Asia Cup 2025: ಏಷ್ಯಾಕಪ್ನಲ್ಲಿ ಕಾರ್ ಸಿಕ್ಕಿದ್ದು ಯಾರಿಗೆ?
Asia Cup 2025 Final: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ.
Updated on: Sep 29, 2025 | 12:54 PM

ಏಷ್ಯಾಕಪ್ ಟೂರ್ನಿಗೆ 17ನೇ ಆವೃತ್ತಿಗೆ ತೆರೆಬಿದ್ದಿದೆ. ಈ ಬಾರಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಟೀಮ್ ಇಂಡಿಯಾ ಪ್ರಶಸ್ತಿ ಮೊತ್ತವಾಗಿ 2.6 ಕೋಟಿ ರೂ. ಪಡೆದುಕೊಂಡಿದೆ. ಇನ್ನು ರನ್ನರ್ ಅಪ್ ಪಾಕ್ ತಂಡಕ್ಕೆ ಸಿಕ್ಕಿರುವುದು 1.3 ಕೋಟಿ ರೂ.

ಇನ್ನು ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಯೊಂದಿಗೆ 4.43 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ. ಇದರ ಜೊತೆಗೆ ಸೂಪರ್ ಸಿಕ್ಸ್ ಆಫ್ ದಿ ಮ್ಯಾಚ್ ಪ್ರಶಸ್ತಿಯಾಗಿ ತಿಲಕ್ ವರ್ಮಾಗೆ 2.66 ಲಕ್ಷ ರೂ. ಸಿಕ್ಕಿದೆ.

ಹಾಗೆಯೇ ಫೈನಲ್ ಪಂದ್ಯದ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಶಿವಂ ದುಬೆ ಪಾಲಾಗಿದೆ. ಅಂತಿಮ ಪಂದ್ಯದಲ್ಲಿ ಅಲ್ರೌಂಡರ್ ಪ್ರದರ್ಶನ ನೀಡಿದ ದುಬೆ 3.10 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ. ಇದರೊಂದಿಗೆ ಕುಲ್ದೀಪ್ ಯಾದವ್ಗೂ ಪ್ರಶಸ್ತಿ ಲಭಿಸಿದೆ.

ಏಷ್ಯಾಕಪ್ 2025 ಟೂರ್ನಿಯ ಮೋಸ್ಟ್ ವಾಲ್ಯುಎಬೆಲ್ ಪ್ರೇಯರ್ ಆಗಿ ಕುಲ್ದೀದ್ ಯಾದವ್ ಆಯ್ಕೆಯಾಗಿದ್ದು, ಈ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಕುಲ್ದೀಪ್ ಯಾದವ್ 13.30 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಒಲಿದದ್ದು ಅಭಿಷೇಕ್ ಶರ್ಮಾಗೆ.

ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯೊಂದಿಗೆ 13.30 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಇದರೊಂದಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಟಗಾರನಿಗೆ ನೀಡಲಾಗುವ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ಅಭಿಷೇಕ್ ಶರ್ಮಾಗೆ ದಕ್ಕಿದೆ.




