- Kannada News Photo gallery Cricket photos T20 World Cup Shocks: Underdog Victories That Rewrote Cricket History
ಬಲಿಷ್ಠ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್ನಿಂದ ಹೊರಹಾಕಿದ ದುರ್ಬಲ ತಂಡಗಳಿವು
Biggest T20 World Cup Upsets: ಟಿ20 ಕ್ರಿಕೆಟ್ ಅನಿರೀಕ್ಷಿತತೆಯ ಆಟ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಲವು ದುರ್ಬಲ ತಂಡಗಳು ಬಲಿಷ್ಠ ತಂಡಗಳನ್ನು ಸೋಲಿಸಿ ಅಚ್ಚರಿ ಮೂಡಿಸಿವೆ. 2024ರಲ್ಲಿ ಅಮೆರಿಕ ಪಾಕಿಸ್ತಾನವನ್ನು, ಅಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಸೋಲಿಸಿದರೆ, 2022ರಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಮತ್ತು ನಮೀಬಿಯಾ ಶ್ರೀಲಂಕಾವನ್ನು ಸೋಲಿಸಿದ್ದವು. ಈ ಅನಿರೀಕ್ಷಿತ ಫಲಿತಾಂಶಗಳು ಪಂದ್ಯಾವಳಿಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿವೆ.
Updated on: Feb 05, 2026 | 8:11 PM

ಟಿ20 ಕ್ರಿಕೆಟ್ನಲ್ಲಿ ಯಾವ ತಂಡ ದುರ್ಬಲ ಯಾವ ತಂಡ ಬಲಿಷ್ಠ ಎಂದು ಹೇಳುವುದು ಕಷ್ಟಕರ. ಏಕೆಂದರೆ ಪಂದ್ಯದ ದಿನದಂದು ಯಾವ ತಂಡ ಉತ್ತಮ ಪ್ರದರ್ಶನ ನೀಡುತ್ತದೋ ಆ ತಂಡಕ್ಕೆ ಗೆಲುವು ಧಕ್ಕುತ್ತದೆ. ಅದೇ ರೀತಿ ಟಿ20 ವಿಶ್ವಕಪ್ ಇತಿಹಾಸದಲ್ಲೂ ಕೆಲವು ಬಲಿಷ್ಠ ತಂಡಗಳಿಗೆ ನೀರು ಕುಡಿಸಿರುವ ಕೆಲವು ದುರ್ಬಲ ತಂಡಗಳು ಪಂದ್ಯಾವಳಿಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿವೆ. ಅಂತಹ ಕೆಲವು ಅಚ್ಚರಿಯ ಫಲಿತಾಂಶಗಳ ಪಟ್ಟಿ ಇಲ್ಲಿದೆ.

2024 ರ ಟಿ20 ವಿಶ್ವಕಪ್‌ನಲ್ಲಿ ಪಾದಾರ್ಪಣೆ ಮಾಡಿದ ಅಮೆರಿಕ ತಂಡ ಆಡಿದ ಮೊದಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿತು. ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಮೆರಿಕ ಎಲ್ಲರನ್ನೂ ಅಚ್ಚರಿಗೊಳಿಸಿತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಅಮೆರಿಕ ಸೂಪರ್ ಓವರ್‌ನಲ್ಲಿ 18 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

2024ರ ಟಿ20 ವಿಶ್ವಕಪ್ನ ಮತ್ತೊಂದು ಅಚ್ಚರಿಯ ಫಲಿತಾಂಶವೆಂದರೆ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ದು. ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 148 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಆಸ್ಟ್ರೇಲಿಯಾ ಟೂರ್ನಮೆಂಟ್ನಿಂದ ಹೊರಬಿತ್ತು.

2022 ರ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಚಿತ್ರಣ ಕಂಡುಬಂದಿತ್ತು. ಜಿಂಬಾಬ್ವೆ, ಪಾಕಿಸ್ತಾನವನ್ನು ಕೇವಲ ಒಂದು ರನ್‌ನಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 130 ರನ್‌ಗಳನ್ನು ಗಳಿಸಿರೆ, ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ ಕೇವಲ 129 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ಊಹಿಸಲಾಗಿತ್ತು. ಆದರೆ ಕೇವಲ 1 ರನ್‌ನಿಂದ ಸೋತಿತ್ತು.

ಕ್ರಿಕೆಟ್ ಶಿಶು ನಮೀಬಿಯಾ ಕೂಡ 2022 ರ ಟಿ20 ವಿಶ್ವಕಪ್‌ನಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಆವೃತ್ತಿಯಲ್ಲಿ ನಮೀಬಿಯಾ ಬಲಿಷ್ಠ ಶ್ರೀಲಂಕಾವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 163 ರನ್ ಗಳಿಸಿದರೆ ಶ್ರೀಲಂಕಾದ ಇನ್ನಿಂಗ್ಸ್ ಕೇವಲ 108 ರನ್‌ಗಳಿಗೆ ಕೊನೆಗೊಂಡಿತು. ಹೀಗಾಗಿ ನಮೀಬಿಯಾ ಪಂದ್ಯವನ್ನು 55 ರನ್‌ಗಳಿಂದ ಗೆದ್ದುಕೊಂಡಿತು.

2009 ರ ಟಿ20 ವಿಶ್ವಕಪ್‌ನಲ್ಲೂ ನೆದರ್ಲ್ಯಾಂಡ್ಸ್ ಇದೇ ರೀತಿಯ ಸಾಧನೆ ಮಾಡಿತು. ಗುಂಪು ಹಂತದಲ್ಲಿ ಇಂಗ್ಲೆಂಡ್ ಲೆಕ್ಕಾಚಾರವನ್ನು ಬುಡಮೇಲು ಮಾಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಕೊನೆಯ ಎಸೆತದಲ್ಲಿ ಗೆಲುವಿನ ಪತಾಕೆ ಹಾರಿಸಿತು. ಇಂಗ್ಲೆಂಡ್ 4 ವಿಕೆಟ್ಗಳಿಂದ ಸೋತಿತು.
