ರನ್ ಚೇಸ್ ಅಂದರೆ ವಿರಾಟ್ ಕೊಹ್ಲಿಯದ್ದೇ ಸಾಮ್ರಾಜ್ಯ; ಸಚಿನ್ ದಾಖಲೆ ಈಗ ಕಿಂಗ್ ಪಾಲು!

Updated on: Nov 04, 2026 | 7:07 PM

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರು ರನ್ ಚೇಸ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನಲ್ಲಿ 74 ರನ್ ಗಳಿಸಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ಮೂರನೇ ಕ್ರಮಾಂಕದಲ್ಲಿ 13,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಆಗಿದ್ದಾರೆ. ಕೊಹ್ಲಿ ಈಗ ಏಕದಿನ ರನ್ ಚೇಸ್‌ನಲ್ಲಿ 30 ಶತಕಗಳನ್ನು ಹೊಂದಿದ್ದಾರೆ.

1 / 7
ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ದಾಖಲೆಯ ಓಟವನ್ನು ಮುಂದುವರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿರುವ ಕೊಹ್ಲಿ, ರನ್ ಚೇಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ(PC-PTI).

ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ದಾಖಲೆಯ ಓಟವನ್ನು ಮುಂದುವರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿರುವ ಕೊಹ್ಲಿ, ರನ್ ಚೇಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ(PC-PTI).

2 / 7

ಬುಧವಾರ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಗುರಿ ಬೆನ್ನಟ್ಟುವ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು ಕೇವಲ 51 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿದರು(PC-PTI).

3 / 7

ಏಕದಿನ ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವಾಗ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 242 ಇನಿಂಗ್ಸ್‌ಗಳಲ್ಲಿ 42.33ರ ಸರಾಸರಿಯಲ್ಲಿ 8,720 ರನ್ ಬಾರಿಸಿದ್ದರು. ಇದರಲ್ಲಿ 17 ಶತಕ ಹಾಗೂ 52 ಅರ್ಧಶತಕಗಳು ಸೇರಿದ್ದವು(PC-PTI).

4 / 7

ಆದರೆ ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ರನ್ ಚೇಸ್‌ನಲ್ಲಿ ಕೊಹ್ಲಿ 180 ಪಂದ್ಯಗಳ 169 ಇನಿಂಗ್ಸ್‌ಗಳಲ್ಲಿ 66.21ರ ಅದ್ಭುತ ಸರಾಸರಿಯಲ್ಲಿ 8,741 ರನ್ ಕಲೆಹಾಕಿದ್ದಾರೆ. ಅವರ ಖಾತೆಯಲ್ಲಿ 30 ಶತಕ ಹಾಗೂ 46 ಅರ್ಧಶತಕಗಳಿವೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ(PC-PTI).

5 / 7

ಭಾರತ ತಂಡ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದ ಪಂದ್ಯಗಳಲ್ಲಿ ಕೊಹ್ಲಿ ಅವರ ಅಂಕಿಅಂಶಗಳು ಇನ್ನೂ ಅದ್ಭುತವಾಗಿವೆ. ಇಂತಹ ಪಂದ್ಯಗಳಲ್ಲಿ ಅವರು 114 ಪಂದ್ಯಗಳ 108 ಇನಿಂಗ್ಸ್‌ಗಳಲ್ಲಿ 89.95ರ ಸರಾಸರಿಯಲ್ಲಿ 6,477 ರನ್ ಗಳಿಸಿದ್ದಾರೆ. 98ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿರುವ ಕೊಹ್ಲಿ, 25 ಶತಕ ಹಾಗೂ 30 ಅರ್ಧಶತಕಗಳನ್ನು ಸಿಡಿಸಿದ್ದಾರೆ(PC-PTI).

6 / 7

ಇನ್ನು ಇದೇ ಪಂದ್ಯದಲ್ಲಿ ಕೊಹ್ಲಿ ಕಿವೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 37 ಇನಿಂಗ್ಸ್‌ಗಳಲ್ಲಿ 57.97ರ ಸರಾಸರಿ ಹಾಗೂ 97.86ರ ಸ್ಟ್ರೈಕ್‌ರೇಟ್‌ನಲ್ಲಿ ಕೊಹ್ಲಿ 1,971 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಶತಕ ಹಾಗೂ 11 ಅರ್ಧಶತಕಗಳು ಸೇರಿವೆ. ಹಾಗೆಯೇ ರಿಕಿ ಪಾಂಟಿಂಗ್ 51 ಪಂದ್ಯಗಳ 50 ಇನಿಂಗ್ಸ್‌ಗಳಲ್ಲಿ 45.83ರ ಸರಾಸರಿಯಲ್ಲಿ 1,971 ರನ್ ಗಳಿಸಿದ್ದರು. ಅವರ ಖಾತೆಯಲ್ಲಿ ಆರು ಶತಕ ಹಾಗೂ 12 ಅರ್ಧಶತಕಗಳಿವೆ(PC-PTI).

7 / 7

ಇಷ್ಟಕ್ಕೇ ನಿಲ್ಲದ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 13 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ 254 ಪಂದ್ಯಗಳ 251 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, 61.61ರ ಸರಾಸರಿಯಲ್ಲಿ 13,062 ರನ್ ಗಳಿಸಿದ್ದಾರೆ. ಈ ವೇಳೆ 48 ಶತಕ ಹಾಗೂ 70 ಅರ್ಧಶತಕಗಳನ್ನು ಬಾರಿಸಿದ್ದು, 183 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ(PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us