- Kannada News Photo gallery Devara Movie Release, Pics of Karnataka Jr NTR fans celebrating release of the movie
‘ದೇವರ’ ಸ್ವಾಗತಕ್ಕೆ ಸಜ್ಜಾಗಿರುವ ಕರ್ನಾಟಕದ ಅಭಿಮಾನಿಗಳು, ಚಿತ್ರಗಳಲ್ಲಿ ನೋಡಿ
Jr NTR Devara Movie: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ನಾಳೆ ಬಿಡುಗಡೆ ಆಗಲಿದ್ದು, ಕರ್ನಾಟಕದ ಜೂ ಎನ್ಟಿಆರ್ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ಇಲ್ಲಿವೆ ನೋಡಿ ಕೆಲವು ಚಿತ್ರಗಳು.
Updated on: Sep 26, 2024 | 6:12 PM

ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಸಹ ಜೂ ಎನ್ಟಿಆರ್ಗೆ ದೊಡ್ಡ ಅಭಿಮಾನಿ ಬಳಗ ಇದ್ದು, ‘ದೇವರ’ ಸಿನಿಮಾ ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಬಳ್ಳಾರಿಯಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು, ಮದುವೆ ಸ್ವಾಗತಕ್ಕೆ ಹಾಕುವಂತೆ ಹೂವಿನ ಬೋರ್ಡ್ ಅನ್ನು ಚಿತ್ರಮಂದಿರಕ್ಕೆ ಹಾಕಿದ್ದಾರೆ. ಜೂ ಎನ್ಟಿಆರ್, ಅಭಿಮಾನಿಗಳ ಬಗ್ಗೆ ಹೇಳಿದ ಮಾತನ್ನು ಬೋರ್ಡ್ ಮೇಲೆ ಬರೆಸಿದ್ದಾರೆ.

ಮುಳಬಾಗಿಲು ಅಭಿಮಾನಿಗಳು ‘ದೇವರ’ ಸಿನಿಮಾದಲ್ಲಿನ ಜೂ ಎನ್ಟಿಆರ್ ಲುಕ್ನ ದೊಡ್ಡ ಕಟೌಟ್ ಮಾಡಿಸಿ, ತಮ್ಮ ಚಿತ್ರಗಳನ್ನೂ ಸಹ ಅದರ ಜೊತೆಗೆ ಹಾಕಿಸಿದ್ದಾರೆ.

ಬೆಂಗಳೂರಿನ ಚಿತ್ರಮಂದಿರ ಒಂದರ ಮುಂದೆ ಜೂ ಎನ್ಟಿಆರ್ ಅವರ ದೊಡ್ಡ ಕಟೌಟ್ ನಿಲ್ಲಿಸಿ, ಸಿನಿಮಾ ಬಿಡುಗಡೆಗೂ ಕಾಯದೆ, ಕಟೌಟ್ ಮುಂದೆಯೇ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ವಿಡಿಯೋ ಈಗಾಗಲೇ ವೈರಲ್ ಆಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಎನ್ಟಿಆರ್ ಕಟೌಟ್, ಬ್ಯಾನರ್ಗಳಿಂದ ಇಡೀ ಗೌರಿಶಂಕರ್ ಚಿತ್ರಮಂದಿರವನ್ನೇ ತುಂಬಿಸಿಬಿಟ್ಟಿದ್ದಾರೆ.

‘ದೇವರ’ ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜಾನ್ಹವಿ ಕಪೂರ್ ನಾಯಕಿ, ಬಾಲಿವುಡ್ನ ಸೈಫ್ ಅಲಿ ಖಾನ್ ವಿಲನ್. ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.




