
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು? ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಹಾರ್ದಿಕ್ ಪಾಂಡ್ಯ ಜೊತೆಗೆ ನಿಂತವರು. ಅಂದರೆ ಐಪಿಎಲ್ ಪ್ರಿ-ಸೀಸನ್ ಫೋಟೋಶೂಟ್‌ನಲ್ಲಿ ಯಾರು ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಲ್ಲುತ್ತಾರೋ, ಅವರೇ ಆ ವರ್ಷದ ಐಪಿಎಲ್ ಚಾಂಪಿಯನ್ ಆಗ್ತಾರೆ!" ಇದಕ್ಕೆ ಸಾಕ್ಷಿಯೇ ಈ ಫೋಟೋಗಳು... (PC: IPL)

ಐಪಿಎಲ್ 2023: ಆ ವರ್ಷ ಗುಜರಾತ್ ಟೈಟಾನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರ ಪಕ್ಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ನಿಂತಿದ್ದರು. ಅಂತಿಮವಾಗಿ ಆ ಸೀಸನ್‌ನಲ್ಲಿ ಸಿಎಸ್‌ಕೆ ಚಾಂಪಿಯನ್ ಪಟ್ಟ ಅಲಂಕರಿಸಿತು. (PC: IPL)

ಐಪಿಎಲ್ 2024: ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ನಿಂತಿದ್ದರು. ಆ ವರ್ಷ ಕೆಕೆಆರ್ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. (PC: IPL)

ಐಪಿಎಲ್ 2025: ಕಳೆದ ವರ್ಷದ ಫೋಟೋಶೂಟ್‌ನಲ್ಲೂ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಂತಿದ್ದ ತಂಡದ ನಾಯಕನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿದರು. ಅಂದರೆ ಐಪಿಎಲ್ 2025 ರಲ್ಲಿ ಪಾಂಡ್ಯ ಜೊತೆ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ನಿಂತಿದ್ದರು. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. (PC: IPL)

ಐಪಿಎಲ್ 2026: ಈ ಬಾರಿಯ ಐಪಿಎಲ್ ಪ್ರಿ-ಸೀಸನ್ ಫೋಟೋಶೂಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಂತಿರುವುದು ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್. ಹೀಗಾಗಿ ಈ ಬಾರಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಲಿದೆಯಾ? ಅಥವಾ ಈ ಟ್ರೆಂಡ್ಗೆ ಆರ್ಸಿಬಿ ಇತಿಶ್ರೀ ಹಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. (PC: IPL)