- Kannada News Photo gallery Cricket photos Virat Kohli shifed in london very soon: childhood coach Raj Kumar
Virat Kohli: ಭಾರತ ತೊರೆಯಲು ನಿರ್ಧರಿಸಿದ ವಿರಾಟ್ ಕೊಹ್ಲಿ..!
Virat Kohli: ಟೀಮ್ ಇಂಡಿಯಾ ಆಟಗಾರ ಕಳೆದ ಕೆಲ ವರ್ಷಗಳಿಂದ ಲಂಡನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪ್ರತಿ ಸರಣಿ ಅಥವಾ ಟೂರ್ನಿಯ ಬಳಿಕ ಅವರು ಲಂಡನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರು ಭಾರತವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಕೊಹ್ಲಿಯ ಬಾಲ್ಯದ ಕೋಚ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Updated on: Dec 19, 2024 | 1:29 PM

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಬಹಿರಂಗ ಪಡಿಸಿದ್ದಾರೆ. ಸದ್ಯ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡುತ್ತಿದ್ದಾರೆ.

ಈ ಸರಣಿಯ ಬಳಿಕ ಭಾರತಕ್ಕೆ ಹಿಂತಿರುಗಲಿರುವ ವಿರಾಟ್ ಕೊಹ್ಲಿ ಕುಟುಂಬ ಸಮೇತರಾಗಿ ಲಂಡನ್ಗೆ ಶಿಫ್ಟ್ ಆಗಲಿದ್ದಾರೆ. ಅಂದರೆ ಭಾರತವನ್ನು ತೊರೆದು ಇಂಗ್ಲೆಂಡ್ನಲ್ಲೇ ನೆಲೆಸಲಿದ್ದಾರೆ ಎಂದು ರಾಜ್ ಕುಮಾರ್ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿ ದೊಡ್ಡ ಟೂರ್ನಿ ಮತ್ತು ಸರಣಿಯ ನಂತರ ಲಂಡನ್‌ನಲ್ಲಿ ಸಮಯ ಕಳೆಯಲು ಹೋಗುತ್ತಿದ್ದರು. ಈ ಬಗ್ಗೆ ಕೋಚ್ ರಾಜ್‌ಕುಮಾರ್ ಶರ್ಮಾ ಅವರಲ್ಲಿ ಕೇಳಿದಾಗ, ವಿರಾಟ್ ಕೊಹ್ಲಿ ಭಾರತವನ್ನು ಶಾಶ್ವತವಾಗಿ ತೊರೆದು ಲಂಡನ್‌ನಲ್ಲಿ ನೆಲೆಸಲು ಯೋಚಿಸುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಅವರು ಲಂಡನ್ಗೆ ತಮ್ಮ ವಾಸ ಸ್ಥಾನವನ್ನು ಬದಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದಾಗ್ಯೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೊತೆ ಮುಂದುವರೆಯಲಿದ್ದು, ಸದ್ಯಕ್ಕಂತು ನಿವೃತ್ತಿ ನೀಡುವುದಿಲ್ಲ ಎಂದು ರಾಜ್ ಕುಮಾರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇನ್ನೂ 5 ವರ್ಷಗಳ ಕಾಲ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಕೊಹ್ಲಿ ನಿವೃತ್ತಿ ನೀಡಲಿದ್ದಾರೆ ಎಂಬ ವದಂತಿಯನ್ನು ಅವರ ಬಾಲ್ಯದ ಕೋಚ್ ತಳ್ಳಿ ಹಾಕಿದ್ದಾರೆ.

ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿರುವ ವಿರಾಟ್ ಕೊಹ್ಲಿ ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್ನಿಂದ ಒಂದು ಶತಕ ಮೂಡಿಬಂದಿದೆ. ಇದಾಗ್ಯೂ ಅವರು ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿರುವುದು 126 ರನ್ಗಳು ಮಾತ್ರ. ಹೀಗಾಗಿಯೇ ಮೆಲ್ಬೋರ್ನ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಮರಳಿ ಕಂಡುಕೊಳ್ಳಬೇಕಿದೆ.




