AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ತಂಡಕ್ಕೆ ಟಿಮ್ ಡೇವಿಡ್ ಎಂಟ್ರಿ

The Hundred 2026: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. 8 ತಂಡಗಳ ನಡುವಣ ಈ ಕ್ರಿಕೆಟ್ ಪಂದ್ಯಾವಳಿಯು 100 ಎಸೆತಗಳಲ್ಲಿ ನಡೆಯುತ್ತವೆ. ಅಂದರೆ ಅಂದರೆ ಟಿ20 ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್​ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಇದೀಗ ಈ ಟೂರ್ನಿಯಲ್ಲಿ ಹೊಸ ತಂಡದ ಪರ ಕಣಕ್ಕಿಳಿಯಲು ಆಸ್ಟ್ರೇಲಿಯಾ ದಾಂಡಿಗ ಟಿಮ್ ಡೇವಿಡ್ ಒಪ್ಪಂದ ಮಾಡಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 15, 2026 | 8:54 AM

Share
ಇಂಗ್ಲೆಂಡ್​​ನಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯಲ್ಲಿ ಆಸ್ಟ್ರೇಲಿಯನ್ ದಾಂಡಿಗ ಟಿಮ್ ಡೇವಿಡ್ (Tim David) ಟ್ರೆಂಟ್ ರಾಕೆಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ನೇರ ಸೈನಿಂಗ್ ಆಯ್ಕೆಯ ಮೂಲಕ ಟ್ರೆಂಟ್ ರಾಕೆಟ್ಸ್ ಫ್ರಾಂಚೈಸಿಯು ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

1 / 5
ದಿ ಹಂಡ್ರೆಡ್ ಲೀಗ್​​ನ 5ನೇ ಸೀಸನ್​​ನಲ್ಲಿ ಟಿಮ್ ಡೇವಿಡ್ ಸದರ್ನ್ ಬ್ರೇವ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಇದೀಗ ಸದರ್ನ್ ಬ್ರೇವ್ ತಂಡದ ಫ್ರಾಂಚೈಸಿ ಪಾಲುದಾರಿಕೆಯನ್ನು ಡೆಲ್ಲಿ ಕ್ಯಾಪಿಟಲ್ಸ್​ನ ಸಹ ಮಾಲೀಕರಾದ ಜಿಎಂಆರ್​ ಕಂಪೆನಿ ಖರೀದಿಸಿದೆ. ಹೀಗಾಗಿ ಈ ಬಾರಿ ಸದರ್ನ್​ ಬ್ರೇವ್ ತಂಡವು ಹೊಸ ಹೆಸರಿನಲ್ಲಿ ಕಣಕ್ಕಿಳಿಯಲಿದೆ.

2 / 5
ಇದರ ನಡುವೆ ದಿ ಹಂಡ್ರೆಡ್ ಲೀಗ್ 2025 ರಲ್ಲಿ ಸದರ್ನ್ ಬ್ರೇವ್ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಟ್ರೆಂಟ್ ರಾಕೆಟ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ಅದರಂತೆ 100 ಎಸೆತಗಳ ಟೂರ್ನಿಯಲ್ಲಿ ಟಿಮ್ 'ರಾಕೆಟ್ಸ್' ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

3 / 5
ಅಂದಹಾಗೆ ದಿ ಹಂಡ್ರೆಡ್ ಲೀಗ್ ಎಂಬುದು 100 ಎಸೆತಗಳ ಟೂರ್ನಿ. ಟಿ20 ಮಾದರಿಯಲ್ಲೇ ನಡೆಯುವ ಈ ಟೂರ್ನಿಯಲ್ಲಿ ಪ್ರತಿ ಇನಿಂಗ್ಸ್​ನಲ್ಲಿ 100 ಎಸೆತಗಳನ್ನು ಎಸೆಯಲಾಗುತ್ತದೆ. ಅಂದರೆ ಇಲ್ಲಿ ಒಂದು ಓವರ್​​ಗೆ 6 ಎಸೆತಗಳಿರುವುದಿಲ್ಲ. ಬದಲಾಗಿ 5 ಎಸೆತಗಳನ್ನು ಎಸೆಯಲಾಗುತ್ತದೆ. ಅಲ್ಲದೆ ಒಬ್ಬ ಬೌಲರ್​​ಗಳು ಎರಡು ಓವರ್​​ಗಳನ್ನು ಅಂದರೆ ಸತತ 10 ಎಸೆತಗಳನ್ನು ಎಸೆಯಲು ಇಲ್ಲಿ ಅವಕಾಶ ನೀಡಲಾಗುತ್ತದೆ.

4 / 5
ಹೀಗೆ ವಿಭಿನ್ನ ನಿಯಮಗಳನ್ನು ಹೊಂದಿರುವ ದಿ ಹಂಡ್ರೆಡ್ ಲೀಗ್​​ನಲ್ಲಿ ಐಪಿಎಲ್ ಫ್ರಾಂಚೈಸಿಗಳು ನಾಲ್ಕು ತಂಡಗಳನ್ನು ಖರೀದಿಸಿದ್ದಾರೆ. ಅದರಂತೆ ಮುಂಬರುವ ದಿ ಹಂಡ್ರೆಡ್ ಲೀಗ್​​​ನಲ್ಲಿ ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್), ಎಂಐ ಲಂಡನ್ (ಮುಂಬೈ ಇಂಡಿಯನ್ಸ್), ಮ್ಯಾಚೆಂಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್), ಸದರ್ನ್ ಬ್ರೇವ್ (ಜಿಎಂಆರ್​- ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕರು) ತಂಡಗಳು ಕಣಕ್ಕಿಳಿಯಲಿವೆ.

5 / 5