- Kannada News Photo gallery Cricket photos Virat kohli and anushka sharma visited nainital kainchi dham temple
ಮಡದಿ- ಮಗಳೊಂದಿಗೆ ನೈನಿತಾಲ್ಗೆ ಹಾರಿದ ಕೊಹ್ಲಿ: ಕೈಂಚಿ ಧಾಮ್ ದೇವಾಲಯಕ್ಕೆ ಭೇಟಿ; ಫೋಟೋ ನೋಡಿ
Virat-Anushka: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಭಾರತಕ್ಕೆ ಮರಳಿದ ನಂತರ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ರಜೆಯ ಮೇಲೆ ತೆರಳಿದ್ದಾರೆ.
Updated on:Nov 17, 2022 | 2:01 PM

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಭಾರತಕ್ಕೆ ಮರಳಿದ ನಂತರ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ರಜೆಯ ಮೇಲೆ ತೆರಳಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ನೈನಿತಾಲ್ ತಲುಪಿದ್ದಾರೆ. ಅವರ ಜೊತೆ ಪತ್ನಿ ಅನುಷ್ಕಾ ಹಾಗೂ ಮಗಳು ವಾಮಿಕಾ ಕೂಡ ಅಲ್ಲಿಗೆ ಹೋಗಿದ್ದಾರೆ.

ಬೆಳಗ್ಗೆ ವಿರಾಟ್ ಕೊಹ್ಲಿ ಪತ್ನಿ ಮತ್ತು ನಟಿ ಅನುಷ್ಕಾ ಅವರೊಂದಿಗೆ ಅಲ್ಮೋರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೈಂಚಿ ಧಾಮ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಬಾಬಾ ನೀಮ್ ಕರೋಲಿ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಪ್ರಸಾದ ಸೇವಿಸಿ ಅಲ್ಲಿಂದ ತೆರೆಳಿದ್ದಾರೆ.

ದೇವಸ್ಥಾನದಿಂದ ಕೊಹ್ಲಿ ದಂಪತಿಗಳು ತಮ್ಮ ರೆಸಾರ್ಟ್‌ಗೆ ಹಿಂದಿರುಗುವ ಮೊದಲು ದೇವಾಲಯದ ಸದಸ್ಯರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳಲ್ಲಿ ಮಡದಿ ಅನುಷ್ಕಾ ಕೂಡ ವಿರಾಟ್ ಜೊತೆ ಇರುವುದನ್ನು ಕಾಣಬದಹುದಾಗಿದೆ. ವಿರಾಟ್ ಮತ್ತು ಅನುಷ್ಕಾ ಅವರನ್ನು ನೋಡಲು ಬೆಳಗ್ಗೆಯಿಂದಲೇ ಕೈಂಚಿ ಧಾಮದಲ್ಲಿ ಜನಸಾಗರವೇ ಸೇರಿತ್ತು ಎಂದು ವರದಿಯಾಗಿದೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬುಧವಾರ ಮಧ್ಯಾಹ್ನ 3.30 ಕ್ಕೆ ತಮ್ಮ ಮಗಳೊಂದಿಗೆ ಘೋರಖಾಲ್ ಸೈನಿಕ ಶಾಲೆಗೆ ತಲುಪಿದರು. ಇಬ್ಬರೂ ಹೆಲಿಕಾಪ್ಟರ್‌ನಿಂದ ಕೆಳಗಿಳಿದ ಕೂಡಲೇ ಕಾದು ನಿಂತಿದ್ದ ಶಾಲಾ ಮಕ್ಕಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರಾದರೂ ಯಾರನ್ನೂ ಭೇಟಿಯಾಗದೆ ಈ ದಂಪತಿ ಕಾರಿನಲ್ಲಿ ಹೊರಟರು.

ಅಲ್ಲಿಗೆ ತಲುಪುವ ಮೊದಲು ಈ ದಂಪತಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಭೇಟಿಯಾಗಿದ್ದರು. ಅನುಪಮ್ ಖೇರ್ ದಂಪತಿಗಳೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಈ ಹಠಾತ್ ಭೇಟಿಯಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.
Published On - 2:01 pm, Thu, 17 November 22




