Tim Southee: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಟಿಮ್ ಸೌಥಿ

| Updated By: ಝಾಹಿರ್ ಯೂಸುಫ್

Updated on: Dec 02, 2023 | 6:28 PM

Tim Southee Records: ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಸೌಥಿ 24 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 34 ರನ್ ಬಾರಿಸಿದ್ದರು. ಈ ವೇಳೆ ಸಿಡಿಸಿದ ಸಿಕ್ಸ್​ಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 9 ತಂಡಗಳ ವಿರುದ್ಧ ಸಿಕ್ಸರ್​ಗಳನ್ನು ಬಾರಿಸಿದ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

1 / 5
ಸಿಲ್ಹೆಟ್​ನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 2 ಸಿಕ್ಸ್ ಸಿಡಿಸುವ ಮೂಲಕ ನ್ಯೂಝಿಲೆಂಡ್ ಆಟಗಾರ ಟಿಮ್ ಸೌಥಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ವಿಶ್ವ ದಾಖಲೆ ಎಂಬುದು ವಿಶೇಷ.

2 / 5
ಆತಿಥೇಯ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಸೌಥಿ 24 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 34 ರನ್ ಬಾರಿಸಿದ್ದರು. ಈ ವೇಳೆ ಸಿಡಿಸಿದ ಸಿಕ್ಸ್​ಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 9 ತಂಡಗಳ ವಿರುದ್ಧ ಸಿಕ್ಸರ್​ಗಳನ್ನು ಬಾರಿಸಿದ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

3 / 5
ಅಂದರೆ ಟಿಮ್ ಸೌಥಿ ಎದುರಿಸಿದ 9 ಟೆಸ್ಟ್ ತಂಡಗಳ ವಿರುದ್ಧ ಕೂಡ ಸಿಕ್ಸ್​ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ 25 ಸಿಕ್ಸ್​ಗಳನ್ನು ಬಾರಿಸಿದ್ದರೆ, ಭಾರತದ ವಿರುದ್ಧ 15 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಸೌಥಿ ಬ್ಯಾಟ್​ನಿಂದ 12 ಸಿಕ್ಸ್​ಗಳು ಮೂಡಿಬಂದಿವೆ.

4 / 5
ಹಾಗೆಯೇ ಪಾಕಿಸ್ತ್ತಾನ್ ವಿರುದ್ಧ 10 ಸಿಕ್ಸ್​, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ತಲಾ 9 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಇನ್ನು ಬಾಂಗ್ಲಾದೇಶ್ ವಿರುದ್ಧ ಹಾಗೂ ಸೌತ್ ಆಫ್ರಿಕಾ ವಿರುದ್ಧ ತಲಾ 2 ಸಿಕ್ಸ್​ಗಳನ್ನು ಬಾರಿಸಿದ್ದಾರೆ. ಇದಲ್ಲದೆ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟಿಮ್ ಸೌಥಿ 1 ಸಿಕ್ಸ್​ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

5 / 5
ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 9 ತಂಡಗಳ ವಿರುದ್ಧ ಸಿಕ್ಸ್ ಸಿಡಿಸಿದ ವಿಶೇಷ ದಾಖಲೆಯನ್ನು ಟಿಮ್ ಸೌಥಿ ತಮ್ಮದಾಗಿಸಿಕೊಂಡಿರುವುದು ವಿಶೇಷ.