
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ ಇದೀಗ ವಿಂಡೀಸ್ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾರೆ(PC-PTI).
ಉಭಯ ತಂಡಗಳ ನಡುವಿನ ಏಕದಿನ ಸರಣಿಗೂ ಮುನ್ನ ಜಿಯೋಹಾಟ್‌ಸ್ಟಾರ್ ಜೊತೆ ಮಾತನಾಡಿರುವ ಕೊಹ್ಲಿ ತಾನು ಯಾವಾಗ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡುತ್ತೇನೆ ಎಂಬುದನ್ನು ಖಚಿತಪಡಿಸಿದ್ದಾರೆ. 2027 ರ ವಿಶ್ವಕಪ್ ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಎಂದು ಕೊಹ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ(PC-PTI).
ಜಿಯೋಹಾಟ್‌ಸ್ಟಾರ್ ಜೊತೆ ಮಾತನಾಡಿರುವ ವಿರಾಟ್ ಕೊಹ್ಲಿ, ‘2027 ರ ಏಕದಿನ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಆಗಿರಲಿದೆ. ವಿಶ್ವಕಪ್ ವಿದೇಶಿ ಪರಿಸ್ಥಿತಿಗಳಲ್ಲಿ ನಡೆಯಲಿದ್ದು ಇದಕ್ಕೆ ಸಾಕಷ್ಟು ಶಕ್ತಿ ಮತ್ತು ಕಠಿಣ ಪರಿಶ್ರಮ ಬೇಕಾಗುತ್ತದೆ. ಇದು ನನ್ನ ಕೊನೆಯ ವಿಶ್ವಕಪ್ ಆಗಿರುವುದರಿಂದ ಇದು ನನ್ನ ಪ್ರೇರಣೆಯ ಮೂಲವಾಗಿದೆ. ವಿಶ್ವಕಪ್ ಗೆಲುವಿಗಾಗಿ ನಾನು ನನ್ನ ಎಲ್ಲವನ್ನೂ ನೀಡಲು ಸಿದ್ಧನಿದ್ದೇನೆ(PC-PTI).
ಅದರಲ್ಲೂ 50 ಓವರ್‌ಗಳ ಸ್ವರೂಪವು ಒಂದು ವಿಶಿಷ್ಟ ಸವಾಲನ್ನು ಒಡ್ಡುತ್ತದೆ. ಒಂದು ಏಕದಿನ ಪಂದ್ಯವನ್ನಾಡುವುದು ಒಂದೇ ದಿನದಲ್ಲಿ ಎರಡೂವರೆ ಟಿ20 ಪಂದ್ಯಗಳನ್ನು ಆಡುವುದಕ್ಕೆ ಸಮ. ಹೀಗಿರುವಾಗ ಇಡೀ ಟೂರ್ನಿಯಲ್ಲಿ ಅಂತಹ 10 ಪಂದ್ಯಗಳನ್ನು ಆಡುವುದು ಸವಾಲಿನದ್ದಾಗಿರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ(PC-PTI).
ವಿರಾಟ್ ಕೊಹ್ಲಿಗೆ ಐದನೇ ಏಕದಿನ ವಿಶ್ವಕಪ್ ಆಗಲಿದೆ. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 2011 ಮತ್ತು 2023 ರಲ್ಲಿ ಎರಡು ವಿಶ್ವಕಪ್ ಫೈನಲ್‌ಗಳನ್ನು ಆಡಿದ್ದಾರೆ. 2011 ರ ವಿಶ್ವಕಪ್ ಫೈನಲ್‌ನಲ್ಲಿ, ಕೊಹ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ 35 ರನ್ಗಳ ಇನ್ನಿಂಗ್ಸ್ ಆಡಿದರೆ, 2023 ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 54 ರನ್ ಬಾರಿಸಿದ್ದರು. ಆದಾಗ್ಯೂ ಭಾರತ ತಂಡ ಆ ಫೈನಲ್ ಪಂದ್ಯವನ್ನು 6 ವಿಕೆಟ್‌ಗಳಿಂದ ಸೋತಿತು(PC-PTI).
ಮುಂದಿನ ವರ್ಷದ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. 2027 ರ ಏಕದಿನ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ವಿಶ್ವಕಪ್‌ನ ಸ್ವರೂಪವನ್ನು ಸಹ ಬದಲಾಯಿಸಲಾಗಿದ್ದು, 14 ತಂಡಗಳು ಟ್ರೋಫಿಗಾಗಿ ಸ್ಪರ್ಧಿಸಲಿವೆ(PC-PTI).
Published On - 4:43 pm, Sat, 26 September 26