ಸಂಜೆಯ ಸಮಯ ಈ ವಸ್ತುಗಳನ್ನು ದಾನ ಮಾಡಬೇಡಿ
ಸಾಮಾನ್ಯವಾಗಿ ಮುಂಜಾವಿಗೆ ಎಷ್ಟು ಪ್ರಾಶಸ್ತವಿದೆಯೋ ಅಷ್ಟೇ ಸಂಜೆ ಅಥವಾ ಮುಸ್ಸಂಜೆ ಹೊತ್ತಿಗೂ ನೀಡಲಾಗುತ್ತದೆ. ಹಾಗಾಗಿ ಆ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಜೊತೆಗೆ ಕೆಲವು ವಸ್ತುಗಳನ್ನು ದಾನವಾಗಿಯೂ ನೀಡಬಾರದು. ಅದು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಹಾಗಾದರೆ ಸಂಜೆ ಸಮಯದಲ್ಲಿ ಯಾವ ವಸ್ತುಗಳನ್ನು ಕೊಡಬಾರದು ಎಂಬುದನ್ನು ತಿಳಿದುಕೊಳ್ಳಿ.
Updated on: Apr 07, 2025 | 12:41 PM

ಸಂಜೆ ಅಥವಾ ಮುಸ್ಸಂಜೆ ಹೊತ್ತಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಬಿಳಿ ಬಣ್ಣದ ವಸ್ತುಗಳು ಲಕ್ಷ್ಮೀ ದೇವಿಗೆ ಪ್ರೀಯ ಎಂಬ ನಂಬಿಕೆ ಇದೆ. ಹಾಗಾಗಿ ಹಾಲು, ಮೊಸರು, ಉಪ್ಪು ಇತ್ಯಾದಿ ವಸ್ತುಗಳನ್ನು ಯಾರಿಗೂ ದಾನವಾಗಿ ನೀಡಬಾರದು.

ಸಂಜೆಯ ಸಮಯದಲ್ಲಿ ಅಪ್ಪಿತಪ್ಪಿಯೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಯಾರಿಗೂ ದಾನವಾಗಿ ನೀಡಬೇಡಿ. ಈ ತರಕಾರಿ ಕೇತು ಗ್ರಹದೊಂದಿಗೆ ಸಂಬಂಧ ಹೊಂದಿದ್ದು, ಕೇತುವನ್ನು ಅಲೌಕಿಕ ಶಕ್ತಿ ಮತ್ತು ಮಾಟ ಮಂತ್ರಕ್ಕೆ ಸಂಬಂಧಿಸಿದ ಗ್ರಹವೆಂದು ಪರಿಗಣಿಸಲಾಗುತ್ತದೆ.

ಸಂಜೆ ಸಮಯದಲ್ಲಿ ಹಣದ ವ್ಯವಹಾರ ಮಾಡುವುದನ್ನು ತಪ್ಪಿಸಬೇಕು. ಅಂದರೆ ಈ ಸಮಯದಲ್ಲಿ ಯಾರಿಗಾದರೂ ಸಾಲ ನೀಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡಬಾರದು. ಈ ವಿಷಯವನ್ನು ಎಂದಿಗೂ ಮರೆಯಬಾರದು.

ಇನ್ನು ಕೆಲವು ನಂಬಿಕೆಗಳ ಪ್ರಕಾರ ಶುಕ್ರವಾರ ಮತ್ತು ಮಂಗಳವಾರದ ಸಂಜೆ ಸಮಯದಲ್ಲಿ ಅನ್ನವನ್ನು ದಾನವಾಗಿ ನೀಡಬಾರದು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ.

ಈ ಮಾಹಿತಿಯನ್ನು ಡಾ. ವಿಮಲಾ ಗೋಪಾಲ್ ಎನ್ನುವವರು ತಮ್ಮ ಇನ್ಸ್ಟಾ (ಅಂತರ್- ಮನ) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ಸಂಜೆ ಸಮಯದಲ್ಲಿ ಲಕ್ಷ್ಮೀ ದೇವಿಗೆ ಪ್ರೀಯವಾದ ವಸ್ತುಗಳು, ತರಕಾರಿ ಮತ್ತು ಹಣವನ್ನು ನೀಡುವುದು ಮತ್ತು ತೆಗೆದುಕೊಳ್ಳುವುದನ್ನು ಮಾಡಬಾರದು ಎಂದಿದ್ದಾರೆ.

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
Read More




