ದೊಡ್ಡಬಳ್ಳಾಪುರ: ಚಿಕ್ಕ ಮದುರೆ ಶನಿಮಹಾತ್ಮ ಬ್ರಹ್ಮರಥೋತ್ಸವ, ಉರಿ ಬಿಸಿಲಿನಲ್ಲೂ ಕಿಕ್ಕಿರಿದು ಸೇರಿದ ಜನರು
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ದೇವಸ್ಥಾನದಲ್ಲಿ 70ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಮತ್ತು ಭಕ್ತರು ಬಾಳೆಹಣ್ಣು, ಎಳ್ಳು ದೀಪಗಳನ್ನು ಅರ್ಪಿಸಿದರು. ಗ್ರಾಮೀಣ ಸಂಸ್ಕೃತಿಯ ಸೊಗಡಿನ ಜಾತ್ರೆಯೂ ಜರುಗಿತು.
Updated on: Mar 10, 2025 | 9:09 AM

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಮದುರೆ ಶ್ರೀ ಶನಿಮಹಾತ್ಮ ದೇವಸ್ಥಾನದ ರಥೋತ್ಸವ ಜರುಗಿತು. ಕನಸವಾಡಿಯ ಶನಿಮಹಾತ್ಮನ 70 ನೇ ವರ್ಷದ ಜಾತ್ರೆ ಮತ್ತು ಬ್ರಹ್ಮ ರಥೋತ್ಸವವನ್ನ ರವಿವಾರ ಅದ್ದೂರಿಯಾಗಿ ದೇವಾಲಯ ಆಡಳಿತ ಮಂಡಳಿ ಆಯೋಜನೆ ಮಾಡಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಶನಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತರು ಪುನಿತರಾದರು.

ಮದ್ಯಾಹ್ನ 1:30ಕ್ಕೆ ನಡೆದ ಶನಿ ದೇವರ ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಭಕ್ತರು ಭಕ್ತಿಯಿಂದ ನಮಿಸಿ ದವಳ ಬಾಳೆಹಣ್ಣು ಅರ್ಪಿಸಿದರು. ಇತಿಹಾಸ ಪ್ರಸಿದ್ಧ ಶನಿಮಹಾತ್ಮನಿಗೆ ನಮಿಸಿದರು. ತುಮಕೂರು ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಟೆಕ್ಕಿಗಳು ಹಾಗೂ ಭಕ್ತರು ದೇವರಿಗೆ ವಿಶೇಶವಾಗಿ ಎಳ್ಳು ದೀಪವನ್ನು ಹಚ್ಚುವ ಮೂಲಕ ಪ್ರಾರ್ಥಿಸಿದರು.

ಜೊತೆಗೆ ದೇವಸ್ಥಾನದ ಸುತ್ತಮುತ್ತಲಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮೀಣ ಸೊಗಡಿನ ಜಾತ್ರೆಯಲ್ಲಿ ರೌಂಡ್ಸ್ ಹೊಡೆದು ಎಂಜಾಯ್ ಮಾಡಿದರು. ಅಲ್ಲದೆ ಬಿರು ಬಿಸಿಲಿನಲ್ಲೂ ನೂರಾರು ಸಂಖ್ಯೆಯಲ್ಲಿ ದೇವಸ್ಥಾನದ ಮುಂದೆ ಜಮಾಯಿಸಿದ ಜನರು ಪಾನಕ ಹೆಸರುಬೆಳೆ ಜೊತೆಗೆ ಮುದ್ದೆ ,ಕಾಳು ಸಾರು, ರವೆ ಪಾಯಸ ಮತ್ತು ಬೂಂದಿ ಊಟ ಸವಿದು ಗ್ರಾಮೀಣ ಸೊಗಡಿನ ಜಾತ್ರೆಯಲ್ಲಿ ಕಾಲ ಕಳೆದರು.

ಒಟ್ಟಾರೇ ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ದೇವರ ಭ್ರಹ್ಮ ರತೋತ್ಸವಕ್ಕೆ ಈ ಭಾರಿ ಸಾವಿರಾರು ಮಂದಿ ಜನ ಸಾಗರವೇ ಕಿಕ್ಕಿರಿದು ತುಂಬಿತ್ತು. ಅದರಲ್ಲೂ ವಿಕೆಂಡ್ ಹಿನ್ನಲೆ ಸಿಲಿಕಾನ್ ಸಿಟಿ ಮಂದಿ ಶನಿಮಹಾತ್ಮನಿಗೆ ಬಾಳೆ ಹಣ್ಣು ಅರ್ಪಿಸಿ ಜಾತ್ರೆಯಲ್ಲಿ ರೌಂಡ್ ಹೊಡೆದು ಮಸ್ತ್ ಖುಷಿ ಪಟ್ಟಿದ್ದಂತು ಸುಳ್ಳಲ್ಲ.



















