14 ಬೌಂಡರಿ, 7 ಸಿಕ್ಸರ್; ಸಿಡಿಲಬ್ಬರದ ಶತಕ ಬಾರಿಸಿದ ಸ್ಮೃತಿ ಮಂಧಾನ

Updated on: Sep 03, 2026 | 9:37 PM

ದುಬೈನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸ್ಮೃತಿ ಮಂಧಾನ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ತಂಡ ಹಾಂಗ್ ಕಾಂಗ್-ಚೀನಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಮಂಧಾನ 124 ರನ್ ಗಳಿಸಿ ಮಿಂಚಿದರು, ಇದು ಅವರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಎರಡನೇ ಶತಕವಾಗಿದೆ.

1 / 5
ದುಬೈನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ಏಷ್ಯಾಕಪ್​ನಲ್ಲಿ ಭಾರತ ವನಿತಾ ಪಡೆ ಇಂದು ತನ್ನ ಎರಡನೇ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡವನ್ನು ಎದುರಿಸಿದ ಹರ್ಮನ್​ಪ್ರೀತ್ ಕೌರ್ ಪಡೆ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್​ಗಳಲ್ಲಿ 193 ರನ್ ಕಲೆಹಾಕಿತು(PC-PTI).

ದುಬೈನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ಏಷ್ಯಾಕಪ್​ನಲ್ಲಿ ಭಾರತ ವನಿತಾ ಪಡೆ ಇಂದು ತನ್ನ ಎರಡನೇ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡವನ್ನು ಎದುರಿಸಿದ ಹರ್ಮನ್​ಪ್ರೀತ್ ಕೌರ್ ಪಡೆ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್​ಗಳಲ್ಲಿ 193 ರನ್ ಕಲೆಹಾಕಿತು(PC-PTI).

2 / 5

ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಉಪನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಮಂಧಾನ ಬಾರಿಸಿದ ಎರಡನೇ ಶತಕವೂ ಆಗಿದೆ. ಹಾಗೆಯೇ ಮಂಧಾನ ಅವರ ವೃತ್ತಿಜೀವನದ 18ನೇ ಅಂತರರಾಷ್ಟ್ರೀಯ ಶತಕವೂ ಇದಾಗಿದೆ(PC-PTI).

3 / 5

57 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ಗಳ ಸಹಿತ ಮಂಧಾನ ತಮ್ಮ ಶತಕ ಪೂರೈಸಿದರು. ಆರಂಭದಿಂದ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಮಂಧಾನ ತಮ್ಮ ಅರ್ಧಶತಕ ಪೂರೈಸಲು ಬರೋಬ್ಬರಿ 40 ಎಸೆತಗಳನ್ನು ತೆಗೆದುಕೊಂಡರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಮಂಧಾನ ಮೈದಾನದಲ್ಲಿ ಬೌಂಡರಿಗಳ ಮಳೆಗರೆದರು(PC-PTI).

4 / 5

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್​ಗೆ ಕೇವಲ 8 ಓವರ್​ಗಳಲ್ಲಿ 74 ರನ್​ಗಳ ಜೊತೆಯಾಟ ನೀಡಿದರು. ಶಫಾಲಿ 28 ರನ್​ಗಳಿಗೆ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು(PC-PTI).

5 / 5

ಅದಾದ ಬಳಿಕವೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಮಂಧಾನ, ಮೊದಲ ಪಂದ್ಯದ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಉತ್ತರ ನೀಡಿದರು. ಕೊನೆಯ ಓವರ್​ನಲ್ಲಿ ರನೌಟ್​ಗೆ ಬಲಿಯಾದ ಮಂಧಾನ ತಮ್ಮ ಈ ಶತಕದ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದರು(PC-PTI).

Loading...
Unable to load recommendations.
Follow Us