AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಶುಭ್​ಮನ್ ಗಿಲ್, ಅಹಮದಾಬಾದ್​ ಪಿಚ್​ನಲ್ಲಿ ಹುಲಿ, ಇತರೆಡೆ…

Shubman Gill: ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ ಬ್ಯಾಟರ್ ಶುಭ್​ಮನ್ ಗಿಲ್ ವಿರುದ್ಧ ಇದೀಗ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಇದಾಗ್ಯೂ ಅವರನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಸಲಿದ್ದಾರಾ ಎಂಬುದೇ ಈಗ ಪ್ರಶ್ನೆ.

TV9 Web
| Updated By: ಝಾಹಿರ್ ಯೂಸುಫ್

Updated on: Jan 30, 2024 | 12:54 PM

ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್​ಮನ್ ಗಿಲ್ ಅವರ ಕಳಪೆ ಫಾರ್ಮ್​ನಿಂದ ಟೀಮ್ ಇಂಡಿಯಾ ಚಿಂತೆಗೀಡಾಗಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತ ತಂಡಕ್ಕೆ ಆಧಾರಸ್ತಂಭವಾಗಬೇಕಿದ್ದ ಗಿಲ್ ಹೋದ ಬೆನ್ನಲ್ಲೇ ಪೆವಿಲಿಯನ್​ಗೆ ಹಿಂತಿರುಗುತ್ತಿದ್ದಾರೆ.

1 / 7
ಹೈದರಾಬಾದ್​ನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 23 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದರ ಬೆನ್ನಲ್ಲೇ ಶುಭ್​ಮನ್ ಗಿಲ್ ಬ್ಯಾಟಿಂಗ್​ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು.

2 / 7
ಇದಕ್ಕೆ ಮುಖ್ಯ ಕಾರಣ ಗಿಲ್ ಅವರ ಕಳಪೆ ಪ್ರದರ್ಶನ. ಶುಭ್​ಮನ್ ಕೊನೆಯ 10 ಇನಿಂಗ್ಸ್​ಗಳಲ್ಲಿ ಒಂದೇ ಅರ್ಧಶತಕ ಬಾರಿಸಿಲ್ಲ. ಅಂದರೆ ಕೊನೆಯ ಹತ್ತು ಇನಿಂಗ್ಸ್​​ಗಳಲ್ಲಿ ಕ್ರಮವಾಗಿ 47, 6, 10, 29*, 2, 26, 36, 10, 23, 0 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿಯೇ ಗಿಲ್ ಆಯ್ಕೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

3 / 7
ಈ ಪ್ರಶ್ನೆಗಳ ನಡುವೆ ಶುಭ್​ಮನ್ ಗಿಲ್ ಕಳೆದ ವರ್ಷ ಶತಕ ಬಾರಿಸಿದ್ದರು ಎಂಬ ವಿಚಾರ ಕೂಡ ಮುನ್ನಲೆಗೆ ಬಂದಿವೆ. 2023 ರ ಮಾರ್ಚ್‌ನಲ್ಲಿ ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಿಲ್ 128 ರನ್ ಸಿಡಿಸಿದ್ದರು. ಆದರೆ ಈ ಮೂರಂಕಿ ಇನಿಂಗ್ಸ್​ ಬಳಿಕ ಗಿಲ್ ಸತತ ವೈಫಲ್ಯ ಅನುಭವಿಸಿದ್ದಾರೆ.

4 / 7
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ, ಶುಭ್​ಮನ್ ಗಿಲ್ ಅಹಮದಾಬಾದ್ ಪಿಚ್​ನಲ್ಲಿ ಮಾತ್ರ ಚೆನ್ನಾಗಿ ಆಡುತ್ತಾರೆ ಎಂಬ ಅಪವಾದ ಆಗಾಗ್ಗೆ ಕೇಳಿ ಬರುತ್ತಿರುವುದು. ಈ ಆರೋಪ ನಿಜ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಭ್​ಮನ್ ಗಿಲ್ 51ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅದೇ ಇತರೆ ಪಿಚ್​ಗಳಲ್ಲಿ ಗಿಲ್ ಅವರ ಸರಾಸರಿ ರನ್​ಗಳಿಕೆ​ 30 ದಾಟಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

5 / 7
ಅಹಮದಾಬಾದ್ ಪಿಚ್​ನಲ್ಲಿ ಶುಭ್​ಮನ್ ಗಿಲ್ ಟೆಸ್ಟ್ ಕ್ರಿಕೆಟ್​ನಲ್ಲಿ 51.33 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಹಾಗೆಯೇ ಟಿ20ಐ ಕ್ರಿಕೆಟ್​ನಲ್ಲಿ 126 ರ ಸರಾಸರಿ ಹೊಂದಿದ್ದರೆ, ಐಪಿಎಲ್​ನಲ್ಲಿ 66.9 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

6 / 7
ಆದರೆ ಇತರೆ ಪಿಚ್​ನಲ್ಲಿ ಗಿಲ್ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ಕೇವಲ 27.54 ರನ್​ಗಳು. ಇನ್ನು ಟಿ20 ಕ್ರಿಕೆಟ್​ನಲ್ಲಿ 16.07 ಹಾಗೂ ಐಪಿಎಲ್​ನಲ್ಲಿ 33.14 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅಂದರೆ ಅಹಮದಾಬಾದ್ ಪಿಚ್ ಅನ್ನು ಹೊರತುಪಡಿಸಿ ಗಿಲ್ ಇತರೆ ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಸ್ಪಷ್ಟ. ಹೀಗಾಗಿಯೇ ಶುಭ್​ಮನ್ ಗಿಲ್ ಅವರನ್ನು ಅಹದಾಬಾದ್​ನ ಹುಲಿ, ಇತರೆಡೆ____ಎಂದು ಗೇಲಿ ಮಾಡಲಾಗುತ್ತಿದೆ.

7 / 7
Follow us
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್

ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ

ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ

ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು

ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು

RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್

ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ

ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್