ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ದಂಪತಿ: ಬೇಬಿ ಬಂಪ್ ಫೋಟೊಶೂಟ್
Daali Dhananjay: ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಇದೀಗ ತಂದೆಯಾಗುವ ಶುಷಿಯಲ್ಲಿದ್ದಾರೆ. ಡಾಲಿ ಅವರ ಪತ್ನಿ ಡಾ ಧನ್ಯತಾ ಗರ್ಭಿಣಿ ಆಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ.
Updated on: Apr 29, 2026 | 4:21 PM

ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಇದೀಗ ತಂದೆಯಾಗುವ ಶುಷಿಯಲ್ಲಿದ್ದಾರೆ. ಡಾಲಿ ಅವರ ಪತ್ನಿ ಡಾ ಧನ್ಯತಾ ಗರ್ಭಿಣಿ ಆಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದೀಗ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ.

ಧನ್ಯತಾ ಮತ್ತು ಡಾಲಿ ಧನಂಜಯ್ ಅವರುಗಳು ಫೋಟೊಶೂಟ್ನಲ್ಲಿ ಮುದ್ದಾಗಿ ಕಾಣುತ್ತಿದ್ದು, ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರ ಖುಷಿಯಲ್ಲಿದ್ದಾರೆ.

ಡಾಲಿ ಹಾಗೂ ಧನ್ಯತಾ ಅವರು ಪ್ರಕೃತಿಯ ನಡುವೆ ಫೋಟೊಶೂಟ್ ಮಾಡಿಸಿದ್ದು, ಡಾಲಿ, ಗರ್ಭಿಣಿ ಪತ್ನಿಯ ಕೈ ಹಿಡಿದು ನಡೆಸುತ್ತಿರುವ ಚಿತ್ರ ಸುಂದರವಾಗಿದೆ.

ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಡಾಲಿ ಧನಂಜಯ್ ತಂದೆಯಾಗುತ್ತಿರುವ ಖುಷಿಯ ಬಗ್ಗೆ ಮಾತನಾಡಿದ್ದರು. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು.

ಕಳೆದ ವರ್ಷ ಫೆಬ್ರವರಿಯಲ್ಲಿ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಮೊದಲ ಮಗುವಿನ ಪೋಷಕರಾಗುವ ನಿರೀಕ್ಷೆಯಲ್ಲಿದ್ದಾರೆ.

ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಧನ್ಯತಾ ಅವರು ತಮ್ಮ ಹಾಗೂ ಡಾಲಿ ಧನಂಜಯ್ ಅವರ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕೆಲವು ತಿಂಗಳ ಹಿಂದೆ ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ತಾವು ತಂದೆ ಆಗುತ್ತಿರುವ ಖುಷಿಯ ವಿಚಾರವನ್ನು ಡಾಲಿ ಹಂಚಿಕೊಂಡಿದ್ದರು.




