Virat kohli: ವಿರಾಟ್ ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವ ತ್ಯಜಿಸುವ ಸಾಧ್ಯತೆ..!

Team India Captain: 2- ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಎಂಬ ಮಾಸ್ಟರ್​ಪೀಸ್ ಕೋಚ್ ಸಿಕ್ಕಿದ್ದಾರೆ. ಮಾಜಿ ಕೋಚ್ ರವಿಶಾಸ್ತ್ರಿ ಜೊತೆ ವಿರಾಟ್ ಕೊಹ್ಲಿ ಬಾಂಧವ್ಯ ಉತ್ತಮವಾಗಿತ್ತು. ಹೊಸ ಮ್ಯಾನೇಜ್‌ಮೆಂಟ್‌ನ ಆಗಮನದಿಂದ ಸೀಮಿತ ಓವರ್​ಗಳ ನಾಯಕ ಕೂಡ ಬದಲಾಗಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 09, 2021 | 6:58 PM

ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವವನ್ನು ಬಿಟ್ಟು ಕೊಟ್ಟಿದ್ದ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಲಾಗಿದೆ. ಅಂದರೆ ಕೊಹ್ಲಿಗೆ ಏಕದಿನ ತಂಡದ ನಾಯಕನಾಗಿ ಮುಂದುವರೆಯುವ ಆಸೆಯಿತ್ತು. ಇದಾಗ್ಯೂ  ಅವರನ್ನು ಕೆಳಗಿಳಿಸಿ ಬಿಸಿಸಿಐ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.

1 / 8
ಆದರೆ ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ, ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ಕೂಡ ತ್ಯಜಿಸುವ ಸಾಧ್ಯತೆಯಿದೆ. ಏಕೆಂದರೆ ಏಕದಿನ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿರುವ ಬಗ್ಗೆ ಖುದ್ದು ವಿರಾಟ್ ಕೊಹ್ಲಿಯಲ್ಲೂ ಅಸಮಾಧಾನವಿದೆ. ಇತ್ತ ಹೊಸ ಕೋಚ್ ರಾಹುಲ್ ದ್ರಾವಿಡ್ ರೋಹಿತ್ ಶರ್ಮಾ ಸೂಕ್ತ ನಾಯಕ ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಹೀಗಾಗಿ ಟೆಸ್ಟ್ ತಂಡದ ನಾಯಕತ್ವವನ್ನೂ ಕೊಹ್ಲಿ ತೊರೆಯಬಹುದು. ಏಕೆಂದರೆ....

2 / 8
1- 2019 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಶತಕ ಗಳಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ಒತ್ತಡವನ್ನು ಕಡಿಮೆ ಮಾಡಲು ಮತ್ತು ಬ್ಯಾಟಿಂಗ್ ಮೇಲೆ ಕೇಂದ್ರೀಕರಿಸಲು ನಾಯಕತ್ವವನ್ನು ತ್ಯಜಿಸಬಹುದು. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಕೂಡ ಮೂಡಿಬಂದಿರಲಿಲ್ಲ. ಹೀಗಾಗಿ ಸಂಪೂರ್ಣ ಹೊರೆಯನ್ನು ಕೆಳಗಿಳಿಸಿ ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಬಹುದು.

3 / 8
2- ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಎಂಬ ಮಾಸ್ಟರ್​ಪೀಸ್  ಕೋಚ್ ಸಿಕ್ಕಿದ್ದಾರೆ. ಮಾಜಿ ಕೋಚ್ ರವಿಶಾಸ್ತ್ರಿ ಜೊತೆ ವಿರಾಟ್ ಕೊಹ್ಲಿ ಬಾಂಧವ್ಯ ಉತ್ತಮವಾಗಿತ್ತು. ಹೊಸ ಮ್ಯಾನೇಜ್‌ಮೆಂಟ್‌ನ ಆಗಮನದಿಂದ ಸೀಮಿತ ಓವರ್​ಗಳ ನಾಯಕ ಕೂಡ ಬದಲಾಗಿದ್ದಾರೆ. ಅಂದರೆ ಪ್ರಸ್ತುತ ಟೀಮ್ ಮ್ಯಾನೇಜ್ಮೆಂಟ್​ ರೋಹಿತ್ ಶರ್ಮಾ ಅವರ ನಾಯಕತ್ವದ ಮೇಲೆ ಹೆಚ್ಚಿನ ನಂಬಿಕೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕನಾಗಿ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬ ಒತ್ತಡ ಕೂಡ ಕೊಹ್ಲಿ ಮೇಲಿರಲಿದೆ. ಹೀಗಾಗಿ ಖುದ್ದು ಕೊಹ್ಲಿಯೇ ನಾಯಕತ್ವವನ್ನು ತ್ಯಜಿಸಬಹುದು.

4 / 8
3- ಕೊರೋನಾ ನಡುವೆ, ವಿರಾಟ್ ಕೊಹ್ಲಿ ಮಾನಸಿಕ ಆರೋಗ್ಯ ಮತ್ತು ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆಟಗಾರರು ಬಯೋ ಬಬಲ್‌ನಲ್ಲಿ ದೀರ್ಘಕಾಲ ಉಳಿಯುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ತಂಡ ಸತತವಾಗಿ ಸರಣಿ ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯಲು ಇದೂ ಒಂದು ದೊಡ್ಡ ಕಾರಣ ಎನ್ನಬಹುದು.

5 / 8
 4- ವಿರಾಟ್ ಕೊಹ್ಲಿಯಿಂದ ಏಕದಿನ ತಂಡದ ನಾಯಕತ್ವವನ್ನು ಕಿತ್ತೊಗೆಯಲಾಗಿದೆ ಎಂದರೆ ಬಿಸಿಸಿಐ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಹೀಗಿರುವಾಗ ಆಯ್ಕೆದಾರರಿಂದ ಹಿಡಿದು ಮಂಡಳಿಯ ಅಧಿಕಾರಿಗಳವರೆಗೂ ನಾಯಕನಾಗಿ ಅವರ ಮೇಲಿನ ನಂಬಿಕೆ ಕಡಿಮೆಯಾಗಿದೆ. ಈಗ ಅವರು ಟೆಸ್ಟ್ ತಂಡದಲ್ಲಿ ಯಾವುದೇ ಆಟಗಾರನ ಪರವಾಗಿ ವಕಾಲತ್ತು ವಹಿಸಲು ಸಾಧ್ಯವಿಲ್ಲ. ರೋಹಿತ್‌ ಅವರನ್ನು ಟೆಸ್ಟ್‌ನ ಉಪನಾಯಕರನ್ನಾಗಿ ನೇಮಿಸಿರುವುದು ಕೂಡ ಬಿಸಿಸಿಐನ ಮುಂದಿನ ನಡೆಯತ್ತ ಬೊಟ್ಟು ಮಾಡುತ್ತಿದೆ.

6 / 8
5- ನಾಯಕನಾಗಿ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಸಾಧನೆ ಮಾಡಿದ್ದಾರೆ. ಇದಾಗ್ಯೂ ದೊಡ್ಡ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಟಿ20 ಹಾಗೂ ಏಕದಿನ ವಿಶ್ವಕಪ್​ನಲ್ಲಿ ಕೊಹ್ಲಿ ಟ್ರೋಫಿ ಗೆಲ್ಲಲಾಗಲಿಲ್ಲ ಎಂಬ ವಾದಗಳು ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲೂ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋತಿತ್ತು. ಇಲ್ಲಿ ಕೊಹ್ಲಿ ಏಕದಿನ ಹಾಗೂ ಟಿ20 ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮವಾಗಿ ಪ್ರಮುಖ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲದಿರುವುದನ್ನು ಪರಿಗಣಿಸಿರುವುದು ಸ್ಪಷ್ಟ. ಹಾಗೆ ನೋಡಿದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ಕೊಹ್ಲಿ ನಾಯಕತ್ವದಲ್ಲಿ ತಂಡ ಸೋತಿದೆ.

7 / 8
ಹೀಗಾಗಿ ಅವರ ಗೆಲುವಿನ ಶೇಕಡವಾರು ಲೆಕ್ಕಚಾರಗಳನ್ನು ಪರಿಗಣಿಸಿ ಬಿಸಿಸಿಐ ವಿರಾಟ್ ಕೊಹ್ಲಿಯನ್ನೇ ಟೆಸ್ಟ್​ನಲ್ಲಿ ಮುಂದುವರೆಸಲು ಬಯಸುವುದಿಲ್ಲ. ಹೀಗಾಗಿ ಟೆಸ್ಟ್​ ತಂಡದ ನಾಯಕತ್ವದಿಂದ ಕೂಡ ಕೆಳಗಿಳಿಸಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈ ಹಿಂದೆ ಟಿ20 ನಾಯಕತ್ವ ಸ್ಥಾನ ತ್ಯಜಿಸಬೇಕೆಂದು ತಿಳಿಸಿದ್ದ ಬಿಸಿಸಿಐ, ಬಳಿಕ ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಯಬೇಕೆಂದು ಸೂಚಿಸಿತು. ಹೀಗಾಗಿ ಮುಂದಿನ ದಿನಗಳಲ್ಲಿ ಟೆಸ್ಟ್ ತಂಡದ ನಾಯಕತ್ವ ಬದಲಾದರೂ ಅಚ್ಚರಿಪಡಬೇಕಿಲ್ಲ.

8 / 8
Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್