ಲುಕ್ ಬದಲಿಸಿದ ವಿರಾಟ್: ಬದಲಾಗುತ್ತಾ ಕೊಹ್ಲಿಯ ಲಕ್
Virat Kohli: ಪರ್ತ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಆದರೆ ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕೊಹ್ಲಿ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹಾಗೆಯೇ ಬ್ರಿಸ್ಬೇನ್ ಟೆಸ್ಟ್ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ.
Updated on:Dec 21, 2024 | 12:56 PM

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಸ್ಬೇನ್ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ತಮ್ಮ ಲುಕ್ ಬದಲಿಸಿದ್ದು, ಇದೀಗ ಹೊಸ ಹೇರ್ ಸ್ಟೈಲ್ನಲ್ಲಿ ಕಂಗೊಳಿಸಿದ್ದಾರೆ.

ಈ ಬಾರಿ ವಿರಾಟ್ ಕೊಹ್ಲಿಯ ಕೇಶ ವಿನ್ಯಾಸ ಬದಲಿಸಿರುವುದು ಆಸ್ಟ್ರೇಲಿಯಾದ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜೋರ್ಡಾನ್ ತಬಕ್‌ಮನ್. ಇದೀಗ ಕಿಂಗ್ ಕೊಹ್ಲಿ ತಲೆಗೆ ಹೊಸ ಟಚ್ ಕೊಟ್ಟಿರುವ ತಬಕ್‌ಮನ್ ಟೀಮ್ ಇಂಡಿಯಾ ಆಟಗಾರನ ನ್ಯೂ ಲುಕ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಭಾರತದ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿರುವ ಕೊಹ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಅದರಂತೆ ಡಿಸೆಂಬರ್ 26 ರಿಂದ ಶುರುವಾಗಲಿರುವ ಮೆಲ್ಬೋರ್ನ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಲುಕ್ನೊಂದಿಗೆ ಕಿಂಗ್ ಕೊಹ್ಲಿಯ ಲಕ್ ಬದಲಾಗಲಿದೆಯಾ ಎಂಬುದೇ ಪ್ರಶ್ನೆ.

ಏಕೆಂದರೆ ಕಳೆದ ಐದು ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ ಕಲೆಹಾಕಿರುವುದು ಕೇವಲ 126 ರನ್ಗಳು. ಇದರಲ್ಲಿ ಒಂದು ಶತಕ ಸೇರಿದೆ. ಈ ಶತಕದ ಬಳಿಕ ಕೊಹ್ಲಿಯ ಬ್ಯಾಟ್ನಿಂದ ಮೂಡಿಬಂದಿರುವ ಸ್ಕೋರ್ ಕೇವಲ 21 ರನ್ಗಳು ಮಾತ್ರ. ಹೀಗಾಗಿಯೇ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲಬೇಕಿದ್ದರೆ ಅನುಭವಿ ದಾಂಡಿಗ ವಿರಾಟ್ ಕೊಹ್ಲಿ ಅಬ್ಬರಿಸಲೇಬೇಕು.

ಅದರಂತೆ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಇನಿಂಗ್ಸ್ ಆಡಲಿದ್ದಾರಾ? ಈ ಮೂಲಕ ಭಾರತ ತಂಡಕ್ಕೆ 2ನೇ ಗೆಲುವು ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.
Published On - 12:54 pm, Sat, 21 December 24
























