AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ವಿಂಡೀಸ್ ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್‌ ಎದುರಾಳಿ ಇಂಗ್ಲೆಂಡ್‌

T20 World Cup semi-final: ಇಂಗ್ಲೆಂಡ್ ಗೆಲುವಿನಿಂದ ಟಿ20 ವಿಶ್ವಕಪ್ ಸೆಮಿಫೈನಲ್ ಚಿತ್ರಣ ಸ್ಪಷ್ಟವಾಗುತ್ತಿದೆ. ಪಾಕಿಸ್ತಾನದ ಅರ್ಹತೆ ನೆಟ್ ರನ್ ರೇಟ್ ಮೇಲೆ ಅವಲಂಬಿತವಾಗಿದೆ. ಭಾರತ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಎದುರಿಸುವ ಸಾಧ್ಯತೆಯಿದೆ. ಈ ಮಹತ್ವದ ಪಂದ್ಯ ಮುಂಬೈನಲ್ಲಿ ನಡೆಯುವ ನಿರೀಕ್ಷೆಯಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್​ನಲ್ಲಿ ಸಮಾನ ವಿಜಯ ಇತಿಹಾಸವಿದೆ.

ಪೃಥ್ವಿಶಂಕರ
|

Updated on: Feb 28, 2026 | 7:00 PM

Share
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಇಂಗ್ಲೆಂಡ್ ತಂಡ ಅಜೇಯವಾಗಿ ಸೆಮಿಫೈನಲ್​ಗೇರಿದೆ. ಇಂಗ್ಲೆಂಡ್ ಗೆಲುವಿನೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಕನಸು ಕೂಡ ಜೀವಂತವಾಗಿದೆ. ಇದೀಗ ಶ್ರೀಲಂಕಾ ವಿರುದ್ಧ ನಡೆಯಲಿರುವ ಕೊನೆಯ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ನೆಟ್​ ರನ್​ರೇಟ್​ನಿಂದ ಗೆದ್ದರೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.

1 / 6
ಅಲ್ಲದೆ, ಇಂಗ್ಲೆಂಡ್ ಗೆಲುವಿನಿಂದಾಗಿ, ಸೆಮಿಫೈನಲ್‌ನಲ್ಲಿ ಯಾವ 2 ತಂಡಗಳು ಪರಸ್ಪರ ಎದುರಾಗಲಿವೆ? ಎಂಬುದು ಕೂಡ ಭಾಗಶಃ ಖಚಿತವಾಗಿದೆ. ಸೆಮಿಫೈನಲ್ ತಲುಪಲು ಟೀಂ ಇಂಡಿಯಾ ಮಾರ್ಚ್ 1 ರ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ನಲ್ಲಿ ತನ್ನ ಮೂರನೇ ಮತ್ತು ಅಂತಿಮ ಪಂದ್ಯವನ್ನು ಆಡಬೇಕಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ನಲ್ಲಿ ನಿರ್ಣಾಯಕ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

2 / 6
ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ ಗ್ರೂಪ್ 1 ರ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಟೀಂ ಇಂಡಿಯಾ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

3 / 6
ನಿಯಮದ ಪ್ರಕಾರ, ಸೂಪರ್ 8 ಸುತ್ತಿನಲ್ಲಿ ಗ್ರೂಪ್ 1 ರಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಗ್ರೂಪ್ 2 ರಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಅಂದರೆ ಗ್ರೂಪ್ 1 ರಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಗ್ರೂಪ್ 2 ರಲ್ಲಿ 2ನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ.

4 / 6
ಹಾಗೆಯೇ ಗ್ರೂಪ್ ಎರಡಲ್ಲಿ ಅಗ್ರಸ್ಥಾನದಲ್ಲಿರುವ ತಂಡದಲಿರುವ ಗ್ರೂಪ್ ಎ ನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು  ಸೆಮಿಫೈನಲ್​ನಲ್ಲಿ ಎದುರಿಸಲಿದೆ. ಇಂಗ್ಲೆಂಡ್ ಗ್ರೂಪ್ 2 ರಲ್ಲಿ ಅಗ್ರಸ್ಥಾನದಲ್ಲಿದೆ. ಆದ್ದರಿಂದ, ಮಾರ್ಚ್ 1 ರ ಭಾನುವಾರ ವಿಂಡೀಸ್ ತಂಡವನ್ನು ಟೀಂ ಇಂಡಿಯಾ ಸೋಲಿಸಿದರೆ, ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

5 / 6
ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆಯ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇನ್ನು ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಉಭಯ ತಂಡಗಳು ಇದುವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

6 / 6
Follow Us
ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ

11 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ರಾಹುಲ್; ವಿಕೆಟ್ ಜಸ್ಟ್ ಮಿಸ್

ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್

ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?

ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್

ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ

ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ