- Kannada News Photo gallery Kannada News | Esha Gupta bold photos from IIFA Awards Function 2023 goes viral
Esha Gupta Photos: ಇಂಥ ಡ್ರೆಸ್ ಹಾಕಿಕೊಂಡು ಬಂದು ನಡೆದಾಡಲು ಕಷ್ಟಪಟ್ಟ ನಟಿ ಇಶಾ ಗುಪ್ತಾ
Esha Gupta Viral Photo: ಸೋಶಿಯಲ್ ಮೀಡಿಯಾದಲ್ಲಿ ಇಶಾ ಗುಪ್ತಾ ಅವರ ಫೋಟೋಗಳು ವೈರಲ್ ಆಗಿವೆ. ಇವುಗಳನ್ನು ನೋಡಿ ಅನೇಕರು ಟ್ರೋಲ್ ಮಾಡಿದ್ದಾರೆ. ಕಷ್ಟ ಆಗುತ್ತದೆ ಎಂದಾದರೆ ಇಂಥ ಬಟ್ಟೆ ಯಾಕೆ ಧರಿಸಬೇಕು ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
Updated on: May 28, 2023 | 9:23 AM

ನಟಿ ಇಶಾ ಗುಪ್ತಾ ಅವರು 2012ರಿಂದಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬೋಲ್ಡ್ ಲುಕ್ ಮೂಲಕ ಅವರು ಆಗಾಗ ಸುದ್ದಿ ಆಗುತ್ತಾರೆ. ಈಗ ಮತ್ತೆ ಅವರು ಅದೇ ಕಾರಣದಿಂದ ಸುದ್ದಿ ಆಗಿದ್ದಾರೆ.

ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಶಾ ಗುಪ್ತಾ ಅವರು ಹಾಜರಿ ಹಾಕಿದ್ದಾರೆ. ಈ ಸಮಾರಂಭದ ಗ್ರೀನ್ ಕಾರ್ಪೆಟ್ ಮೇಲೆ ಅವರು ಪೋಸ್ ನೀಡಿದ್ದಾರೆ. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿದೆ.

ಬೋಲ್ಡ್ ಆದಂತಹ ಬಟ್ಟೆಗಳನ್ನು ಧರಿಸಿದಾಗ ನಟಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸುತ್ತಾಲೂ ಕ್ಯಾಮೆರಾ ಕಣ್ಣುಗಳು ಅಲರ್ಟ್ ಆಗಿದ್ದರಂತೂ ಎಷ್ಟು ಹುಷಾರಾಗಿದ್ದರೂ ಸಾಲದು. ಇಂಥ ಬಟ್ಟೆ ಧರಿಸಿದ ಇಶಾಗೆ ಸ್ವಲ್ಪ ಕಷ್ಟ ಆಗಿದೆ.

ಫ್ಯಾಷನ್ ಶೋಗಳಲ್ಲಿ ಮಾಡೆಲ್ಗಳ ಬಟ್ಟೆ ಕಳಚಿಬಿದ್ದ ಉದಾಹರಣೆ ಸಾಕಷ್ಟಿದೆ. ಹಾಗಾಗಿ ನಾಜೂಕಿನ ಕಾಸ್ಟ್ಯೂಮ್ ಧರಿಸಿದಾಗ ನಟಿಯರು ಮುಕ್ತವಾಗಿ ಓಡಾಡುವುದು ಕಷ್ಟ ಆಗುತ್ತದೆ. ಕಾನ್ ಚಿತ್ರೋತ್ಸವದಲ್ಲೂ ಇಶಾ ಕೂಡ ಕಷ್ಟಪಟ್ಟು ನಡೆದಾಡಿದಂತೆ ಕಂಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಶಾ ಗುಪ್ತಾ ಅವರ ಫೋಟೋಗಳು ವೈರಲ್ ಆಗಿವೆ. ಇವುಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅನೇಕರು ಟ್ರೋಲ್ ಮಾಡಿದ್ದಾರೆ. ಕಷ್ಟ ಆಗುತ್ತದೆ ಎಂದರೆ ಇಂಥ ಬಟ್ಟೆ ಯಾಕೆ ಧರಿಸಬೇಕು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.




