ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ

Virat Kohli Record: ರಣಜಿ ಟೂರ್ನಿಯಲ್ಲಿ ಬರೋಬ್ಬರಿ 12 ವರ್ಷಗಳ ಬಳಿಕ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. 2012 ರಲ್ಲಿ ಕೊನೆಯ ಬಾರಿ ರಣಜಿ ಪಂದ್ಯವಾಡಿದ್ದ ಕೊಹ್ಲಿ ಈ ಬಾರಿ ಮತ್ತೆ ದೆಹಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ.

ಝಾಹಿರ್ ಯೂಸುಫ್
|

Updated on: Feb 04, 2025 | 7:54 AM

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ದೀರ್ಘಾವಧಿಯ ಬಳಿಕ ದೇಶೀಯ ಟೂರ್ನಿ ಆಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹೆಸರು ಅಗ್ರಸ್ಥಾನಕ್ಕೇರಿದೆ.

1 / 5
ಇತ್ತೀಚೆಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದಿದ್ದರು. ಈ ಮೂಲಕ 12 ವರ್ಷಗಳ ಬಳಿಕ ಕೊಹ್ಲಿ ಮತ್ತೆ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ದೀರ್ಘಾವಧಿಯ ಬಳಿಕ ರಣಜಿ ಪಂದ್ಯವಾಡುವ ಮೂಲಕ ಕೊಹ್ಲಿ ಪಾಕ್​ ತಂಡದ ಮಾಜಿ ನಾಯಕನ ದಾಖಲೆ ಮುರಿದಿದ್ದಾರೆ.

2 / 5
ಅಂದರೆ ಕನಿಷ್ಠ 50 ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರನು ತನ್ನ ದೇಶದ ಪ್ರಮುಖ ಪ್ರಥಮ ದರ್ಜೆ ಟೂರ್ನಿಯಲ್ಲಿ ದೀರ್ಘಾವಧಿಯವರೆಗೆ ಭಾಗವಹಿಸದೇ ಇದ್ದಂತಹ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹೆಸರಿನಲ್ಲಿತ್ತು. ಅಕ್ರಮ್ 11 ವರ್ಷಗಳ ಕಾಲ ದೇಶೀಯ ಟೂರ್ನಿಯಿಂದ ಹೊರಗುಳಿದು, ಆ ಬಳಿಕ ಪ್ರಥಮ ದರ್ಜೆ ಪಂದ್ಯವಾಡಿದ್ದರು.

3 / 5
ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ. ಕಿಂಗ್ ಕೊಹ್ಲಿ 12 ವರ್ಷ, 86 ದಿನಗಳ ಬಳಿಕ ರಣಜಿ ಟೂರ್ನಿ ಆಡಿ, ದೀರ್ಘಾವಧಿಯ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಂಡ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ರಣಜಿ ಕಂಬ್ಯಾಕ್​ನಲ್ಲೂ ಕಿಂಗ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

4 / 5
ಇನ್ನು 12 ವರ್ಷಗಳ ಬಳಿಕ ರಣಜಿ ಪಂದ್ಯವಾಡಿದ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್​ನಲ್ಲಿ 6 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ದೆಹಲಿ ತಂಡ ಜಯ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ರೈಲ್ವೇಸ್ 241 ರನ್ ಬಾರಿಸಿದರೆ, ದೆಹಲಿ 374 ರನ್​ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ರೈಲ್ವೇಸ್ ತಂಡವು 114 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ದೆಹಲಿ ಪಡೆ ಇನಿಂಗ್ಸ್ ಹಾಗೂ 19 ರನ್​ಗಳ ಭರ್ಜರಿ ಜಯ ಸಾಧಿಸಿದೆ.

5 / 5
Follow us
ಫೆಬ್ರುವರಿ 21ಕ್ಕೆ ತೆರೆಕಾಣಲಿದೆ ಶ್ರೇಯಸ್-ಪ್ರಿಯಾ ಅಭಿನಯದ ವಿಷ್ಣು ಪ್ರಿಯ

ಸತೀಶ್​ಗೆ ಸಿಎಂ ಆಗುವ ಆಕಾಂಕ್ಷೆ ಬಿಟ್ಟು ಬೇರೆ ಆಸೆ ಏನಾದರೂ ಉಳಿದಿದೆಯಾ?

ಶತಕದ ಬಳಿಕ ಭಾವುಕರಾಗಿ ಮಾತನಾಡಿದ ರೋಹಿತ್
ಶತಕದ ಬಳಿಕ ಭಾವುಕರಾಗಿ ಮಾತನಾಡಿದ ರೋಹಿತ್
ಏರ್​ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್

ವರಿಷ್ಠರನ್ನು ಭೇಟಿಯಾಗುವ ಅವಕಾಶ ಯತ್ನಾಳ್ ಟೀಮಿಗೆ ಈ ಬಾರಿಯೂ ಇಲ್ಲ!

ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ

ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ

ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ

ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!

ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್