರೈಸಿದ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಸ್ಕಾಟ್ ಎಡ್ವರ್ಡ್ಸ್ 81 ಎಸೆತಗಳಲ್ಲಿ 14 ಫೋರ್ ಹಾಗೂ 23 ಸಿಕ್ಸರ್​ಗಳೊಂದಿಗೆ ಅಜೇಯ 229 ರನ್ ಬಾರಿಸಿದರು. ಈ ಮೂಲಕ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

3 / 5
ಇದಕ್ಕೂ ಮುನ್ನ ಈ ದಾಖಲೆ ಸಾಗರ್ ಕುಲ್ಕರ್ಣಿ ಹೆಸರಿನಲ್ಲಿತ್ತು. ಸಿಂಗಾಪುರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮರೀನಾ ಕ್ಲಬ್​ ಪರ ಕಣಕ್ಕಿಳಿದಿದ್ದ ಸಾಗರ್ ಕುಲ್ಕರ್ಣಿ 56 ಎಸೆತಗಳಲ್ಲಿ 219 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸ್ಕಾಟ್ ಎಡ್ವರ್ಡ್ಸ್​ ಮುರಿದಿದ್ದಾರೆ.

4 / 5
ವಿಲಿಯಮ್ಸ್ ಲ್ಯಾಂಡಿಂಗ್ ಎಸ್​ಸಿ ತಂಡದ ವಿರುದ್ಧ ಕೇವಲ 81 ಎಸೆತಗಳಲ್ಲಿ 23 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ ಅಜೇಯ 229 ರನ್ ಬಾರಿಸಿ ಸ್ಕಾಟ್ ಎಡ್ವರ್ಡ್ಸ್ ಟಿ20 ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಎಡ್ವರ್ಡ್ಸ್ ಅವರ ಈ ದ್ವಿಶತಕದ ನೆರವಿನಿಂದ ಆಲ್ಟೋನಾ ಸ್ಪೋರ್ಟ್ಸ್ ತಂಡ 20 ಓವರ್​ಗಳಲ್ಲಿ 302 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವಿಲಿಯಮ್ಸ್ ಲ್ಯಾಂಡಿಂಗ್ ಎಸ್​ಸಿ ತಂಡವು 118 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಲ್ಟೋನಾ ಸ್ಪೋರ್ಟ್ಸ್ ತಂಡ 186 ರನ್​​ಗಳ ಭರ್ಜರಿ ಜಯ ಸಾಧಿಸಿದೆ.

5 / 5
Follow Us
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?

ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?

‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು

ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ

ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು

ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ

ಜಬ್ಬಾರ್, ನಸೀರ್ ರಾಜೀನಾಮೆಗೆ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್!

ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್​ಗೂ ತೂಗುತ್ತಿ