AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ben Stokes: ನಿವೃತ್ತಿಯಿಂದ ಯು-ಟರ್ನ್​: ವಿಶ್ವಕಪ್​ಗಾಗಿ ಬೆನ್​ ಸ್ಟೋಕ್ಸ್​ ಕಂಬ್ಯಾಕ್?

Ben Stokes: ಮುಂದಿನ ಐಪಿಎಲ್​ ಸೀಸನ್​ನಲ್ಲೂ ಸ್ಟೋಕ್ಸ್ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಮುಂದಿನ ಏಕದಿನ ವಿಶ್ವಕಪ್ ನಡೆಯುವುದು ಭಾರತದಲ್ಲಿ...

TV9 Web
| Edited By: |

Updated on: Dec 01, 2022 | 10:54 PM

Share
ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​ ಕಳೆದ ಜುಲೈನಲ್ಲಿ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಅವರು ಟಿ20 ಹಾಗೂ ಟೆಸ್ಟ್  ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದರು. ಅದರಂತೆ ಸದ್ಯ ಸ್ಟೋಕ್ಸ್​ ಇಂಗ್ಲೆಂಡ್ ಟಿ20 ಹಾಗೂ ಟೆಸ್ಟ್​ ತಂಡದ ಭಾಗವಾಗಿದ್ದಾರೆ. ಇದರ ನಡುವೆ ಏಕದಿನ ಕ್ರಿಕೆಟ್​ಗೆ ಅವರು ಕಂಬ್ಯಾಕ್ ಮಾಡಬೇಕೆಂಬ ಅಭಿಪ್ರಾಯಗಳು ಕೇಳಿ ಬರಲಾರಂಭಿಸಿದೆ.

1 / 8
ಇದಕ್ಕೆ ಮುಖ್ಯ ಕಾರಣ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಬೆನ್​ ಸ್ಟೋಕ್ಸ್ ಆಡಿದ ಇನಿಂಗ್ಸ್​. ಪಾಕ್ ವಿರುದ್ಧ ಜವಾಬ್ದಾರಿಯುತ ಅರ್ಧಶತಕ ಬಾರಿಸುವ ಮೂಲಕ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದಕ್ಕೂ ಮುನ್ನ 2019ರ ಏಕದಿನ ವಿಶ್ವಕಪ್ ಗೆಲುವಿನ ರುವಾರಿ ಕೂಡ ಬೆನ್​ ಸ್ಟೋಕ್ಸ್.

2 / 8
ಅಂದರೆ ಆಂಗ್ಲರ ಪಾಲಿನ ಎರಡು ವಿಶ್ವಕಪ್​ ಗೆಲುವಿನ ರುವಾರಿ ಎನಿಸಿಕೊಂಡಿರುವ ಬೆನ್​ ಸ್ಟೋಕ್ಸ್ 2023 ರ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಬೇಕೆಂದು ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕಿ ಹಾಗೂ ಸೀಮಿತ ಓವರ್​ಗಳ ಕೋಚ್ ಮ್ಯಾಥ್ಯೂ ಮೋಟ್ ಆಗ್ರಹಿಸಿದ್ದಾರೆ.

3 / 8
ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಮೋಟ್, ಬೆನ್ ಸ್ಟೋಕ್ಸ್​ ಅಕ್ಟೋಬರ್​ವರೆಗೆ ತಂಡದ ಪರ ಆಡಿದ್ದರೂ ಸಹ ನಾವು ವಿಶ್ವಕಪ್​ ಬಳಗದಲ್ಲಿ ಆಯ್ಕೆ ಮಾಡಲು ಬಯಸುತ್ತೇವೆ. ಅಂದರೆ ಅವರಿಗೆ ತಂಡದಲ್ಲಿ ನೇರ ಸ್ಥಾನ ನೀಡಲಿದ್ದೇವೆ ಎಂದಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲೂ ಬೆನ್​ ಸ್ಟೋಕ್ಸ್ ತಂಡಕ್ಕೆ ಮರಳಬಹುದು.

4 / 8
ಈ ಬಗ್ಗೆ ಬೆನ್ ಸ್ಟೋಕ್ಸ್ ಕೂಡ ಮಾತನಾಡಿದ್ದು, ರಾಬ್ ಕಿ ನನ್ನೊಂದಿಗೆ ಏಕದಿನ ವಿಶ್ವಕಪ್​ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನಿನ್ನೂ ಏನನ್ನೂ ಹೇಳಿಲ್ಲ. ಪ್ರಸ್ತುತ ನನ್ನ ಗಮನವು ಸರಣಿ ಆಡುವುದರ ಮೇಲಿದೆ. ಹಾಗೆಯೇ ವಿಶ್ವಕಪ್​ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಆದರೆ ಸದ್ಯ ನಾನು ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಬೆನ್​ ಸ್ಟೋಕ್ಸ್​ ಬ್ರಿಟಿಷ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

5 / 8
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಬೆನ್​ ಸ್ಟೋಕ್ಸ್​ ಕಂಬ್ಯಾಕ್ ಮಾಡುವುದಿಲ್ಲ ಎನ್ನದಿರುವುದು. ಅಂದರೆ ಸ್ಟೋಕ್​ ಅತಿಯಾದ ಕ್ರಿಕೆಟ್ ಒತ್ತಡದ ಕಾರಣ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದೀಗ ಇಂಗ್ಲೆಂಡ್ ತಂಡದ ಕೋಚ್ ಮ್ಯಾಥ್ಯೂ ಮೋಟ್ ಸ್ಟೋಕ್ಸ್ ವಿಶ್ವಕಪ್ ಆಡುವುದಾದರೆ ಅವರಿಗೆ ನೇರವಾಗಿ ಚಾನ್ಸ್ ನೀಡಲಿದ್ದೇವೆ ಎಂದಿದ್ದಾರೆ.

6 / 8
ಹೀಗಾಗಿ ಬೆನ್​ ಸ್ಟೋಕ್ಸ್ ಸಂಪೂರ್ಣ ವಿಶ್ರಾಂತಿಯೊಂದಿಗೆ ಏಕದಿನ ವಿಶ್ವಕಪ್​ ವೇಳೆ ತಂಡಕ್ಕೆ ಮರಳಬಹುದು. ಇತ್ತ ಮುಂದಿನ ಐಪಿಎಲ್​ ಸೀಸನ್​ನಲ್ಲೂ ಸ್ಟೋಕ್ಸ್ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಮುಂದಿನ ಏಕದಿನ ವಿಶ್ವಕಪ್ ನಡೆಯುವುದು ಭಾರತದಲ್ಲಿ.

7 / 8
ಅಂದರೆ ಐಪಿಎಲ್​ ಮೂಲಕ ಭಾರತೀಯ ಪಿಚ್​ನಲ್ಲಿ ಇಂಗ್ಲೆಂಡ್ ಆಲ್​ರೌಂಡರ್​ ತಯಾರಿ ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ವೇಳೆ ಬೆನ್​ ಸ್ಟೋಕ್ಸ್​ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

8 / 8
Web contact
Web contact

TV9 Kannada

Read More
Follow Us
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ