AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ವಿರುದ್ಧ ಮೊದಲ ಎಸೆತದಲ್ಲೇ ವಿಶ್ವ ದಾಖಲೆ ಸೃಷ್ಟಿಸಿದ ಶಫಾಲಿ ವರ್ಮಾ

Shafali Verma's World Record Six vs Pakistan: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಶಫಾಲಿ ವರ್ಮಾ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಶಫಾಲಿ ಮಾಡಿದ ಈ ಸಾಧನೆ, ಟೀಮ್ ಇಂಡಿಯಾದ ಅಭಿಯಾನಕ್ಕೆ ಭರ್ಜರಿ ಆರಂಭ ನೀಡಿದೆ.

ಪೃಥ್ವಿಶಂಕರ
|

Updated on: Jun 14, 2026 | 9:10 PM

Share
2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಿದೆ. ಹರ್ಮನ್​ಪ್ರೀತ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿದೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತದ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮಾ ಹೊಸ ವಿಶ್ವ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ (PC-PTI).

1 / 5
ಬರ್ಮಿಂಗ್ಹ್ಯಾಮ್‌ನ ಪ್ರತಿಷ್ಠಿತ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಅದರಂತೆ ಭಾರತ ಪರ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಬ್ಯಾಟಿಂಗ್‌ ಆರಂಭಿಸಿದರು. ಸ್ಟ್ರೈಕ್ ತೆಗೆದುಕೊಂಡ ಶಫಾಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದರು (PC-PTI).

2 / 5
ಸಾದಿಯಾ ಇಕ್ಬಾಲ್ ಬೌಲ್ ಮಾಡಿದ ಇನ್ನಿಂಗ್ಸ್​ನ ಮೊದಲ ಎಸೆತವನ್ನು ಶಫಾಲಿ ಲಾಂಗ್ ಆನ್​​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಮಾತ್ರವಲ್ಲದೆ ಹೊಸ ದಾಖಲೆಯನ್ನು ಸೃಷ್ಟಿಸಿದರು (PC-PTI).

3 / 5
ಮಹಿಳಾ ಟಿ20 ವಿಶ್ವಕಪ್‌ನ ಸುದೀರ್ಘ ಇತಿಹಾಸದಲ್ಲಿ, ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಏಕೈಕ ಬ್ಯಾಟರ್ ಶಫಾಲಿ ವರ್ಮಾ. ಪುರುಷರ ಕ್ರಿಕೆಟ್‌ನಲ್ಲೂ ಇಂತಹ ಸಾಧನೆಗಳು ಬಹಳ ಅಪರೂಪ. ಎದುರಾಳಿ ಯಾರೇ ಆಗಿರಲಿ, ತನ್ನದೇ ಆದ ಶೈಲಿಯಲ್ಲಿ ಆಕ್ರಮಣಕಾರಿಯಾಗಿ ಆಡುವುದು ತನ್ನ ಸ್ವಭಾವ ಎಂದು ಶಫಾಲಿ ಈ ಪಂದ್ಯದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ (PC-PTI).

4 / 5
ಆದಾಗ್ಯೂ ಈ ಪಂದ್ಯದಲ್ಲಿ ಶಫಾಲಿ ವರ್ಮಾ ಅವರ ಇನ್ನಿಂಗ್ಸ್​ ಮೊದಲ ಓವರ್​ನಲ್ಲೇ ಅಂತ್ಯವಾಯಿತು. ಮೊದಲ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶಫಾಲಿ ಅದೇ ಓವರ್​ನ ಕೊನೆಯ ಎಸೆತದಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್‌ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು (PC-PTI).

5 / 5
Follow Us
ಅಸ್ಸಾಂ ಪ್ರವಾಹದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ

ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ

ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ

ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್

ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್

ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು